ಬೆಂಗಳೂರು: ಸ್ನೇಹಿತನ ಜನ್ಮದಿನ ಆಚರಿಸಿಕೊಳ್ಳಲು ಹೋದ ಮೂವರು ವಿದ್ಯಾರ್ಥಿಗಳು ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಚಿಕ್ಕಜಾಲ ಸಂಚಾರ ವ್ಯಾಪ್ತಿಯ ಏರ್ಪೋರ್ಟ್ ರಸ್ತೆಯಲ್ಲಿ ತಡರಾತ್ರಿ ಘಟನೆ ನಡೆದಿದೆ. ಸುಜಿತ್ ಮತ್ತು ಸ್ನೇಹಿತರಾದ ರೋಹಿತ್ ಹಾಗೂ ಹರ್ಷ ಮೃತರು. ಇವರು ಇಲ್ಲಿನ ಜಿಕೆವಿಕೆಯಲ್ಲಿ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಸುಜಿತ್ ಜನ್ಮದಿನ ಆಚರಿಸಲು ಐವರು ವಿದ್ಯಾರ್ಥಿಗಳು ಎರಡು ಬೈಕ್ನಲ್ಲಿ ಏರ್ಪೋರ್ಟ್ ಕಡೆ ಲಾಂಗ್ ಡ್ರೈವ್ಗೆ ತೆರಳಿದ್ದರು. ಸುಜಿತ್, ರೋಹಿತ್ ಹಾಗೂ ಹರ್ಷ ಒಂದೇ ಬೈಕಿನಲ್ಲಿದ್ದರೆ, ಮತ್ತೊಂದು ಬೈಕಿನಲ್ಲಿ ಇನ್ನಿಬ್ಬರು ತೆರಳಿದ್ದರು. ಜನ್ಮದಿನ ಆಚರಿಸಿ ವಾಪಸ್ ಬರುವಾಗ ಬೈಕ್-ಗೂಡ್ಸ್ ವಾಹನದ ಮಧ್ಯೆ ಡಿಕ್ಕಿ ಸಂಭವಿಸಿದೆ. ಅಪಘಾತದ ರಭಸಕ್ಕೆ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.