ಬೆಂಗಳೂರು:ಇಬ್ಬರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಜಿ.ಸತ್ಯವತಿ ಅವರನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ ಸರ್ಕಾರದ ಕಾರ್ಯದರ್ಶಿಯಾಗಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ.
ಐಎಎಸ್ ಅಧಿಕಾರಿಗಳಾದ ಜಿ.ಸತ್ಯವತಿ, ಡಿ.ರಂದೀಪ್ ವಿವಿಧ ಇಲಾಖೆಗೆ ವರ್ಗ - officials transfer - OFFICIALS TRANSFER
ಐಎಎಸ್ ಅಧಿಕಾರಿಗಳಾದ ಜಿ.ಸತ್ಯವತಿ, ಡಿ.ರಂದೀಪ್ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿ ಆದೇಶಿಸಿದೆ.
ಐಎಎಸ್ ಅಧಿಕಾರಿಗಳಾದ ಜಿ.ಸತ್ಯವತಿ, ಡಿ.ರಂದೀಪ್ ವಿವಿಧ ಇಲಾಖೆಗೆ ವರ್ಗ (ETV Bharat)
Published : Sep 11, 2024, 9:51 PM IST
ಡಿ.ರಂದೀಪ್ ಅವರನ್ನು ಸರ್ಕಾರದ ಕಾರ್ಯದರ್ಶಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ವರ್ಗ ಮಾಡಲಾಗಿದ್ದು, ಈ ಹುದ್ದೆಯಲ್ಲಿದ್ದ ಮಂಜುನಾಥ ಪ್ರಸಾದ್ ಅವರನ್ನು ಬಿಡುಗಡೆಗೊಳಿಸಲಾಗಿದೆ. ಇದಲ್ಲದೇ, ಡಿ.ರಂದೀಪ್ ಅವರಿಗೆ ಅನುಸೂಚಿತ ಪಂಗಡಗಳ ಕಲ್ಯಾಣ ಇಲಾಖೆಯ ಹೆಚ್ಚುವರಿ ಹುದ್ದೆ ನೀಡಿ ಸರ್ಕಾರ ಆದೇಶಿಸಿದೆ.