ಬೆಂಗಳೂರು :TCS ವರ್ಲ್ಡ್ 10K ಬೆಂಗಳೂರು ಮ್ಯಾರಥಾನ್ ದಿನಾಂಕದಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಆಯೋಜಕರು ಸ್ಪಷ್ಟಪಡಿಸಿದ್ದಾರೆ. ಏಪ್ರಿಲ್ 28ರ ಭಾನುವಾರದಂದು TCS ವರ್ಲ್ಡ್ 10K ಬೆಂಗಳೂರು - 2024ಗೆ ದಿನಾಂಕ ನಿಗದಿಯಾಗಿದ್ದು, ಕೇಂದ್ರ ಚುನಾವಣಾ ಆಯೋಗವು ಕರ್ನಾಟಕದಲ್ಲಿ ಏಪ್ರಿಲ್ 26 ಮತ್ತು ಮೇ 7 ರಂದು ಎರಡು ಹಂತಗಳಲ್ಲಿ ಲೋಕಸಭಾ ಚುನಾವಣಾ ಮತದಾನ ಪ್ರಕ್ರಿಯೆಗೆ ದಿನಾಂಕ ನಿಗದಿಪಡಿಸಿತ್ತು. ಆದ್ದರಿಂದ 'TCS ವರ್ಲ್ಡ್ 10K ಬೆಂಗಳೂರು - 2024' ದಿನಾಂಕ ಬದಲಿಸಬೇಕಾದ ಆತಂಕದಲ್ಲಿದ್ದ ಆಯೋಜಕರು ಸರ್ಕಾರದೊಂದಿಗೆ ಎಚ್ಚರಿಕೆಯಿಂದ ಚರ್ಚಿಸಿದ ನಂತರ, ನಿರ್ಧಾರ ಪ್ರಕಟಿಸಿದ್ದಾರೆ.
TCS ವರ್ಲ್ಡ್ 10K - ಬೆಂಗಳೂರು 2024; ದಿನಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲ - TCS World 10K - TCS WORLD 10K
ಈಗಾಗಲೇ ನಿಗದಿಯಾದ ದಿನಾಂಕದಂದು ಮ್ಯಾರಾಥಾನ್ ನಡೆಯಲಿದೆ. ಹಾಗೂ ವಿವಿಧ ಆನ್ - ಗ್ರೌಂಡ್ ಚಟುವಟಿಕೆಗಳಿಗಾಗಿ ಬೆಂಗಳೂರು ಪೊಲೀಸರಿಂದ ನಾವು ಅನುಮತಿಗಾಗಿ ಕಾಯುತ್ತಿದ್ದೇವೆ ಎಂದು ಆಯೋಜಕರು ತಿಳಿಸಿದ್ದಾರೆ.
Published : Mar 28, 2024, 9:06 PM IST
ಈಗಾಗಲೇ ನಿಗದಿಯಾದ ದಿನಾಂಕದಂದು ಮ್ಯಾರಾಥಾನ್ ನಡೆಯಲಿದೆ. ಹಾಗೂ ವಿವಿಧ ಆನ್ - ಗ್ರೌಂಡ್ ಚಟುವಟಿಕೆಗಳಿಗಾಗಿ ಬೆಂಗಳೂರು ಪೊಲೀಸರಿಂದ ನಾವು ಅನುಮತಿಗಾಗಿ ಕಾಯುತ್ತಿದ್ದೇವೆ. ವಿಶ್ವ ಅಥ್ಲೆಟಿಕ್ಸ್ ಗೋಲ್ಡ್ ಲೇಬಲ್ ರೇಸ್ ಆಗಿರುವ 'TCS ವರ್ಲ್ಡ್ 10K ಬೆಂಗಳೂರು', ಪಾಲ್ಗೊಳ್ಳುವವರಿಗೆ ಉತ್ತಮ ಅನುಭವವನ್ನ ನೀಡಲು ಬದ್ಧವಾಗಿದೆ. ಆದಾಗ್ಯೂ ಯಾವುದೇ ಬದಲಾವಣೆ ಅಥವಾ ಮಾಹಿತಿಗಳಿದ್ದಲ್ಲಿ, ಭಾಗವಹಿಸುವವರಿಗೆ ತಕ್ಷಣವೇ ತಿಳಿಸಲಾಗುತ್ತದೆ ಎಂದು ಆಯೋಜಕರು ತಿಳಿಸಿದ್ದಾರೆ.
ಇದನ್ನೂ ಓದಿ :ಅಕ್ಟೋಬರ್ 8ರಂದು ಬೆಂಗಳೂರು ಮ್ಯಾರಥಾನ್: 20 ಸಾವಿರ ಮಂದಿ ಭಾಗಿಯಾಗುವ ನಿರೀಕ್ಷೆ