ಸುಬ್ರಹ್ಮಣ್ಯ (ದಕ್ಷಿಣ ಕನ್ನಡ):ಇಲ್ಲಿ ಪ್ರಸಿದ್ಧಕುಕ್ಕೆ ಸುಬ್ರಹ್ಮಣ್ಯ ದೇವಳಕ್ಕೆ ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕರಾದ ಅಟ್ಲಿ ಕುಮಾರ್ ಅವರು ಕುಟುಂಬ ಸಮೇತರಾಗಿ ಭೇಟಿ ನೀಡಿ, ದೇವರ ದರುಶನ ಪಡೆದರು.
ಈ ವೇಳೆ, ಸುಬ್ರಹ್ಮಣ್ಯ ದೇವಾಲಯಕ್ಕೆ ಆಗಮಿಸುವ ಭಕ್ತರ ಅನ್ನದಾನಕ್ಕೆ ಅಟ್ಲಿ ಅವರು 10 ಲಕ್ಷ ರೂಪಾಯಿ ದೇಣಿಗೆಯನ್ನು ಚೆಕ್ ಮೂಲಕ ನೀಡಿದರು. ದೇವರ ದರ್ಶನದ ಬಳಿಕ ಪ್ರಸಾದ ಸ್ವೀಕರಿಸಿದರು. ಬ್ಯಾಂಕ್ ಚೆಕ್ ಅನ್ನು ದೇವಾಲಯದ ಕಾರ್ಯನಿರ್ವಹಣಾ ಅಧಿಕಾರಿ ಅರವಿಂದ ಅಯ್ಯಪ್ಪ ಸುತ್ತುಗುಂಡಿ ಅವರಿಗೆ ಹಸ್ತಾಂತರ ಮಾಡಿದರು.
ಕುಕ್ಕೆಗೆ ತಮಿಳು ನಿರ್ದೇಶಕ ಅಟ್ಲಿ ಕುಟುಂಬ ಭೇಟಿ (ETV Bharat) ಈ ಸಂದರ್ಭದಲ್ಲಿ ಅರವಿಂದ ಅಯ್ಯಪ್ಪ ಸುತ್ತುಗುಂಡಿ ಅವರು ದೇವಸ್ಥಾನದ ವತಿಯಿಂದ ಅಟ್ಲಿ ಅವರಿಗೆ ಶಾಲು ಹೊಂದಿಸಿ, ಸ್ಮರಣೆಗೆ ನೀಡಿ ಗೌರವಿಸಿದರು. ದೇವಸ್ಥಾನದ ಶಿಷ್ಟಾಚಾರ ಅಧಿಕಾರಿ ಜಯರಾಮ ರಾವ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ತಮಿಳು ನಿರ್ದೇಶಕ ಅಟ್ಲಿ ಕುಮಾರ್ ಅವರು 2023ರಲ್ಲಿ ಶಾರುಖ್ ಖಾನ್ ಅಭಿನಯದ ಸೂಪರ್ ಹಿಟ್ ಸಿನಿಮಾ ಜವಾನ್ ನಿರ್ದೇಶಿಸುವ ಮೂಲಕ ಬಾಲಿವುಡ್‌ನಲ್ಲಿ ಮೋಡಿ ಮಾಡಿದ್ದರು. ಆ ಬಳಿಕ ಬಿಟೌನ್‌ನ ಮತ್ತೊಬ್ಬ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಜೊತೆ ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಇತ್ತೀಚೆಗೆ ಈ ಚಿತ್ರದ ಬಗ್ಗೆ ಅಪ್ಡೇಟ್ವೊಂದು ಹೊರಬಿದ್ದಿತ್ತು. ಶೀಘ್ರದಲ್ಲಿ ರಶ್ಮಿಕಾ ಅಟ್ಲಿ ಸಿನಿಮಾಕ್ಕೆ ಸಹಿ ಹಾಕಲಿದ್ದಾರೆ ಎಂದು ವರದಿಯಾಗಿತ್ತು. ಚಿತ್ರದಲ್ಲಿ ಸಲ್ಮಾನ್ ಖಾನ್ ಜೊತೆ ರಜನಿಕಾಂತ್ ಅಥವಾ ಕಮಲ್ ಹಾಸನ್ ಅವರು ನಟಿಸಲಿದ್ದಾರೆ ಎನ್ನುವ ಸುದ್ದಿಗಳು ಹರಿದಾಡಿವೆ.
ಅನ್ನದಾನಕ್ಕೆ ದೇಣಿಗೆ ನೀಡಿದ ಅಟ್ಲಿ ಕುಮಾರ್ (ETV Bharat) ಇದನ್ನೂ ಓದಿ:ರಶ್ಮಿಕಾರನ್ನು ವೀಲ್ಚೇರ್ನಲ್ಲಿ ಕರೆತಂದ ವಿಕ್ಕಿ ಕೌಶಲ್: ನಡೆಯಲಾಗದ ಸ್ಥಿತಿಯಲ್ಲಿ ಕನ್ನಡ ನಟಿ - ವಿಡಿಯೋ