ಕರ್ನಾಟಕ

karnataka

ETV Bharat / state

ಜೋಗಕ್ಕೆ ಇಂದು 50 ಸಾವಿರ ಪ್ರವಾಸಿಗರ ಲಗ್ಗೆ: ಜಲಪಾತದ ವೈಭವ ಕಣ್ತುಂಬಿಕೊಂಡ ಜನ - tourists rushed to jog falls - TOURISTS RUSHED TO JOG FALLS

ಶರಾವತಿ ನದಿ ಪಾತ್ರದಲ್ಲಿ ಉತ್ತಮ ಮಳೆಯಾಗುತ್ತಿದೆ. ಈ ನಿಟ್ಟಿನಲ್ಲಿ ಇಂದು ಜಗತ್ ಪ್ರಸಿದ್ಧ ಜೋಗ ಜಲಪಾತವನ್ನು ನೋಡಲು ಪ್ರವಾಸಿಗರು ಆಗಮಿಸಿದ್ದರು.

tourists rushed to jog falls
ಜೋಗ ಜಲಪಾತ ನೋಡಲು ಆಗಮಿಸಿದ ಜನ (ETV Bharat)

By ETV Bharat Karnataka Team

Published : Jul 14, 2024, 9:38 PM IST

ಜೋಗ ಜಲಪಾತ ನೋಡಲು ಸೇರಿದ ಜನ ಸಾಗರ (ETV Bharat)

ಶಿವಮೊಗ್ಗ:ಜಗತ್ ಪ್ರಸಿದ್ಧ ಜೋಗ ಜಲಪಾತವನ್ನು ನೋಡಲು ಇಂದು ಜನ ಸಾಗರವೇ ಹರಿದು ಬಂದಿದೆ. ಶರಾವತಿ ನದಿ ಪಾತ್ರದಲ್ಲಿ ಉತ್ತಮ ಮಳೆಯಾಗುತ್ತಿದೆ. ಇದರಿಂದ ಜೋಗ ಜಲಪಾತದ ರಾಜ, ರಾಣಿ, ರೋರರ್ ಲೇಡಿ, ರಾಕೆಟ್​ಗಳು ದುಮ್ಮಿಕ್ಕಿ ಹರಿಯುತ್ತಿವೆ.

ಮಳೆಗಾಲದ ಹಿನ್ನೆಲೆಯಲ್ಲಿ ಜೋಗ ಜಲಪಾತದ ನಯನ ಮನೋಹರ ದೃಶ್ಯ ನೋಡಲು ಇಂದು ಪ್ರವಾಸಿಗರ ದಂಡೆ ಆಗಮಿಸುತ್ತಿದೆ. ಅದರಲ್ಲೂ ಇಂದು ಭಾನುವಾರ ಬೆಳಗ್ಗೆಯಿಂದಲೇ ಜೋಗ ಜಲಪಾತವನ್ನು ನೋಡಲು ಜನಸಾಗರವೇ ಹರಿದು ಬಂದಿತ್ತು.

ಜೋಗ ಜಲಪಾತ ನೋಡಲು ಸೇರಿದ ಜನ ಸಾಗರ (ETV Bharat)

ಇಂದು ಜೋಗ ಜಲಪಾತವನ್ನು ನೋಡಲು ಸುಮಾರು 50 ಸಾವಿರ ಪ್ರವಾಸಿಗರು ಆಗಮಿಸಿದ್ದರು. ಪ್ರವಾಸಿಗರು ಒಮ್ಮೆಲೆ ಆಗಮಿಸಿದ ಕಾರಣಕ್ಕೆ ಜೋಗ ಜಲಪಾತದ ಗೇಟ್​ನಲ್ಲಿ ನೂಕು ನುಗ್ಗಲು ಉಂಟಾಗಿತ್ತು. ಪ್ರವಾಸಿಗರು ಸರದಿ ಸಾಲಿನಲ್ಲಿ ನಿಂತು ಟಿಕೆಟ್ ಖರೀದಿಸಿ, ಜೋಗ ಜಲಪಾತದ ಸೌಂದರ್ಯವನ್ನು ಸವಿದರು.

ಪ್ರವಾಸಿಗರು ತಮ್ಮ ವಾಹನವನ್ನು ಪಾರ್ಕಿಂಗ್ ಮಾಡಲು ಪರದಾಡುವಂತಾಯಿತು. ಜೋಗದಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವುದರಿಂದ ಪ್ರವಾಸಿಗರಿಗೆ ಸ್ವಲ್ಪ ಅಡಚಣೆ ಉಂಟಾಗಿತ್ತು.

ಇದನ್ನೂ ಓದಿ :ಹುಬ್ಬಳ್ಳಿ - ಜೋಗ್ ಫಾಲ್ಸ್ ನಡುವೆ ವಿಶೇಷ ಬಸ್​ಗೆ ಹೆಚ್ಚಿದ ಬೇಡಿಕೆ; ಬಸ್​ಗಳ ಸಂಖ್ಯೆ ಹೆಚ್ಚಳ - Jog Falls buses increased

ABOUT THE AUTHOR

...view details