ಕರ್ನಾಟಕ

karnataka

ತುಂಗಭದ್ರಾ ಡ್ಯಾಂ ಗೇಟ್ ಚೈನ್ ಲಿಂಕ್ ಕಟ್: 2 ಲಕ್ಷ ಕ್ಯೂಸೆಕ್​ ನೀರು ಹರಿಬಿಡುವ ಸಾಧ್ಯತೆ - Tungabhadra Dam

By ETV Bharat Karnataka Team

Published : Aug 11, 2024, 12:00 PM IST

ತುಂಗಭದ್ರಾ ಜಲಾಶಯದ ಗೇಟ್​ವೊಂದರ ಚೈನ್ ಲಿಂಕ್ ಕಟ್​ ಆದ ಹಿನ್ನೆಲೆ ಜಲಾಶಯದ 20 ಗೇಟ್​ಗಳಿಂದ ನದಿಗೆ ಲಕ್ಷಾಂತರ ಕ್ಯೂಸೆಕ್​ ನೀರು ಹರಿಬಿಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

tungabhadra dam
ತುಂಗಭದ್ರಾ ಡ್ಯಾಂ (ETV Bharat)

ತುಂಗಭದ್ರಾ ಡ್ಯಾಂ ಗೇಟ್ ಚೈನ್ ಲಿಂಕ್ ಕಟ್ ಬಗ್ಗೆ ಸಿಇ ಎಲ್.​ಬಸವರಾಜ ಹೇಳಿಕೆ (ETV Bharat)

ಕೊಪ್ಪಳ:ತುಂಗಭದ್ರಾ ಜಲಾಶಯದ 19ನೇ ಗೇಟ್​ ಚೈನ್ ಲಿಂಕ್ ಶನಿವಾರ ತಡರಾತ್ರಿ ಕಟ್​ ಆದ ಹಿನ್ನೆಲೆಯಲ್ಲಿ ಜಲಾಶಯದ 20 ಗೇಟ್​ಗಳಿಂದ ನದಿಗೆ 2 ಲಕ್ಷ ಕ್ಯೂಸೆಕ್​ಗೂ ಅಧಿಕ ನೀರು ಹರಿಬಿಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ತುಂಗಭದ್ರಾ ಜಲಾಶಯದ 69 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯಾಗಿದೆ. ಸದ್ಯ ಜಲಾಶಯದಲ್ಲಿ ಅಪಾರ ಪ್ರಮಾಣದ ನೀರು ತುಂಬಿದ್ದು, ಒಂದೇ ಗೇಟ್​ಗೆ ಒತ್ತಡ ಹೆಚ್ಚಲಿದೆ‌. ಇದನ್ನು ನಿಯಂತ್ರಿಸಲು ಸುಮಾರು 60ರಿಂದ 70 ಟಿಎಂ​ಸಿ ನೀರು ಹೊರಬಿಡಲೇಬೇಕು ಎಂದು ಜಲಾಶಯದ ತಾಂತ್ರಿಕ ತಂಡ ಹೇಳುತ್ತಿದೆ‌.

ತುಂಗಭದ್ರಾ ನೀರಾವರಿ ವಲಯದ ಸಿಇ ಎಲ್.​ಬಸವರಾಜ ಮಾತನಾಡಿ, "19ನೇ ಕ್ರಸ್ಟ್​ ಗೇಟ್​ನಲ್ಲಿ ಒಂದು ಕಡೆ ಡಿಲಿಂಕ್​ ಆಗಿ ನೀರಿನ ರಭಸಕ್ಕೆ ಸ್ವಲ್ಪ ಮುಂದಕ್ಕೆ ಹೊರಟು ಹೋಗಿದೆ. ಅದರಿಂದಾಗಿ ಸುಮಾರು 20ರಿಂದ 30 ಸಾವಿರ ಕ್ಯೂಸೆಕ್​ ನೀರು ನದಿಗೆ ಹರಿದು ಹೋಗುತ್ತಿದೆ. ಎಲ್ಲಾ ಗೇಟ್​ಗಳನ್ನು ತೆರೆದು ಒಂದೇ ಕಡೆ ಬೀಳುವುದರಿಂದ ಉಂಟಾಗುವ ಒತ್ತಡವನ್ನು ತಡೆಯಬೇಕಾಗಿದೆ. ಪರಿಣಿತರು ಪರಿಶೀಲಿಸಿದ ಬಳಿಕ, ಅಗತ್ಯ ಕ್ರಮ ವಹಿಸಲಾಗುವುದು. ಪ್ರತಿ ವರ್ಷ ಜಲಾಶಯವನ್ನು ಸೂಕ್ತವಾಗಿ ಪರಿಶೀಲಿಸಿ, ಕಾಪಾಡಿಕೊಂಡು ಬಂದಿದ್ದೇವೆ. ಇದರಿಂದ ಜಲಾಶಯಕ್ಕೆ ಯಾವುದೇ ತೊಂದರೆ ಇಲ್ಲ" ಎಂದು ತಿಳಿಸಿದರು.

ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, "ತುಂಗಭದ್ರಾ ಅಣೆಕಟ್ಟಿನಲ್ಲಿ ಚೈನ್ ​ಲಿಂಕ್​ ಕಟ್​ ಆಗಿರುವುದರಿಂದ 1 ಗೇಟ್​ನಲ್ಲಿ ಸುಮಾರು 31 ಸಾವಿರ ಕ್ಯೂಸೆಕ್​ ನೀರು ಹರಿದು ಹೋಗುತ್ತಿದೆ. ಅಧಿಕಾರಿಗಳು, ಜಿಲ್ಲಾಧಿಕಾರಿ ಹಾಗೂ ಪೊಲೀಸ್​​ ವರಿಷ್ಠಾಧಿಕಾರಿಗಳು ಹಾಗೂ ಜಲಸಂಪನ್ಮೂಲ ಸಚಿವರಿಗೆ ಸಂಪರ್ಕ ಮಾಡುವಂತಹ ಕೆಲಸ ಮಾಡಿದ್ದೇವೆ. ಉಳಿದ ಗೇಟ್​ಗಳನ್ನು ತೆರೆದು ಜಲಾಶಯದಲ್ಲಿ ಒಳಹರಿವನ್ನು ನಿಯಂತ್ರಿಸಿ, ಹೊರಹರಿವು ಹೆಚ್ಚು ಮಾಡುವ ಕೆಲಸವನ್ನು ಅಧಿಕಾರಿಗಳು ಮಾಡಿದ್ದಾರೆ" ಎಂದರು.

ಇದನ್ನೂ ಓದಿ:ತುಂಗಭದ್ರಾ ಅಣೆಕಟ್ಟೆ ಕ್ರಸ್ಟ್​​ ಗೇಟ್​ ಚೈನ್​ಲಿಂಕ್​ ಕಟ್​; ನದಿ ಪಾತ್ರದ ಜನರಲ್ಲಿ ಆತಂಕ - Tungabhadra Dam

ABOUT THE AUTHOR

...view details