ಚಿಕ್ಕಮಗಳೂರು:ಕನ್ನಡ ಪೂಜಾರಿ ಎಂದೇ ಪ್ರಸಿದ್ಧರಾಗಿರುವಹಿರೇಮಗಳೂರು ಕಣ್ಣನ್ ಅವರ ಸಂಬಳ ಮರುಪಾವತಿಸುವಂತೆ ಜಿಲ್ಲಾಡಳಿತ ನೋಟಿಸ್ ನೀಡಿರುವ ವಿಚಾರಕ್ಕೆ ಸಿಎಂ ಸಿದ್ದರಾಮಯ್ಯ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡುತ್ತಿದ್ದಂತೆ ರಾಜ್ಯ ಕಂದಾಯ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಅವರು ಬುಧವಾರ ತಾಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು. ನೋಟಿಸ್ ನೀಡಿದ್ದ ತಹಶೀಲ್ದಾರ್ ಸುಮಂತ್ ಅವರನ್ನು ವಿಚಾರಣೆಗೊಳಪಡಿಸಿದರು. ವಿವಿಧ ವಿಭಾಗಗಳ ಕಡತಗಳನ್ನೂ ಪರಿಶೀಲನೆ ಮಾಡಿದರು.
ಕಣ್ಣನ್ ಅವರಿಗೆ ನೋಟಿಸ್ ವಿಚಾರ: ಸಿಎಂ ಟ್ವೀಟ್ ಬಳಿಕ ಎಚ್ಚೆತ್ತ ಕಂದಾಯ ಇಲಾಖೆ - ಕಣ್ಣನ್ಗೆ ನೋಟಿಸ್
ಹಿರೇಮಗಳೂರು ಕಣ್ಣನ್ ಅವರಿಗೆ ನೋಟಿಸ್ ನೀಡಿರುವುದಕ್ಕೆ ಸಿಎಂ ಪ್ರತಿಕ್ರಿಯೆ ಗಮನಿಸಿ, ರಾಜ್ಯ ಕಂದಾಯ ಕಾರ್ಯದರ್ಶಿ ಚಿಕ್ಕಮಗಳೂರು ತಾಲೂಕು ಕಚೇರಿಗೆ ಭೇಟಿ ನೀಡಿ ಕಡತಗಳ ಪರಿಶೀಲನೆ ನಡೆಸಿದ್ದಾರೆ.
Published : Jan 25, 2024, 6:45 AM IST
|Updated : Jan 25, 2024, 1:09 PM IST
ಸಿಎಂ ಹೇಳಿದ್ದೇನು?:"ಹಿರೇಮಗಳೂರು ಕಣ್ಣನ್‌ರಿಗೆ ತಸ್ತೀಕ್ ಹಣ ವಾಪಸ್ ನೀಡುವಂತೆ ನೋಟಿಸ್ ನೀಡಿರುವುದರಲ್ಲಿ ತಹಶೀಲ್ದಾರ್ ತಪ್ಪಿದೆಯೇ ಹೊರತು ಕಣ್ಣನ್ ಅವರ ತಪ್ಪಿಲ್ಲ. ನೋಟಿಸ್ ಹಿಂಪಡೆಯಲು ಸಂಬಂಧಪಟ್ಟವರ ಜೊತೆ ಮಾತನಾಡುತ್ತೇನೆ. ಕಣ್ಣನ್ ಅವರಿಗೆ ಹೆಚ್ಚುವರಿಯಾಗಿ ಹಣ ಪಾವತಿಸಿರುವುದು ತಹಶೀಲ್ದಾರರು. ಅವರಿಂದಲೇ ಬಾಕಿ ಹಣ ಕಟ್ಟಿಸಿಕೊಳ್ಳುತ್ತೇವೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದರು.
ಇದನ್ನೂ ಓದಿ:ತಸ್ತೀಕ್ ಹಣ ವಾಪಸ್ ನೀಡುವಂತೆ ಕಣ್ಣನ್ ಅವರಿಗೆ ನೋಟಿಸ್ ನೀಡಿದ್ದು ತಹಶೀಲ್ದಾರ್ ತಪ್ಪು: ಸಿಎಂ