ಬೆಂಗಳೂರು:ಪಟಾಕಿ ಅವಘಡಗಳಿಂದ ಕಣ್ಣುಗಳಿಗೆ ಹಾನಿಯಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಲೇ ಇವೆ. ಈ ಬಾರಿ ಬೆಂಗಳೂರು ನಗರದಲ್ಲಿಯೇ 91 ಪ್ರಕರಣಗಳು ದಾಖಲಾಗಿದ್ದು ಆತಂಕವನ್ನು ಹೆಚ್ಚಿಸಿದೆ.
ದೀಪಾವಳಿ ಹಬ್ಬವೆಂದರೆ ಬೆಳಕಿನ ಸಂಭ್ರಮ. ಈ ದೀಪಾವಳಿಗೆ ಮತ್ತಷ್ಟು ಮೆರುಗು ಬರುವುದು ರಾತ್ರಿ ಸಿಡಿಸುವ ಪಟಾಕಿಗಳಿಂದ. ಬಣ್ಣ ಬಣ್ಣದ ಬೆಂಕಿಯ ಚಿತ್ತಾರಗಳನ್ನು ನೋಡಿ ಖುಷಿ ಪಡುವುದು ಕೂಡ ದೀಪಾವಳಿ ಹಬ್ಬದ ಭಾಗವಾಗಿದೆ. ಆದರೆ ಅದೇ ಆತಂಕವನ್ನು ಕೂಡ ಉಂಟುಮಾಡಿದೆ. ಪಟಾಕಿ ಸಿಡಿತದಿಂದ ಅವಘಡಗಳು ಮೂರು ದಿನಗಳಲ್ಲಿ ಹೆಚ್ಚಾಗಿವೆ. ಗಾಯಾಳುಗಳು ನಗರದ ನಾರಾಯಣ ನೇತ್ರಾಲಯ, ಮಿಂಟೋ ಆಸ್ಪತ್ರೆ ಸೇರಿದಂತೆ ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.