ಕರ್ನಾಟಕ

karnataka

ETV Bharat / state

ಮುರುಡೇಶ್ವರ: ಕಡಲತೀರದಲ್ಲಿ ಪ್ರವಾಸಿಗರಿಗೆ ತಾತ್ಕಾಲಿಕ ನಿಷೇಧ - MURUDESHWAR TRAGEDY

ವಿದ್ಯಾರ್ಥಿನಿಯರ ಸಾವಿನ ಬಳಿಕ ಮುರುಡೇಶ್ವರ ಕಡಲತೀರದಲ್ಲಿ ಪ್ರವಾಸಿಗರಿಗೆ ತಾತ್ಕಾಲಿಕ ನಿಷೇಧ ಹೇರಲಾಗಿದೆ.

MURUDESHWAR TRAGEDY
ಮುರುಡೇಶ್ವರ ಕಡಲತೀರದಲ್ಲಿ ಪೊಲೀಸರು (ETV Bharat)

By ETV Bharat Karnataka Team

Published : Dec 11, 2024, 4:45 PM IST

ಕಾರವಾರ: ನಾಲ್ವರು ವಿದ್ಯಾರ್ಥಿನಿಯರ ಸಾವಿನ ಬಳಿಕ ಎಚ್ಚೆತ್ತುಕೊಂಡಿರುವ ಉತ್ತರ ಕನ್ನಡ ಜಿಲ್ಲಾಡಳಿತ, ಪ್ರವಾಸಿಗರ ಸುರಕ್ಷತೆಯ ಹಿತದೃಷ್ಠಿಯಿಂದ ಮುರುಡೇಶ್ವರ ಬೀಚ್ ಅನ್ನು ತಾತ್ಕಾಲಿಕವಾಗಿ ಬಂದ್ ಮಾಡಿದೆ.

ಏನಾಯ್ತು?:ಕೋಲಾರದ ಮುಳಬಾಗಿಲಿನ ಮುರಾರ್ಜಿ ದೇಸಾಯಿ ವಸತಿ ಶಾಲೆಯಿಂದ ಒಟ್ಟು 46 ವಿದ್ಯಾರ್ಥಿಗಳು ಹಾಗೂ 7 ಮಂದಿ ಶಿಕ್ಷಕರು ಮಂಗಳವಾರ ಮುರುಡೇಶ್ವರಕ್ಕೆ ಪ್ರವಾಸಕ್ಕೆ ಆಗಮಿಸಿದ್ದರು. ನೀರಿಗಿಳಿದ ಏಳು ವಿದ್ಯಾರ್ಥಿಗಳ ಪೈಕಿ ಓರ್ವ ವಿದ್ಯಾರ್ಥಿನಿ ಶ್ರವಂತಿ ಗೋಪಾಲಪ್ಪ (15) ಮೃತಪಟ್ಟಿದ್ದರು. ಇವರೊಂದಿಗೆ ನಾಪತ್ತೆಯಾಗಿದ್ದ ದೀಕ್ಷಾ (15), ಲಾವಣ್ಯಾ (15), ವಂದನಾ (15) ಅವರ ಮೃತದೇಹಗಳು ಇಂದು ಮುರುಡೇಶ್ವರ ದೇವಸ್ಥಾನದ ಹಿಂಬದಿಯ ಸಮುದ್ರತೀರದಲ್ಲಿ ಪತ್ತೆಯಾಗಿದೆ.

ಮುರುಡೇಶ್ವರ ಕಡಲತೀರದಲ್ಲಿ ಪ್ರವಾಸಿಗರಿಗೆ ತಾತ್ಕಾಲಿಕ ನಿಷೇಧ (ETV Bharat)

ಗಂಭೀರವಾಗಿ ಗಾಯಗೊಂಡ ಮೂವರು ವಿದ್ಯಾರ್ಥಿನಿಯರಾದ ಯಶೋಧಾ, ವಿಕ್ಷಣಾ, ಲಿಪಿಕಾ ಇಲ್ಲಿನ ಆರ್‌ಎನ್‌ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ. ಇನ್ನುಳಿದ ವಿದ್ಯಾರ್ಥಿಗಳನ್ನು ಹಾಗೂ ಅವರ ಸಾಮಗ್ರಿಯನ್ನು ಮುಳಬಾಗಿಲಿಗೆ ಸುರಕ್ಷಿತವಾಗಿ ತಲುಪಿಸುವ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಿದೆ.

ಇದೀಗ ಕಡಲತೀರದಲ್ಲಿ ಅಲ್ಲಲ್ಲಿ ಬ್ಯಾರಿಕೇಡ್ ಹಾಕಲಾಗಿದೆ. ಹೆಚ್ಚುವರಿ ಪೊಲೀಸ್​ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ.

ಇದನ್ನೂ ಓದಿ:ಸಮುದ್ರ ಪಾಲಾದ ಮೂವರು ವಿದ್ಯಾರ್ಥಿನಿಯರ ಮೃತದೇಹಗಳು ಪತ್ತೆ: ಸಿಎಂ ಪರಿಹಾರ ಘೋಷಣೆ

ABOUT THE AUTHOR

...view details