ಬೆಂಗಳೂರು :ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ವೈಟ್ ಟಾಪಿಂಗ್ ಕಾಮಗಾರಿ ನಡೆಯಲಿರುವ ಹಿನ್ನೆಲೆಯಲ್ಲಿ ಪೀಣ್ಯ 100 ಫೀಟ್ ರಸ್ತೆಯಲ್ಲಿನ ಪೀಣ್ಯ ಇಂಡಸ್ಟ್ರಿಯಲ್ ಅಸೋಸಿಯೇಷನ್ ಜಂಕ್ಷನ್ನಿಂದ ಜಾಲಹಳ್ಳಿ ಕ್ರಾಸ್ ಜಂಕ್ಷನ್ವರೆಗಿನ 200 ಮೀಟರ್ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತಾತ್ಕಾಲಿಕ ನಿರ್ಬಂಧ ವಿಧಿಸಲಾಗಿದೆ.
(ಫೆಬ್ರವರಿ 1) ಇಂದಿನಿಂದ ವೈಟ್ ಟಾಪಿಂಗ್ ಕಾಮಗಾರಿ ಪೂರ್ಣಗೊಳ್ಳುವವರೆಗೆ ರಸ್ತೆಯಲ್ಲಿ ವಾಹನ ಸಂಚಾರ ಹಾಗೂ ನಿಲುಗಡೆಗೆ ನಿರ್ಬಂಧಿಸಲಾಗಿದೆ ಎಂದು ಬೆಂಗಳೂರು ಸಂಚಾರಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಪರ್ಯಾಯ ಮಾರ್ಗ : ಪೀಣ್ಯ 100 ಫೀಟ್ ರಸ್ತೆಯ ಮೂಲಕ ಜಾಲಹಳ್ಳಿ ಕ್ರಾಸ್ ಜಂಕ್ಷನ್ ಕಡೆಗೆ ಹೋಗುವ ವಾಹನಗಳು ಪೀಣ್ಯ ಇಂಡಸ್ಟ್ರಿಯಲ್ ಅಸೋಸಿಯೇಷನ್ ಜಂಕ್ಷನ್ನಲ್ಲಿ ಬಲಕ್ಕೆ ಚಲಿಸಿ, ರಸ್ತೆಯ ಮತ್ತೊಂದು ಬದಿಯ ಮೂಲಕ ದ್ವಿಮುಖ ಸಂಚಾರ ರಸ್ತೆಯ ಮೂಲಕ ಸಾಗಬಹುದು. ಎಲ್ಲಾ ಮಾದರಿಯ ಸರಕು-ಸಾಗಣೆ ವಾಹನಗಳು ಟಿವಿಎಸ್ ಕ್ರಾಸ್ ಜಂಕ್ಷನ್ನಿಂದ ಪೀಣ್ಯ ಪೊಲೀಸ್ ಠಾಣೆ ರಸ್ತೆಯ ಮೂಲಕ ಸಾಗಿ, ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್ನಲ್ಲಿ ತುಮಕೂರು ರಸ್ತೆಯ ಮೂಲಕ ಸಾಗಬಹುದು.
ವಾಹನ ನಿಲುಗಡೆ ನಿಷೇಧ : ಪೀಣ್ಯ ಪೊಲೀಸ್ ಠಾಣೆ ರಸ್ತೆ, ಪೀಣ್ಯ 100 ಅಡಿ ರಸ್ತೆ (ಜಾಲಹಳ್ಳಿ ಕ್ರಾಸ್ನಿಂದ ಟಿವಿಎಸ್ ಕ್ರಾಸ್ವರೆಗೆ) ಹಾಗೂ ಪೀಣ್ಯ 1ನೇ ಕ್ರಾಸ್ ರಸ್ತೆಯಲ್ಲಿ ಎಲ್ಲಾ ರೀತಿಯ ವಾಹನಗಳ ನಿಲುಗಡೆಯನ್ನು ಕಾಮಗಾರಿ ಪೂರ್ಣಗೊಳ್ಳುವವರೆಗೆ, ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
ಇದನ್ನೂ ಓದಿ :ದುಬಾರಿ ಅರಮನೆ ಮೈದಾನ ರಸ್ತೆ ಅಗಲೀಕರಣ ಬದಲು ಪರ್ಯಾಯ ಸುರಂಗ ರಸ್ತೆ ಮಾರ್ಗದತ್ತ ಸರ್ಕಾರದ ಚಿತ್ತ! - NEW TUNNEL ROAD PLANNING