ETV Bharat / state

ಚನ್ನಪಟ್ಟಣದಲ್ಲಿ ಸಿಪಿವೈ ಮಣಿಸಲು ಎನ್​ಡಿಎ ಮೈತ್ರಿಕೂಟ ರಣತಂತ್ರ: ದೋಸ್ತಿಗಳ ಲೆಕ್ಕಾಚಾರ ಏನು? - CHANNAPATANA BY ELECTION

ಬಿಜೆಪಿ - ಜೆಡಿಎಸ್​ ಮೈತ್ರಿ ಪಕ್ಷಗಳು ಶತಾಯಗತಾಯ ಚನ್ನಪಟ್ಟಣ ಕ್ಷೇತ್ರದಲ್ಲಿ ಸಿ.ಪಿ. ಯೋಗೇಶ್ವರ್ ಅವರನ್ನು ಹಣಿಯಲು ವಿಶೇಷ ರಣತಂತ್ರವನ್ನು ರೂಪಿಸಲು ಮುಂದಾಗಿವೆ.

ಬಿಜೆಪಿ, ಜೆಡಿಎಸ್​
ಬಿಜೆಪಿ, ಜೆಡಿಎಸ್​ (ETV Bharat)
author img

By ETV Bharat Karnataka Team

Published : Oct 23, 2024, 10:49 PM IST

ಬೆಂಗಳೂರು: ಬಿಜೆಪಿಗೆ ಗುಡ್ ಬೈ ಹೇಳಿ ಕಾಂಗ್ರೆಸ್ ತೆಕ್ಕೆಗೆ ಜಾರಿರುವ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರ ನಡೆಯಿಂದ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಕೂಟದಲ್ಲಿ ಮತ್ತಷ್ಟು ಗೊಂದಲ ಮೂಡಿದೆ. ಹಾಗಾಗಿ, ಚನ್ನಪಟ್ಟಣದ ಗೆಲುವಿಗೆ ಎನ್​ಡಿಎ ಮೈತ್ರಿಕೂಟ ಹರಸಾಹಸ ಮಾಡಬೇಕಾಗಿದೆ.

ಕೊನೆ ಕ್ಷಣದವರೆಗೂ ಚನ್ನಪಟ್ಟಣಕ್ಕೆ ಎನ್​ಡಿಎ ಅಭ್ಯರ್ಥಿಯಾಗಿ ಯೋಗೇಶ್ವರ್ ಕಣಕ್ಕಿಳಿಯಬಹುದೆಂಬ ಲೆಕ್ಕಾಚಾರ ಇತ್ತು. ಆದರೆ, ಅದು ಹುಸಿಯಾಗಿದ್ದು, ದೋಸ್ತಿ ಪಕ್ಷಗಳು ಶತಾಯಗತಾಯ ಕ್ಷೇತ್ರದಲ್ಲಿ ಯೋಗೇಶ್ವರ್ ಅವರನ್ನು ಹಣಿಯಲು ವಿಶೇಷ ರಣತಂತ್ರವನ್ನು ರೂಪಿಸಲು ಮುಂದಾಗಿವೆ. ಗುರುವಾರ ಮಧ್ಯಾಹ್ನದೊಳಗೆ ಅಭ್ಯರ್ಥಿಯನ್ನು ಘೋಷಣೆ ಮಾಡಬೇಕೆಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಮನವಿ ಮಾಡಿರುವ ಬಿಜೆಪಿ ನಾಯಕರು, ಎದೆಗುಂದದೆ ಚುನಾವಣೆ ಎದುರಿಸಲು ಮಾನಸಿಕವಾಗಿ ಸಿದ್ದರಾಗಬೇಕೆಂದು ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ಇದರ ನಡುವೆ ನಿಖಿಲ್ ಕುಮಾರಸ್ವಾಮಿ ಅವರನ್ನು ಮನೆಗೆ ಕರೆಸಿಕೊಂಡ ಹೆಚ್.ಡಿ.ದೇವೇಗೌಡರು, ಚನ್ನಪಟ್ಟಣ ಚುನಾವಣೆ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ. ಚನ್ನಪಟ್ಟಣ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ನಿಖಿಲ್ ಕುಮಾರಸ್ವಾಮಿ ಅವರಿಗೆ ಗೌಡರು ಸಲಹೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಒಕ್ಕಲಿಗ ಮತಗಳೇ ನಿರ್ಣಾಯಕ: ಚನ್ನಪಟ್ಟಣ ಕ್ಷೇತ್ರದಲ್ಲಿ ಒಕ್ಕಲಿಗ ಮತಗಳೇ ನಿರ್ಣಾಯಕರಾಗಿರುವುದರಿಂದ ಪ್ರಚಾರದ ವೇಳೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನು ಹೆಚ್ಚು ಪ್ರಚಾರಕ್ಕೆ ಕರೆತರಬೇಕೆಂಬ ಸಲಹೆ ಬಂದಿದೆ. ಗೌಡರು ಭಾಷಣ ಮಾಡದಿದ್ದರೂ ಚಿಂತೆ ಇಲ್ಲ. ವೇದಿಕೆಯಲ್ಲಿ ಸುಮ್ಮನೆ ಮತದಾರರಿಗೆ ಭಾವನಾತ್ಮಕವಾಗಿ ಕೈ ಮುಗಿದರೂ ಸಾಕು. ಮತದಾರರು ಅವರ ಮಾತಿಗೆ ಬೆಲೆ ಕೊಟ್ಟು ಎನ್​ಡಿಎ ಅಭ್ಯರ್ಥಿಯನ್ನು ಗೆಲುವಿನ ದಡಕ್ಕೆ ಸೇರಿಸುತ್ತಾರೆಂಬ ಲೆಕ್ಕಾಚಾರ ಬಿಜೆಪಿಯಲ್ಲಿದೆ.

ಈ ಹಿಂದೆ ಲೋಕಸಭಾ ಚುನಾವಣೆಯಲ್ಲಿ ಹಳೇ ಮೈಸೂರು ಭಾಗದದಲ್ಲಿ ಗೌಡರು ಎಲ್ಲೆಲ್ಲಿ ಭಾಷಣ ಮಾಡಿದ್ದರೂ ಅಲ್ಲೆಲ್ಲ ಬಿಜೆಪಿ-ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಗೆದ್ದಿದ್ದಾರೆ. ಚಾಮರಾಜನಗರ ಮತ್ತು ಹಾಸನದಲ್ಲಿ ಎರಡೂ ಪಕ್ಷಗಳ ಸ್ವಯಂಕೃತ ಅಪರಾಧದಿಂದ ಸೋಲುಂಟಾಯಿತು. ಅತ್ಯಂತ ಕಠಿಣ ಎನಿಸಿದ್ದ ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಮೈಸೂರು ಮತ್ತಿತರ ಕಡೆ ಗೌಡರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಡೆಸಿದ ಪ್ರಚಾರದಿಂದ ಅಭ್ಯರ್ಥಿಗಳು ದಾಖಲೆಯ ಮತಗಳ ಅಂತರದಿಂದ ಗೆದ್ದರು.

ಚನ್ನಪಟ್ಟಣದಲ್ಲೂ ಗೌಡರ ಅಸ್ತ್ರವನ್ನು ಬಳಸಿಕೊಂಡರೆ ಅಭ್ಯರ್ಥಿ ಗೆಲುವಿನ ದಾರಿ ಸುಗಮವಾಗಲಿದೆ ಎಂಬ ಅಭಿಪ್ರಾಯ ಎನ್​ಡಿಎ ಮಿತ್ರಕೂಟದಲ್ಲಿ ವ್ಯಕ್ತವಾಗಿದೆ. ಉಪಚುನಾವಣೆಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎಲ್ಲ ರೀತಿಯ ಸಂಪನ್ಮೂಲಗಳನ್ನು ಬಳಸಿಕೊಂಡು ಅಭ್ಯರ್ಥಿ ಗೆಲುವಿಗೆ ಶ್ರಮ ಹಾಕಲಿದ್ದಾರೆ. ಕೇವಲ ಹಣದಿಂದಲೇ ಗೆಲುವು ಸಾಧ್ಯವಿಲ್ಲ ಎಂಬುದಕ್ಕೆ ಲೋಕಸಭಾ ಚುನಾವಣೆಯ ಫಲಿತಾಂಶವೇ ಸಾಕ್ಷಿಯಾಗಿದೆ.

ಈ ಹಿಂದೆ ಚನ್ನಪಟ್ಟಣ ಕ್ಷೇತ್ರಕ್ಕೆ ಹೆಚ್​ ಡಿ ದೇವೇಗೌಡರು ಹಾಗೂ ಹೆಚ್​ ಡಿ ಕುಮಾರಸ್ವಾಮಿ ಅಧಿಕಾರ ಅವಧಿಯಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ಮನವರಿಕೆ ಮಾಡಬೇಕು. ನೀರಾವರಿ, ಕೃಷಿ ಸೇರಿದಂತೆ ಹಲವು ಕ್ಷೇತ್ರಗಳಿಗೆ ನೀಡಿರುವ ಕೊಡುಗೆಗಳನ್ನು ಮುನ್ನಲೆಗೆ ತಂದು ಪ್ರಚಾರ ನಡೆಸಲು ದೋಸ್ತಿ ಪಕ್ಷಗಳು ತೀರ್ಮಾನಿಸಿವೆ.

ಏನೇ ಅಬ್ಬರಿಸಿ ಬೊಬ್ಬರಿಸಿದರೂ ಈಗಿನ ಮತದಾರರು ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ. ಹಾರಾಟ, ಚೀರಾಟ ಯಾವುದೂ ನಡೆಯುವುದಿಲ್ಲ. ಲೋಕಸಭೆ ಚುನಾವಣೆಯಲ್ಲೂ ಇಂಥ ಅಬ್ಬರವನ್ನೇ ನಡೆಸಿದರು. ಬಿಜೆಪಿ ಅಭ್ಯರ್ಥಿ ಡಾ. ಮಂಜುನಾಥ್ ದಾಖಲೆಯ ಮತಗಳಿಂದ ಗೆದ್ದರು. ಈಗಲೂ ಇದೇ ತಂತ್ರವನ್ನು ರೂಪಿಸಬೇಕು. ನಾಮಪತ್ರ ಸಲ್ಲಿಕೆ ಆರಂಭವಾಗುತ್ತಿದ್ದಂತೆ ಮತದಾನ ನಡೆಯುವವರೆಗೂ ಕ್ಷೇತ್ರದಲ್ಲಿ ಬೀಡುಬಿಟ್ಟು, ಪ್ರತಿಯೊಂದು ಹಳ್ಳಿ ಹಳ್ಳಿಗೆ ತೆರಳಿ ಪ್ರಚಾರ ನಡೆಸಲು ಉಭಯ ಪಕ್ಷಗಳು ಸಜ್ಜಾಗಿವೆ. ವಿಶೇಷವಾಗಿ ಬಿಜೆಪಿ-ಜೆಡಿಎಸ್ ನಲ್ಲಿರುವ ಒಕ್ಕಲಿಗ ನಾಯಕರೇ ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆ ಅನಿರೀಕ್ಷಿತವಲ್ಲ, ಅವರಿಗೆ ಒಳ್ಳೆಯದಾಗಲಿ: ಬಿ.ವೈ ವಿಜಯೇಂದ್ರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.