ಕರ್ನಾಟಕ

karnataka

ಪೋಕ್ಸೋ ಕೇಸ್ ಮುಚ್ಚಿ ಹಾಕಲು ಮುಡಾ, ವಾಲ್ಮೀಕಿ ಹಗರಣದ ವಿಚಾರ ತೆಗೆದಿದ್ದಾರೆ: ಸಚಿವ ಪ್ರಿಯಾಂಕ ಖರ್ಗೆ - Minister Priyanka Kharge Reaction

By ETV Bharat Karnataka Team

Published : Jul 12, 2024, 5:46 PM IST

ಪೋಕ್ಸೋ ಕೇಸ್ ಮುಚ್ಚಿ ಹಾಕಲು ಬಿಜೆಪಿ ಮುಡಾ ಮತ್ತು ವಾಲ್ಮೀಕಿ ಹಗರಣದ ವಿಚಾರ ತೆಗೆದಿದೆ ಎಂದು ಸಚಿವ ಪ್ರಿಯಾಂಕ ಖರ್ಗೆ ಆರೋಪಿಸಿದರು.

MINISTER PRIYANKA KHARGE  BJP HAS RAISED THE ISSUE  MUDA AND VALMIKI SCAM  BENGALURU
ಸಚಿವ ಪ್ರಿಯಾಂಕ ಖರ್ಗೆ (ETV Bharat)

ಸಚಿವ ಪ್ರಿಯಾಂಕ ಖರ್ಗೆ ಹೇಳಿಕೆ (ETV Bharat)

ಬೆಂಗಳೂರು: ಪೋಕ್ಸೋ ಕೇಸ್ ಮುಚ್ಚಿಹಾಕಲು ಬಿಜೆಪಿ ಮುಡಾ ಮತ್ತು ವಾಲ್ಮೀಕಿ ಹಗರಣ ವಿಚಾರ ತೆಗೆದಿದ್ದಾರೆ ಅಷ್ಟೇ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಪ್ರತಿಭಟನೆ ವಿಚಾರವಾಗಿ ಮಾತನಾಡಿದ ಅವರು, ಯಡಿಯೂರಪ್ಪ ಪೋಕ್ಸೋ ಕೇಸ್ ಮುಚ್ಚಿ ಹಾಕಲು ಇದೀಗ ಪ್ರತಿಭಟನೆ ಮಾಡ್ತಿದ್ದಾರೆ. ಬಿಜೆಪಿಯವರು ಯಡಿಯೂರಪ್ಪ ಹೆಸರು ಎತ್ತುತ್ತಿಲ್ಲ. ನಮ್ಮ ತನಿಖೆ ಆಗೊವರೆಗೂ ಅವರು ಕಾಯಬೇಕಿತ್ತು. ಬಿಜೆಪಿಯವರಿಗೆ ಬಹಳ ಆತಂಕ ಇದೆ. ಐಟಿ ಕರೆಸುವುದು, ಇಡಿ ಕರೆಸುವುದು, ಸಿಬಿಐ ಕರೆಸುವುದು ಮಾಡುತ್ತಿದ್ದಾರೆ. ಅವರ ಸರ್ಕಾರದಲ್ಲಿ ಆದ ಹಗರಣಕ್ಕೆ ಒಂದಕ್ಕೂ ಅವರು ಇಡಿ ಕರೆಸಿಲ್ಲ ಎಂದು ತಿಳಿಸಿದರು.‌

ಮುನ್ನೆಚ್ಚರಿಕೆ ಕ್ರಮವಾಗಿ ಬಿಜೆಪಿಯವರನ್ನ ವಶಕ್ಕೆ ಪಡೆದಿದ್ದಾರೆ. ನಮಗೂ ಇವರು ಮಾಡಿರಲಿಲ್ವಾ?. ನನಗೆ ನೋಟಿಸ್ ಕಳುಹಿಸಿದ್ರು. ಮುಡಾದ ಬಗ್ಗೆ ಪ್ರತಿಭಟನೆ ಮಾಡ್ತಾರೆ.. ಇದು ಯಾರ ಕಾಲದಲ್ಲಿ ಆಗಿದ್ದು, ಯಾರು ಮಾಡಿದ್ದು, ಅದರ ಬಗ್ಗೆ ಏಕೆ ಪ್ರಶ್ನೆ ಮಾಡ್ತಿಲ್ಲ. ಯಡಿಯೂರಪ್ಪ ಅವರು 2011ರಲ್ಲಿ ಸ್ಪೀಕರ್​ಗೆ ಒಂದು ನೋಟ್ ಕೊಟ್ಟಿದ್ರು. ಅದರ ಬಗ್ಗೆ ಏಕೆ ತನಿಖೆ ಮಾಡಿಲ್ಲ ಎಂದು ಪ್ರಶ್ನಿಸಿದರು.

ಬಿಜೆಪಿಯವರು ಇದರ ಬಗ್ಗೆ ಮಾತನಾಡುತ್ತಿದ್ದಾರೆ. ಪೋಕ್ಸೋ ಕೇಸ್ ಬಗ್ಗೆ ಯಾರು ಮಾತನಾಡುವುದಿಲ್ಲ. ಇದರ ಬಗ್ಗೆ ಏಕೆ ಮಾತಾಡ್ತಿಲ್ಲ?. ಯಡಿಯೂರಪ್ಪ ಅವರ ಬಗ್ಗೆ ಏಕೆ ಯಾರು ಮಾತನಾಡಲ್ಲ?. ಬಿಜೆಪಿಯವರ ಹಗರಣದ ಆಳ, ಅಗಲ ದೊಡ್ಡದಿದೆ ಎಂದು ಕಿಡಿ ಕಾರಿದರು.

ಇಡಿ ದಾಳಿ ರಾಜಕೀಯ ಪ್ರೇರಿತ: ನಾಗೇಂದ್ರ ಅವರು ಇದರಲ್ಲಿ ನನ್ನ ಕೈವಾಡ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಐಟಿ, ಇಡಿ ಕೇಂದ್ರ ಸರ್ಕಾರದ ಕೈಗೊಂಬೆ. ಮೊನ್ನೆ ಜಾರ್ಖಂಡ್ ಸಿಎಂ ಜೈಲಿಗೆ ಹಾಕಿದ್ರು. ಸುಪ್ರೀಂಕೋರ್ಟ್‌ ಯಾವ ಆಧಾರದಲ್ಲಿ ಜೈಲಿಗೆ ಹಾಕಿದ್ರಿ ಎಂದು ಕೇಳಿದ್ರು. ಅವರನ್ನು ಹೊರಗೆ ಬಿಟ್ಟಿಲ್ವಾ?. ಈಗ ಈ ಪ್ರಕರಣದಲ್ಲಿ ಏನು ದಾಖಲೆಗಳನ್ನು ಕೊಟ್ಟಿದ್ದಾರೆ. ಏನಿದೆ ನೋಡೋಣ. ನಾವು ಇದರಲ್ಲಿ ಯಾವ ಹಸ್ತಕ್ಷೇಪವೂ ಮಾಡೋಲ್ಲ ಎಂದರು.

ಹಗರಣ ನಡೆದಿಲ್ಲ ಎಂದು ಹೇಳ್ತೀಲ್ಲ. ಇದರಲ್ಲಿ ನಾಗೇಂದ್ರ, ದದ್ದಲ್ ಕೈವಾಡ ಇಲ್ಲ. ಒಂದು ಜೀವ ಹೋಗಿದೆ. ಅದಕ್ಕೆ ಬೆಲೆ ಕಟ್ಟಲು ಆಗಲ್ಲ. ಈಗ ತನಿಖೆ ನಡೆಯುತ್ತಿದೆ. ತನಿಖೆಯಲ್ಲಿ ಏನು ಹೊರಗಡೆ ಬರುತ್ತೆ ನೋಡೋಣ ಎಂದು ವಾಗ್ದಾಳಿ ನಡೆಸಿದರು.

ಓದಿ:ವಾಲ್ಮೀಕಿ ನಿಗಮದ ಅಕ್ರಮ ಪ್ರಕರಣ: ಮಾಜಿ ಸಚಿವ ಬಿ.ನಾಗೇಂದ್ರ ED ವಶಕ್ಕೆ - ED Detained B Nagendra

ABOUT THE AUTHOR

...view details