ಕರ್ನಾಟಕ

karnataka

ETV Bharat / state

ಬೆಳಗಾವಿ: ರೈಲಿನಲ್ಲಿ ಚಾಕು ಇರಿತ ಪ್ರಕರಣ, ಸಿಸಿ ಕ್ಯಾಮರಾದಲ್ಲಿ ಆರೋಪಿ ಸೆರೆ; ರೇಖಾಚಿತ್ರ ಬಿಡುಗಡೆ - STABBING CASE

ಬೆಳಗಾವಿ ರೈಲಿನಲ್ಲಿ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಸಿಸಿ ಕ್ಯಾಮರಾದಲ್ಲಿ ಆರೋಪಿಯ ದೃಶ್ಯ ಸೆರೆಯಾಗಿದ್ದು, ಪೊಲೀಸರು ಆರೋಪಿಯ ರೇಖಾಚಿತ್ರವನ್ನು ಬಿಡುಗಡೆ ಮಾಡಿದ್ದಾರೆ.

ACCUSED CAUGHT  CC CAMERA  DIAGRAM RELEASED  BELAGAVI
ಸಿಸಿ ಕ್ಯಾಮೆರಾದಲ್ಲಿ ಆರೋಪಿ ಸೆರೆ (ಕೃಪೆ: ETV Bharat)

By ETV Bharat Karnataka Team

Published : May 18, 2024, 12:48 PM IST

Updated : May 18, 2024, 2:34 PM IST

ಸಿಸಿ ಕ್ಯಾಮರಾದಲ್ಲಿ ಆರೋಪಿ ಸೆರೆ (ಕೃಪೆ: ETV Bharat)

ಬೆಳಗಾವಿ: ಚಲಿಸುವ ರೈಲಿನಲ್ಲಿ ಮಾರಣಾಂತಿಕ ಹಲ್ಲೆಗೈದು ಆರೋಪಿ ಪರಾರಿಯಾಗಿದ್ದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸಿಸಿ ಕ್ಯಾಮರಾ ದೃಶ್ಯ ಆಧರಿಸಿ ಆರೋಪಿಯ ರೇಖಾ ಚಿತ್ರವನ್ನು ರೈಲ್ವೆ ಇಲಾಖೆ ಸಿದ್ಧಪಡಿಸಿ ಬಿಡುಗಡೆಗೊಳಿಸಿದ್ದಾರೆ.

ಎರಡು ದಿನಗಳ ಹಿಂದೆ ಖಾನಾಪುರ ತಾಲ್ಲೂಕಿನ ಲೋಂಡಾದಲ್ಲಿ ಚಾಲುಕ್ಯ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಈ ಘಟನೆ ನಡೆದಿತ್ತು. ಟಿಕೆಟ್ ತೋರಿಸು ಎಂದಿದ್ದಕ್ಕೆ ರೈಲ್ವೆ ಇಲಾಖೆ ಸಿಬ್ಬಂದಿ ಮೇಲೆ ಅಪರಿಚಿತ ಮುಸುಕುಧಾರಿ ವ್ಯಕ್ತಿ ಚೂರಿಯಿಂದ ದಾಳಿ ಮಾಡಿದ್ದ. ಘಟನೆಯಲ್ಲಿ ನಾಲ್ವರು ರೈಲ್ವೆ ಸಿಬ್ಬಂದಿ ಹಾಗೂ ಓರ್ವ ಪ್ರಯಾಣಿಕನ ಮೇಲೆ ದಾಳಿ ಆಗಿತ್ತು.

ಸಿಸಿ ಕ್ಯಾಮೆರಾದಲ್ಲಿ ಆರೋಪಿ ಸೆರೆ (ಕೃಪೆ: ETV Bharat)

ಚಿಕಿತ್ಸೆ ಫಲಿಸದೇ ಉತ್ತರ ಪ್ರದೇಶ ರಾಜ್ಯದ ಝಾನ್ಸಿ ಮೂಲದ ಕೋಚ್ ಅಟೆಂಡರ್ ದೇವ‌ಋಷಿ ವರ್ಮಾ (23) ಮೃತಪಟ್ಟಿದ್ದರು. ಸದ್ಯ ಆರೋಪಿ ರೇಖಾಚಿತ್ರ ಹಾಗೂ ಸಿಸಿ ಕ್ಯಾಮರಾ ದೃಶ್ಯಗಳು ಲಭ್ಯವಾಗಿವೆ.

ಸಿಸಿ ಕ್ಯಾಮೆರಾದಲ್ಲಿ ಆರೋಪಿ ಸೆರೆ (ಕೃಪೆ: ETV Bharat)

ಟಿಸಿ ಅಶ್ರಫ್ ಅಲಿ ಕಿತ್ತೂರು ಸೇರಿ ಇನ್ನುಳಿದ ಮೂವರೂ ಗುಣಮುಖರಾಗಿದ್ದು, ಜಿಲ್ಲಾಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಘಟನೆ ನಡೆದು ಎರಡು ದಿನ ಕಳೆದರೂ ಹಂತಕನ ಸುಳಿವು ಸಿಕ್ಕಿರಲಿಲ್ಲ. ರೈಲ್ವೆ ಪೊಲೀಸರಿಂದ ವಿಶೇಷ ತಂಡ ರಚಿಸಲಾಗಿದ್ದು, ಆರೋಪಿ ಶೋಧಕ್ಕೆ ಪಾಂಡಿಚೇರಿಗೆ ತಂಡ ತೆರಳಿದೆ.

ಓದಿ:ಚಲಿಸುತ್ತಿದ್ದ ಬಸ್‌ಗೆ ತಗುಲಿದ ಬೆಂಕಿ: 8 ಜನ ಸಜೀವ ದಹನ, 24ಕ್ಕೂ ಹೆಚ್ಚು ಮಂದಿಗೆ ಗಾಯ - FIRE IN BUS

Last Updated : May 18, 2024, 2:34 PM IST

ABOUT THE AUTHOR

...view details