ಚಾಮರಾಜನಗರ:ಶಬರಿಮಲೆ ಯಾತ್ರಿಕರ ಕಾರು ಮರಕ್ಕೆ ಡಿಕ್ಕಿಯಾಗಿ ಕರ್ನಾಟಕದ ಇಬ್ಬರು ಅಯ್ಯಪ್ಪ ಮಾಲಾಧಾರಿಗಳು ಮೃತಪಟ್ಟ ಘಟನೆ ತಮಿಳುನಾಡಿನ ಮೆಟ್ಟುಪಾಳ್ಯಂ - ಸಿರುಮುಗೈ ರಸ್ತೆಯಲ್ಲಿ ಶುಕ್ರವಾರ ಮುಂಜಾನೆ ಸಂಭವಿಸಿದೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ನಾಗರಾಜು (65) ಹಾಗೂ ವೆಂಕಟಾದ್ರಿ (55) ಮೃತಪಟ್ಟವರು. ಘಟನೆಯಲ್ಲಿ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದವರೇ ಆದ ಸ್ವಾಮಿ, ಮಹೇಶ್ ಹಾಗೂ ಕುಮಾರ್ ಎಂಬವರು ತೀವ್ರವಾಗಿ ಗಾಯಗೊಂಡು ಮೆಟ್ಟುಪಾಳ್ಯಂ ಆಸ್ಪತ್ರೆಗೆ ದಾಖಲಾಗಿದ್ದಾರೆ.