ಬೆಂಗಳೂರು:ಪಕ್ಕದ ಮನೆಯ ನಕಲಿ ಕೀ ಬಳಸಿ ಚಿನ್ನಾಭರಣ ಹಾಗೂ ನಗದು ದೋಚಿದ್ದ ಮೂವರು ಕಳ್ಳರನ್ನು ಕೆಂಪೇಗೌಡ ನಗರ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ. ಕಿರಣ್, ಆನಂದ್ ಹಾಗೂ ನಾನಿ ಬಂಧಿತರು.
ನಕಲಿ ಕೀ ಬಳಸಿ ಪಕ್ಕದ ಮನೆಯಿಂದ ನಗದು, ಚಿನ್ನ ಕಳ್ಳತನ; ಕದ್ದ ಮಾಲಿನಲ್ಲಿ ದೇವರಿಗೂ ಪಾಲು! - Bengaluru Theft Case
ನಕಲಿ ಕೀ ಬಳಸಿ ಚಿನ್ನಾಭರಣ, ನಗದು ದೋಚುತ್ತಿದ್ದ ಮೂವರನ್ನು ಬೆಂಗಳೂರಿನ ಕೆಂಪೇಗೌಡ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
Published : Apr 12, 2024, 3:49 PM IST
ಮಾರ್ಚ್ 29ರಂದು ನಕಲಿ ಕೀ ಕೈ ಬಳಸಿ ಆರೋಪಿಗಳು ಚಾಮರಾಜಪೇಟೆಯ ಅಪ್ಪುರಾವ್ ರಸ್ತೆಯಲ್ಲಿರುವ ತಮ್ಮ ಮನೆ ಪಕ್ಕದಲ್ಲಿರುವ ಉಮಾ ಎಂಬವರ ಮನೆಗೆ ನುಗ್ಗಿ ಕಳ್ಳತನ ಮಾಡಿದ್ದರು. ಹಗಲು ಹೊತ್ತಲ್ಲೇ ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ 6 ಲಕ್ಷ ನಗದು ಮತ್ತು 3.22 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದಿದ್ದರು. ಬಳಿಕ ಮಲೆಮಹದೇಶ್ವರ ಬೆಟ್ಟಕ್ಕೆ ತೆರಳಿ, ಕದ್ದ ಹಣದಲ್ಲಿ ಸ್ವಲ್ಪ ಪಾಲನ್ನು ದೇವಸ್ಥಾನದ ಹುಂಡಿಗೆ ಹಾಕಿದ್ದರು ಎಂದು ಪೊಲೀಸ್ ವಿಚಾರಣೆ ವೇಳೆ ತಿಳಿದುಬಂದಿದೆ.
ಇದನ್ನೂ ಓದಿ:ನಕಲಿ ಕೀ ಬಳಸಿ ವಾಹನ ಕಳ್ಳತನ: ಮೂವರು ಸೆರೆ, ₹10 ಲಕ್ಷದ ಮಾಲು ವಶಕ್ಕೆ