ಕರ್ನಾಟಕ

karnataka

ETV Bharat / state

ಬೇಗೂರು ಪೊಲೀಸರಿಂದ ಮಿಸ್ ಫೈಯರ್: ರೈಟರ್ ಕಾಲಿಗೆ ಗುಂಡೇಟು - Misfire by the police constable - MISFIRE BY THE POLICE CONSTABLE

ಕಾನ್ಸ್​ಟೇಬಲ್​​​​ವೊಬ್ಬರು ಕಂಟ್ರಿಮೇಡ್ ಪಿಸ್ತೂಲ್ ಪರಿಶೀಲಿಸುವಾಗ ಮಿಸ್ ಫೈರ್ ಆಗಿ ರೈಟರ್​ ಒಬ್ಬರಿಗೆ ಗಾಯವಾಗಿರುವ ಘಟನೆ ಬೇಗೂರು ಠಾಣೆಯಲ್ಲಿ ನಡೆದಿದೆ.

writer
ರೈಟರ್ ಅಂಬುದಾಸ್

By ETV Bharat Karnataka Team

Published : Mar 22, 2024, 4:30 PM IST

ಬೆಂಗಳೂರು : ಲೋಕಸಭಾ ಚುನಾವಣೆ ಹಿನ್ನೆಲೆ ನಗರ‌ ಪೊಲೀಸ್ ಆಯುಕ್ತ ದಯಾನಂದ ಅವರ ಆದೇಶದಂತೆ ಠೇವಣಿ ಇಡಲು ಬಂದಿದ್ದ ಕಂಟ್ರಿಮೇಡ್ ಪಿಸ್ತೂಲ್ ಪರಿಶೀಲಿಸುವಾಗ, ಠಾಣಾ ಸಿಬ್ಬಂದಿಯಿಂದ ಮಿಸ್ ಫೈರ್ ಆಗಿ ರೈಟರ್​ಗೆ ಗುಂಡೇಟು ಬಿದ್ದು ಗಾಯಗೊಂಡಿದ್ದಾರೆ. ಬೇಗೂರು ಠಾಣೆಯಲ್ಲಿ ಈ ದುರ್ಘಟನೆ ನಡೆದಿದೆ‌.

ಪೊಲೀಸ್ ಕಮೀಷನರ್ ಸೂಚನೆಯಂತೆ ಮುಕುಂದರೆಡ್ಡಿ ಎಂಬುವವರು ತಮ್ಮ ಬಳಿಯಿದ್ದ ಕಂಟ್ರಿಮೇಡ್ ಪಿಸ್ತೂಲ್​ ಅನ್ನು ಠಾಣೆಯಲ್ಲಿ ಠೇವಣಿ ಇಡಲು ಬಂದಿದ್ದರು. ಕಾನ್ಸ್​ಟೇಬಲ್​​ ವೆಂಕಣ್ಣ ಅವರು ಪರಿಶೀಲಿಸುತ್ತಿದ್ದರು. ಈ ವೇಳೆ, ಟ್ರಿಗರ್ ಒತ್ತಿದ ತಕ್ಷಣ ಪಿಸ್ತೂಲ್ ಒಳ ಹೊಕ್ಕಿದ್ದ ಗುಂಡು ಎದುರುಗಡೆ ಕುಳಿತ್ತಿದ್ದ ಠಾಣಾ ರೈಟರ್ ಅಂಬುದಾಸ್ ಅವರ ಎಡಕಾಲಿಗೆ ಮಿಸ್ ಫೈರ್ ಆಗಿದೆ. ಘಟನೆ ಸಂಬಂಧ ಗಾಯಾಳುವನ್ನ ಅಪೊಲೊ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಬುಲೆಟ್ ಮ್ಯಾಗಜೀನ್​ನಲ್ಲಿದ್ದ ಒಂದು ಗುಂಡು ಪಿಸ್ತೂಲ್​ನಲ್ಲಿ ಲಾಕ್ ಆಗಿರುವ ಸಾಧ್ಯತೆ ಬಗ್ಗೆ ಶಂಕಿಸಲಾಗಿದೆ. ಸ್ಥಳಕ್ಕೆ ವಿಧಿವಿಜ್ಞಾನ ತಂಡ ಆಗಮಿಸಿ ಪರಿಶೀಲಿಸುತ್ತಿದೆ.‌ ಘಟನೆಗೆ ಕಾರಣರಾದ ಕಾನ್ಸ್​​ಟೇಬಲ್​ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ :ರಿವಾಲ್ವಾರ್ ಸ್ವಚ್ಛ ಮಾಡುವಾಗ ಮಿಸ್ ಫೈಯರ್: ಹಣೆಗೆ ತಗುಲಿದ ಗುಂಡು

ABOUT THE AUTHOR

...view details