ಬೆಂಗಳೂರು:ಬೆಂಗಳೂರು ಟೆಕ್ ಶೃಂಗಸಭೆಯಲ್ಲಿನ ಫ್ಲೈಯಿಂಗ್ ಮ್ಯಾನ್ ಪ್ರದರ್ಶನ ಎಲ್ಲರನ್ನೂ ನಿಬ್ಬೆರಗಾಗಿಸಿದೆ. ಟೆಕ್ ಶೃಂಗಸಭೆ ಎಲ್ಲ ಮಿತಿಗಳನ್ನು ಮೀರಿ ಹೊಸ ಸಾಧ್ಯತೆಗಳನ್ನು ಸೃಷ್ಟಿಸುವ ವಿಷಯವಾಗಿದೆ ಹೊರಹೊಮ್ಮಿದೆ.
ಏಷ್ಯಾದ ಅತಿದೊಡ್ಡ ತಂತ್ರಜ್ಞಾನ ಸಮಾವೇಶವಾದ 27ನೇ ಬೆಂಗಳೂರು ಟೆಕ್ ಶೃಂಗಸಭೆ ಹಲವು ಹೊಸತನದ ರೋಮಾಂಚನದೊಂದಿಗೆ ಮುಕ್ತಾಯ ಕಂಡಿದೆ. ಉದ್ಘಾಟನಾ ಸಮಾರಂಭದಲ್ಲಿನ ಫ್ಲೈಯಿಂಗ್ ಮ್ಯಾನ್ ಗಮನಾರ್ಹ ಪ್ರದರ್ಶನದ ಜೊತೆಗೆ ಕರ್ನಾಟಕ ಸರ್ಕಾರದ ಸ್ಕಿಲ್ ಡೆವಲಪ್ಮೆಂಟ್ ನೀತಿಗಳು ರಾಜ್ಯದಲ್ಲಿ ಉದ್ಯೋಗಿಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನು ನಿಗದಿಪಡಿಸಿತು.
ಮೂರು ವರ್ಷಗಳಿಂದ ವೃತ್ತಿಪರವಾಗಿ ಹಾರಾಟ ನಡೆಸುತ್ತಿರುವ ಕಲ್ಫೋನ್ ಅವರು ಗ್ರಾವಿಟಿ ಇಂಡಸ್ಟ್ರೀಸ್ ಅಭಿವೃದ್ಧಿಪಡಿಸಿದ ಜೆಟ್ ಸೂಟ್ ಬಳಸಿ ಏಕಾಂಗಿಯಾಗಿ ಹಾರಾಟ ನಡೆಸಿ ಅಚ್ಚರಿಗೊಳಿಸಿದರು. ಸಣ್ಣ ಗ್ಯಾಸ್ ಟರ್ಬೈನ್‌ಗಳಿಂದ ಚಾಲಿತವಾದ ಏಳು ಮಿನಿ-ಜೆಡ್ ಎಂಜಿನ್‌ಗಳೊಂದಿಗೆ ನೆಲದಿಂದ ಸುಮಾರು 2.5 ಮೀಟರ್ ಎತ್ತರದಲ್ಲಿ ಹಾರಾಡಿ ಪ್ರೇಕ್ಷಕರನ್ನು ಆಕರ್ಷಿಸಿದರು.
ಜೆಟ್ ಇಂಧನ ಬಳಸುವ ಸೂಟ್ 85 ಮೈಲ್ಸ್ ಪರ್ ಹವರ್ ವೇಗದಲ್ಲಿ ಹಾರಲು ಮತ್ತು 12,000 ಅಡಿ ಎತ್ತರವನ್ನು ತಲುಪಲು ಸಿದ್ಧಪಡಿಸಲಾಗುತ್ತಿದೆ. 1000 ಹೆಚ್.ಪಿ ಪವರ್ ಫುಲ್ ಇಂಜಿನ್‌ಗಳ ಏಳು ಗಂಟೆಗಳವರೆಗೆ ಹಾರಾಟವನ್ನು ನಡೆಸಬಹುದಾಗಿದೆ. ನನ್ನ ತಂಡದೊಂದಿಗೆ ಭಾರತದಲ್ಲಿ ಹಾರಾಟ ನಡೆಸುತ್ತಿರುವುದು ಇದೇ ಮೊದಲಲ್ಲ. ಅದೇ ಆದರೆ ನಾನು ಏಕಾಂಗಿಯಾಗಿ ಹಾರಾಡುತ್ತಿರುವುದು ಇದು ಮೊದಲ ಬಾರಿಯಾಗಿದೆ. 2017ರಲ್ಲಿ ಮೊದಲ ಬಾರಿಗೆ ಅನಾವರಣಗೊಂಡ ನಾನು ಹಾಕುತ್ತಿರುವ ಸೂಟ್ ಚಲನೆಯನ್ನು ನಿಖರವಾಗಿ ನ್ಯಾವಿಗೇಟ್ ಮಾಡಲು ರಿಮೋಟ್ ಕಂಟ್ರೋಲ್ನ್ನು ಹೊಂದಿದ್ದು, ಮನರಂಜನೆಗಾಗಿ ಮಾತ್ರ ವಿನ್ಯಾಸಗೊಳಿಸಲಾಗಿಲ್ಲ ಎಂದು ಕಲ್ಫೋನ್ ಹೇಳಿದ್ದಾರೆ.