ETV Bharat / entertainment

ನವೆಂಬರ್​ಗೆ ಬರ್ತಾನೆ 'ಆರಾಮ್ ಅರವಿಂದ ಸ್ವಾಮಿ': ಅಭಿಷೇಕ್ ಶೆಟ್ಟಿ, ಅನೀಶ್ ತೇಜೇಶ್ವರ್ ಸಿನಿಮಾ ನೋಡಲು ನೀವ್​ ರೆಡಿನಾ? - Aaraam Aravind Swamy - AARAAM ARAVIND SWAMY

ಬಹುನಿರೀಕ್ಷಿತ 'ಆರಾಮ್ ಅರವಿಂದ ಸ್ವಾಮಿ' ನವೆಂಬರ್​​ನಲ್ಲಿ ತೆರೆಕಾಣಲಿದೆ. ಇತ್ತೀಚೆಗೆ ಅನಾವರಣಗೊಂಡಿರುವ ಪೋಸ್ಟರ್ ವಿಭಿನ್ನವಾಗಿದ್ದು, ಸೋಷಿಯಲ್​ ಮೀಡಿಯಾದಲ್ಲಿ ಹವಾ ಎಬ್ಬಿಸುತ್ತಿದೆ.

Aaraam aravind swamy Poster
ಆರಾಮ್ ಅರವಿಂದ ಸ್ವಾಮಿ ಪೋಸ್ಟರ್ (ETV Bharat)
author img

By ETV Bharat Entertainment Team

Published : Sep 9, 2024, 5:31 PM IST

ಸಿನಿಮಾ ಅನ್ನೋದೇ ಒಂದು ಸವಾಲು. ಈ ಸವಾಲನ್ನು ಸ್ವೀಕರಿಸಿ ಅಖಾಡಕ್ಕಿಳಿದ ಮೇಲೆ ಪ್ರೇಕ್ಷಕರಿಗೆ ತಮ್ಮ ಸಿನಿಮಾವನ್ನು ತಲುಪಿಸುವುದು ಮತ್ತೊಂದು ದೊಡ್ಡ ಸವಾಲು. ತಮ್ಮ ಚಿತ್ರವನ್ನು ಚಿತ್ರಪ್ರೇಮಿಗಳಿಗೆ ತಲುಪಿಸಲು ಪ್ರಚಾರ ಬಹಳ‌ ಮುಖ್ಯ. ಈ ವಿಚಾರದಲ್ಲಿ 'ಆರಾಮ್ ಅರವಿಂದ ಸ್ವಾಮಿ' ಬಳಗ ತಮ್ಮ ಕ್ರಿಯೇಟಿವಿಟಿ ಮೂಲಕ ಸಿನಿಪ್ರಿಯರ ಗಮನ ಸೆಳೆಯುತ್ತಿದೆ.

ಆರಂಭದಿಂದಲೂ ವಿಭಿನ್ನ ಪ್ರಚಾರದ ಮೂಲಕ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಿಸಿರುವ ಆರಾಮ್ ಅರವಿಂದ ಸ್ವಾಮಿ ಸಿನಿಮಾ ತೆರೆಕಾಣಲು ಸಜ್ಜಾಗಿದೆ. ನವೆಂಬರ್​ನಲ್ಲಿ ಅಭಿಷೇಕ್ ಶೆಟ್ಟಿ ಹಾಗೂ ಅನೀಶ್ ತೇಜೇಶ್ವರ್ ಕಾಂಬೋದ ಸಿನಿಮಾ ಬಿಡುಗಡೆ ಅಗಲಿದೆ. ಇತ್ತೀಚೆಗೆ ಅನಾವರಣಗೊಂಡಿರುವ ಪೋಸ್ಟರ್ ವಿಭಿನ್ನವಾಗಿದ್ದು, ಸೋಷಿಯಲ್​ ಮೀಡಿಯಾದಲ್ಲಿ ಚರ್ಚೆ ಹುಟ್ಟು ಹಾಕಿದೆ.

ಮಾಸ್ ಸಿನಿಮಾಗಳಲ್ಲಿಯೇ ಹೆಚ್ಚಾಗಿ ನಟಿಸಿರುವ ಅನೀಶ್ ಅವರು 'ಆರಾಮ್ ಅರವಿಂದ್ ಸ್ವಾಮಿ' ಸಿನಿಮಾ ಮೂಲಕ ರೊಮ್ಯಾಂಟಿಕ್ ಕಾಮಿಡಿ ಕಥಾಹಂದರವನ್ನು ಪ್ರೇಕ್ಷಕರಿಗೆ ಉಣಬಡಿಸಲಿದ್ದಾರೆ. ನಮ್ ಗಣಿ ಬಿಕಾಂ ಪಾಸ್, ಗಜಾನನ ಅಂಡ್ ಗ್ಯಾಂಗ್ ಸಿನಿಮಾ ಮೂಲಕ ಭರವಸೆ ಮೂಡಿಸಿರುವ ಅಭಿಷೇಕ್ ಶೆಟ್ಟಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

ಇದನ್ನೂ ಓದಿ: ಮೋಹಕತಾರೆ ರಮ್ಯಾ ಮದುವೆ ವದಂತಿ: 'ಇದು ಫೇಕ್'​​ ಎಂದ ನಟಿಯ ಆಪ್ತೆ - Ramya Wedding Rumors

ಅನೀಶ್‌ ಅವರಿಗೆ ಮಿಲನಾ ನಾಗರಾಜ್ ಹಾಗೂ ಹೃತಿಕ ಶ್ರೀನಿವಾಸ್ ನಾಯಕಿಯರಾಗಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾಗೆ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಟ್ಯೂನ್ ಹಾಕಿದ್ದಾರೆ. ಹೀಗಾಗಿ ಸಂಗೀತಪ್ರಿಯರು ಒಳ್ಳೊಳ್ಳೆ ಹಾಡುಗಳನ್ನು ನಿರೀಕ್ಷೆ ಮಾಡಬಹುದು. 'ಅಕಿರ' ಸಿನಿಮಾ ನಿರ್ಮಿಸಿದ್ದ ಶ್ರೀಕಾಂತ್ ಪ್ರಸನ್ನ ಹಾಗೂ ಗುಳ್ಟು ಸಿನಿಮಾ ನಿರ್ಮಾಪಕ ಪ್ರಶಾಂತ್ ರೆಡ್ಡಿ ಸೇರಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ವೈವಿಬಿ ಶಿವಸಾಗರ್ ಅವರ ಛಾಯಾಗ್ರಹಣ, ಉಮೇಶ್ ಆರ್.ಬಿ ಸಂಕಲನ ಈ ಸಿನಿಮಾಗಿದೆ. ಸದ್ಯ ಟೈಟಲ್​​ನಿಂದಲೇ ಕುತೂಹಲ ಹುಟ್ಟಿಸಿರೋ ಈ ಚಿತ್ರ ನವೆಂಬರ್ ತಿಂಗಳಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ.

ಇದನ್ನೂ ಓದಿ: ಜಮೀರ್ ಅಹ್ಮದ್​​ ಪುತ್ರನ 2ನೇ ಸಿನಿಮಾ 'ಕಲ್ಟ್': ಉಪಾಧ್ಯಕ್ಷ ನಿರ್ದೇಶಕನ ಚಿತ್ರದಲ್ಲಿ ಝೈದ್ ಖಾನ್, ರಚಿತಾರಾಮ್, ಮಲೈಕಾ - Cult

ಇತ್ತೀಚೆಗೆ ಪೋಸ್ಟರ್ ಹಂಚಿಕೊಂಡ ಚಿತ್ರದ ನಿರ್ದೇಶಕರು, 'ಎಲ್ಲರಿಗೂ ಗಣೇಶ್ ಚತುರ್ಥಿಯ ಶುಭಾಶಯಗಳು. ಈ ಸೆಪ್ಟೆಂಬರ್​ನಲ್ಲಿ ಗಣೇಶನ ಆಗಮನವಾಗಿದೆ ಹಾಗೇ ನವಂಬರ್​​​ನಲ್ಲಿ ಆರಾಮ್ ಅರವಿಂದ್ ಸ್ವಾಮಿಯ ಆಗಮನವಾಗಲಿದೆ. ಎಂದಿನಂತೆ ನಿಮ್ಮ ಪ್ರೀತಿ ಪ್ರೋತ್ಸಾಹದೊಂದಿಗೆ ಬರಮಾಡಿಕೊಳ್ಳಿ. ಹಂಚಿ ಹರಸಿ ಹಾರೈಸಿ. ಎಂದಿನಂತೆ ನಿಮ್ಮ ಪ್ರೀತಿಯ ಅಭಿಷೇಕ್ ಶೆಟ್ಟಿ' ಎಂದು ಬರೆದುಕೊಂಡಿದ್ದಾರೆ.

ನವೆಂಬರ್​​ನಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ನಿಖರ ದಿನಾಂಕ ಇನ್ನಷ್ಟೇ ಘೋಷಣೆಯಾಗಬೇಕಿದ್ದು, ಅಭಿಮಾನಿಗಳು ಸಿನಿಮಾ ಕುರಿತು ಕುತೂಹಲ ಹೊಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.