ಕರ್ನಾಟಕ

karnataka

ETV Bharat / state

ಗುಂಡ್ಲುಪೇಟೆ ಠಾಣೆ ಆವರಣದಲ್ಲಿ ಪೊಲೀಸರು ಸಾಕಿದ್ದ ನಾಯಿಯಿಂದ ಮೂವರಿಗೆ ಕಡಿತ - dog bite - DOG BITE

ಚಾಮರಾಜನಗರದ ಗುಂಡ್ಲುಪೇಟೆ ಪೊಲೀಸ್ ಠಾಣಾ ಆವರಣದಲ್ಲಿ ಸಿಬ್ಬಂದಿ ಸಾಕಿದ್ದ ನಾಯಿ ಮೂವರಿಗೆ ಕಚ್ಚಿ ಗಾಯಗೊಳಿಸಿದೆ.

gundlupet-police-station
ಗುಂಡ್ಲುಪೇಟೆ ಠಾಣೆ (ETV Bharat)

By ETV Bharat Karnataka Team

Published : Jul 1, 2024, 10:59 PM IST

ಚಾಮರಾಜನಗರ :ಪೊಲೀಸ್ ಸಿಬ್ಬಂದಿ ಹಾಲು, ಬ್ರೆಡ್ ಕೊಟ್ಟು ಸಾಕಿದ್ದ ನಾಯಿಯಿಂದಲೇ ಮೂವರು ಕಡಿತಕ್ಕೊಳಗಾದ ಘಟನೆ ಗುಂಡ್ಲುಪೇಟೆ ಪೊಲೀಸ್ ಠಾಣಾ ಆವರಣದಲ್ಲಿ ನಡೆದಿದೆ. ಸಿಬ್ಬಂದಿಯೇ ಆಹಾರ ನೀಡುತ್ತ ಸಾಕಿದ್ದ ಬೀದಿ ನಾಯಿ ಇದಾಗಿದ್ದು, ಠಾಣೆಯ ಇನ್ಸ್​ಪೆಕ್ಟರ್, ಶಿಕ್ಷಕ ಹಾಗೂ ಮತ್ತೊಬ್ಬರಿಗೆ ಕಡಿದು ಗಾಯಗೊಳಿಸಿದೆ.

ಮೊಬೈಲ್ ಕಳೆದುಕೊಂಡಿದ್ದ ಶಿಕ್ಷಕರೊಬ್ಬರು ದೂರು ಕೊಡಲು ಠಾಣೆಗೆ ಬಂದಿದ್ದು, ಪೊಲೀಸ್ ಕಾನ್ಸ್​​​​​ಟೇಬಲ್​​ವೊಬ್ಬರೊಂದಿಗೆ ಮಾತನಾಡುತ್ತಾ ನಿಂತಿದ್ದಾಗ ಹಿಂಬದಿಯಿಂದ ಬಂದು ಬಲಗಾಲಿಗೆ ಕಚ್ಚಿತ್ತು. ಇವರು ದೂರು ನೀಡುವುದನ್ನು ಬದಿಗೊತ್ತಿ ಆಸ್ಪತ್ರೆಗೆ ತೆರಳಿ ಚುಚ್ಚುಮದ್ದು ಪಡೆದಿದ್ದಾರೆ. ಇದಾದ ನಂತರ ಸ್ನೇಹಿತರೊಂದಿಗೆ ಬಂದಿದ್ದ ಮತ್ತೊಬ್ಬನನ್ನು ನಾಯಿ ಕಚ್ಚಿದೆ.

ಅಷ್ಟರಲ್ಲೇ ಠಾಣೆಗೆ ಬಂದ ಪೊಲೀಸ್ ಇನ್ಸ್​ಪೆಕ್ಟರ್​​ ಪರಶಿವಮೂರ್ತಿ ಅವರನ್ನೂ ಬೀದಿ ನಾಯಿ ಕಚ್ಚಿದ್ದು, ಇವರು ಕೂಡ ಚಿಕಿತ್ಸೆಗೆ ತೆರಳಿದ್ದಾರೆ.

ಠಾಣೆ ಬಳಿಯೇ ಇದ್ದ ಬೀದಿನಾಯಿಗೆ ಈ ಹಿಂದೆ ಹುಚ್ಚುನಾಯಿ ಕಡಿತಕೊಳಕ್ಕಾಗಿದ್ದ ಹಿನ್ನೆಲೆ ಚುಚ್ಚುಮದ್ದು ಕೊಡಿಸಲಾಗಿತ್ತು. ಇದರಿಂದ ಯಾವುದೇ ತೊಂದರೆ ಮಾಡದೆ ನಾಯಿ ಠಾಣೆ ಬಳಿ ಇರುತ್ತಿತ್ತು. ಆದರೆ ಸೋಮವಾರ ಇದ್ದಕ್ಕಿದ್ದಂತೆ ಇನ್ಸ್​ಪೆಕ್ಟರ್​​ ​ ಸೇರಿ ಮೂವರನ್ನು ಕಡಿದು ಗಾಯಗೊಳಿಸಿತು. ನಂತರದಲ್ಲಿ ನಾಯಿಯನ್ನು ಹಿಡಿಸುವ ಪ್ರಯತ್ನ ನಡೆಸುವಷ್ಟರಲ್ಲಿ ನಾಯಿ ತಾನಾಗಿಯೇ ಮೃತಪಟ್ಟಿದೆ.

ಇದನ್ನೂ ಓದಿ :ತುಮಕೂರಿನಲ್ಲಿ ಐದು ಮಂದಿ ಮೇಲೆ ಹುಚ್ಚುನಾಯಿ ದಾಳಿ: ಓರ್ವ ಬಾಲಕಿಗೆ ಗಂಭೀರ ಗಾಯ - MAD DOG BITES

ABOUT THE AUTHOR

...view details