ದಾವಣಗೆರೆ:ಚನ್ನಗಿರಿ ತಾಲೂಕಿನ ಬಸವಪಟ್ಟಣ ಹಾಗೂ ಕಂಸಾಗರ, ಹರೋಸಾಗರ ಗ್ರಾಮಗಳಲ್ಲಿ ಒಂದೇ ದಿನ ನಡೆದಿದ್ದ 12 ಮನೆಗಳ್ಳತನ ಪ್ರಕರಣದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಜಂಟಿಯಾಗಿ ಒಟ್ಟು ಮೂರು ಪ್ರಕರಣಗಳು ಬಸವಪಟ್ಟಣ ಠಾಣೆಯಲ್ಲಿ ದಾಖಲಾಗಿದ್ದವು.
ಎಸ್ಪಿ ಉಮಾಪ್ರಶಾಂತ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಕೆಲವು ಮನೆ ಕಳ್ಳತನ ಆಗಿದ್ದವು. ಕೆಲವು ಕಳ್ಳತನದ ಪ್ರಯತ್ನ ನಡೆದಿದ್ದವು. ಈ ಪ್ರಕರಣ ಸಂಬಂಧ ಅಪ್ರಾಪ್ತ ಬಾಲಕ ಸೇರಿ ಇಬ್ಬರನ್ನು ಬಂಧಿಸಲಾಗಿದೆ. ಇನ್ನು ಮೂವರ ಬಂಧನಕ್ಕೆ ಪ್ರಯತ್ನ ನಡೆದಿದೆ. ಬಂಧಿತರಿಂದ 45 ಗ್ರಾಂ ಬಂಗಾರ, 500 ಗ್ರಾಂ ಬೆಳ್ಳಿ, ಎರಡು ಬೈಕ್ ವಶಕ್ಕೆ ಪಡೆಯಲಾಗಿದೆ. ಇವರು ಕಡೂರು ಹಾಗೂ ಬಸವಪಟ್ಟಣದಲ್ಲಿ ಎರಡು ಬೈಕ್ ಕಳ್ಳತನ ಮಾಡಿದ್ದರು. ಬಸವಪಟ್ಟಣ ಕಂಮಸಾಗರ ಒಟ್ಟು 12 ಮನೆಗಳ ಪೈಕಿ 6 ಮನೆಯಲ್ಲಿ ಕಳ್ಳತನ ಆಗಿತ್ತು 6 ಕಡೆ ಕಳ್ಳತನ ಯತ್ನ ವಿಫಲ ಆಗಿತ್ತು. ಬಂಧಿತರು ದಾವಣಗೆರೆಯ ವಿವಿಧ ಠಾಣೆಗಳಲ್ಲಿ ಎರಡು ಮನೆಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ. ಇನ್ನು ಮೂವರು ಬಂಧಿಸಬೇಕಾಗಿದೆ ಎಂದರು.
ಮೈಕ್ರೋ ಪೈನಾನ್ಸ್ ಕಾಟಕ್ಕೆ ಮನೆ ತೊರೆದಿಲ್ಲ:ಚನ್ನಗಿರಿ ತಾಲೂಕಿನ ಶಿವಗಂಗೆನಾಳ್ ಗ್ರಾಮದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ 8 ಕುಟುಂಬಗಳು ಊರು ತೊರೆದಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಚನ್ನಗಿರಿ ಪೋಲಿಸರು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಇದು ಸತ್ಯಕ್ಕೆ ದೂರ ಎಂದು ತಿಳಿದುಬಂದಿದೆ ಎಂದು ಎಸ್ಪಿ ಉಮಾಪ್ರಶಾಂತ್ ಸ್ಪಷ್ಟತೆ ನೀಡಿದ್ದಾರೆ.