ಕರ್ನಾಟಕ

karnataka

ETV Bharat / state

ಹುಬ್ಬಳ್ಳಿಯಲ್ಲಿ ಹೆಡ್ ಕಾನ್​ಸ್ಟೆಬಲ್‌ ಆತ್ಮಹತ್ಯೆ - HEAD CONSTABLE SUICIDE - HEAD CONSTABLE SUICIDE

ಹೆಡ್​ ಕಾನ್​ಸ್ಟೆಬಲ್​ವೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

Nagappa  Hanchinamani
ನಾಗಪ್ಪ (ನಾಗರಾಜ) ಹಂಚಿನಮನಿ (ETV Bharat)

By ETV Bharat Karnataka Team

Published : May 27, 2024, 7:15 PM IST

ಹುಬ್ಬಳ್ಳಿ : ನಗರದ ಉತ್ತರ ಸಂಚಾರ ಪೊಲೀಸ್ ಠಾಣೆಯ ಹೆಡ್​ ಕಾನ್​ಸ್ಟೆಬಲ್​ವೊಬ್ಬರು ಇಲ್ಲಿನ ಉಣಕಲ್​ ಕ್ರಾಸ್ ಬಳಿಯ ರಾಜನಗರ ಮಾರ್ಗದ ರೈಲ್ವೆ ಮೇಲ್ಸೇತುವೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮೂಲತಃ ತಾಲೂಕಿನ ಅರಳಿಕಟ್ಟಿ ಗ್ರಾಮದ ಇಲ್ಲಿನ ಲಿಂಗರಾಜ ನಗರ ನಿವಾಸಿ ನಾಗಪ್ಪ (ನಾಗರಾಜ) ಹಂಚಿನಮನಿ (45) ಆತ್ಮಹತ್ಯೆ ಮಾಡಿಕೊಂಡವರು.

ಕಳೆದ ವರ್ಷ ಆಗಸ್ಟ್ 10ರಂದು ವಿದ್ಯಾನಗರ ಠಾಣೆಯಿಂದ ವರ್ಗಾವಣೆಗೊಂಡು ಉತ್ತರ ಸಂಚಾರ ಠಾಣೆಗೆ ಕರ್ತವ್ಯಕ್ಕೆ ಹಾಜರಾಗಿದ್ದ ಇವರು, ಕಳೆದ ಎರಡು ತಿಂಗಳಿಂದ ಕರ್ತವ್ಯಕ್ಕೆ ಗೈರು ಹಾಜರಿದ್ದರು. ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದರು ಎಂದು ಹೇಳಲಾಗಿದೆ. ಮೃತರಿಗೆ ಪತ್ನಿ, ಪುತ್ರ, ಇಬ್ಬರು ಪುತ್ರಿಯರು ಇದ್ದಾರೆ. ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ :ಹುಬ್ಬಳ್ಳಿ: ಮಹಿಳೆ ಜೊತೆ ಪೊಲೀಸ್ ಕಾನ್ಸ್​ಟೇಬಲ್ ಆತ್ಮಹತ್ಯೆ - Police Constable Suicide

ABOUT THE AUTHOR

...view details