ಕರ್ನಾಟಕ

karnataka

ETV Bharat / state

ಮಂಗಳೂರು–ಹಾಸನ ಮಾರ್ಗದಲ್ಲಿ ಗುಡ್ಡ ಕುಸಿತ: 12 ರೈಲುಗಳ ಸೇವೆ ರದ್ದು - Train Cancel - TRAIN CANCEL

ಗುಡ್ಡ ಕುಸಿತ ಹಿನ್ನೆಲೆಯಲ್ಲಿ 12 ರೈಲುಗಳ ಸೇವೆ ರದ್ದುಗೊಂಡಿದೆ ಎಂದು ಪಾಲ್ಗಾಟ್ ರೈಲ್ವೆ ವಿಭಾಗ ಮಾಹಿತಿ ನೀಡಿದೆ.

train
ರೈಲು (IANS)

By ETV Bharat Karnataka Team

Published : Aug 3, 2024, 7:31 PM IST

ಮಂಗಳೂರು: ಮಂಗಳೂರು – ಹಾಸನ ರೈಲ್ವೆ ಮಾರ್ಗದ ಯಡಕುಮರಿ ಮತ್ತು ಕಡಗರವಳ್ಳಿ ಮಧ್ಯೆ ಹಳಿ ಮೇಲೆ ಗುಡ್ಡ ಕುಸಿತವಾಗಿರುವುದರಿಂದ 12 ರೈಲುಗಳ ಸೇವೆಯನ್ನು ರದ್ದುಪಡಿಸಲಾಗಿದೆ ಎಂದು ಪಾಲ್ಗಾಟ್ ರೈಲ್ವೆ ವಿಭಾಗ ತಿಳಿಸಿದೆ.

ರದ್ದಾದ ರೈಲುಗಳ ಮಾಹಿತಿ ಈ ಕೆಳಗಿನಂತಿದೆ.

1. ರೈಲು ಸಂಖ್ಯೆ 16511 ಕೆಎಸ್​ಆರ್​ ಬೆಂಗಳೂರು - ಕಣ್ಣೂರು ಎಕ್ಸ್​ಪ್ರೆಸ್ ಆಗಸ್ಟ್ 04 ಮತ್ತು 05ರಂದು ಸಂಪೂರ್ಣ ರದ್ದುಗೊಂಡಿದೆ.

2. ರೈಲು ಸಂಖ್ಯೆ 16512 ಕಣ್ಣೂರು - ಕೆಎಸ್​ಆರ್ ಬೆಂಗಳೂರು ಎಕ್ಸ್​ಪ್ರೆಸ್ ಆಗಸ್ಟ್ 05 ಮತ್ತು 06ರಂದು ಸಂಪೂರ್ಣ ರದ್ದಾಗಿದೆ.

3. ರೈಲು ಸಂಖ್ಯೆ 16595 ಕೆಎಸ್​ಆರ್ ಬೆಂಗಳೂರು - ಕಾರವಾರ ವಿಶೇಷ ಎಕ್ಸ್​ಪ್ರೆಸ್ ಆಗಸ್ಟ್ 04 ಮತ್ತು 05ರಂದು ಸಂಪೂರ್ಣವಾಗಿ ರದ್ದು ಮಾಡಲಾಗುತ್ತದೆ.

4. ರೈಲು ಸಂಖ್ಯೆ 16596 ಕಾರವಾರ - ಕೆಎಸ್ಆರ್ ಬೆಂಗಳೂರು ಎಕ್ಸ್​ಪ್ರೆಸ್ ಪ್ರಯಾಣವು ಆಗಸ್ಟ್ 05 ಮತ್ತು 06ರಂದು ಸಂಪೂರ್ಣ ರದ್ದು.

5. ರೈಲು ಸಂಖ್ಯೆ 16585 ಎಸ್​ಎಂವಿಟಿ ಬೆಂಗಳೂರು - ಮುರ್ಡೇಶ್ವರ ಎಕ್ಸ್​ಪ್ರೆಸ್ ಪ್ರಯಾಣ ಆಗಸ್ಟ್ 04 ಮತ್ತು 05ರಂದು ಸಂಪೂರ್ಣ ರದ್ದು ಮಾಡಲಾಗಿದೆ.

6. ರೈಲು ಸಂಖ್ಯೆ 16586 ಮುರ್ಡೇಶ್ವರ - ಎಸ್​ಎಂವಿಟಿ ಬೆಂಗಳೂರು ಎಕ್ಸ್​ಪ್ರೆಸ್ ಪ್ರಯಾಣ ಆ. 05 ಮತ್ತು 06ರಂದು ಸಂಪೂರ್ಣ ರದ್ದಾಗಿದೆ.

7. ರೈಲು ಸಂಖ್ಯೆ 07377 ವಿಜಯಪುರ - ಮಂಗಳೂರು ಸೆಂಟ್ರಲ್ ಎಕ್ಸ್​ಪ್ರೆಸ್ ಪ್ರಯಾಣವು ಆಗಸ್ಟ್ 04 ಮತ್ತು 05ರಂದು ಸಂಪೂರ್ಣ ರದ್ದುಗೊಂಡಿದೆ.

8. ರೈಲು ಸಂಖ್ಯೆ 07378 ಮಂಗಳೂರು ಸೆಂಟ್ರಲ್ - ವಿಜಯಪುರ ವಿಶೇಷ ಎಕ್ಸ್​ಪ್ರೆಸ್ ಆಗಸ್ಟ್ 05 ಮತ್ತು 06ರಂದು ರದ್ದಾಗಿದೆ.

9. ರೈಲು ಸಂಖ್ಯೆ 16515 ಯಶವಂತಪುರ ಜಂಕ್ಷನ್ - ಕಾರವಾರ ಎಕ್ಸ್​ಪ್ರೆಸ್ ಪ್ರಯಾಣವು ಆಗಸ್ಟ್ 05ರಂದು ರದ್ದು ಮಾಡಲಾಗಿದೆ.

10. ರೈಲು ಸಂಖ್ಯೆ 16516 ಕಾರವಾರ - ಯಶವಂತಪುರ ಜಂಕ್ಷನ್ ಎಕ್ಸ್​ಪ್ರೆಸ್ ಪ್ರಯಾಣ ಆಗಸ್ಟ್ 06ರಂದು ಸಂಪೂರ್ಣ ರದ್ದುಗೊಂಡಿದೆ.

11. ರೈಲು ಸಂಖ್ಯೆ 16575 ಯಶವಂತಪುರ ಜಂಕ್ಷನ್ - ಮಂಗಳೂರು ಜಂಕ್ಷನ್ ಎಕ್ಸ್​ಪ್ರೆಸ್ ಪ್ರಯಾಣ ಆಗಸ್ಟ್ 04ರಂದು ರದ್ದಾಗಿದೆ.

12. ರೈಲು ಸಂಖ್ಯೆ 16576 ಮಂಗಳೂರು ಜಂಕ್ಷನ್ - ಯಶ್ವಂತಪುರ ಜಂಕ್ಷನ್ ಎಕ್ಸ್​ಪ್ರೆಸ್ ಆಗಸ್ಟ್ 05ರಂದು ರದ್ದುಗೊಂಡಿದೆ.

ಇದನ್ನೂ ಓದಿ:ರಾಜ್ಯದಲ್ಲಿ ಮುಂದುವರೆದ ಮಳೆ ತೀವ್ರತೆ: ಈ ಜಿಲ್ಲೆಗಳಿಗೆ ಅಲರ್ಟ್ ಘೋಷಣೆ - Karnataka Rain Forecast

ABOUT THE AUTHOR

...view details