ಕರ್ನಾಟಕ

karnataka

ETV Bharat / state

ಮದುವೇ ಇಲ್ಲವೇ ಮಠ! ಮದುವೆ ಭಾಗ್ಯ ಕರುಣಿಸೆಂದು ದೇವರ ಮೊರೆ ಹೋದ ಯುವಕರು - Special Pooja For Marriage

ತಮಗೆ ಆದಷ್ಟು ಬೇಗ ಕಂಕಣ ಭಾಗ್ಯ ಕೂಡಿಬರಲೆಂದು ಪ್ರಾರ್ಥಿಸಿದ ಯುವಕರು ಚಿಕ್ಕಮಗಳೂರು ಜಿಲ್ಲೆಯ ಬ್ಯಾಡಿಗೆರೆಯ ಶ್ರೀ ಸಿದ್ದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

Special Pooja From Youths
ಚಿಕ್ಕಮಗಳೂರು ಯುವಕರಿಂದ ವಿಶೇಷ ಪ್ರಾರ್ಥನೆ

By ETV Bharat Karnataka Team

Published : Mar 22, 2024, 9:44 AM IST

ಚಿಕ್ಕಮಗಳೂರು: ಇತ್ತೀಚಿನ ದಿನಗಳಲ್ಲಿ ಯುವಕರಿಗೆ ಮದುವೆಯಾಗಲು ಯುವತಿಯರು ಸಿಗುತ್ತಿಲ್ಲ. ಹೀಗಾಗಿ ಹೆಣ್ಣು ಹುಡುಕಲು, ಮದುವೆಯಾಗಲು ಯುವಕರು ಇನ್ನಿಲ್ಲದ ಪರದಾಟ ನಡೆಸುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಬ್ರಹ್ಮಚಾರಿ ಯುವಕರಿಗೆ ದೇವರಿಗೆ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸುವುದನ್ನು ಹೊರತುಪಡಿಸಿ ಬೇರೆ ದಾರಿ ಕಾಣುತ್ತಿಲ್ಲ.

ಚಿಕ್ಕಮಗಳೂರು ಯುವಕರಿಂದ ವಿಶೇಷ ಪ್ರಾರ್ಥನೆ

ಚಿಕ್ಕಮಗಳೂರು ಜಿಲ್ಲೆಯ ಬ್ಯಾಡಿಗೆರೆಯ ಶ್ರೀ ಸಿದ್ದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಯುವಕರು ತಮಗೆ ಆದಷ್ಟು ಬೇಗ ಕಂಕಣ ಭಾಗ್ಯ ಕರುಣಿಸುವಂತೆ ಪ್ರಾರ್ಥಿಸಿಕೊಂಡರು. ಇಲ್ಲವಾದರೆ ನಾವು ಮಠ ಸೇರುತ್ತೇವೆ ಎಂಬ ಆಂತಕ ವ್ಯಕ್ತಪಡಿಸಿದ್ದಾರೆ. ಮದುವೆಯಾಗದೇ ಉಳಿದಿರುವ ಬ್ಯಾಡಿಗೆರೆ ಗ್ರಾಮದ 25ರಿಂದ 38 ವರ್ಷದ ಯುವಕರು ಶ್ರೀ ಸಿದ್ದೇಶ್ವರ ಸ್ವಾಮಿ, ಶ್ರೀ ಅಜ್ಜಯ್ಯ ಸ್ವಾಮಿ ಹಾಗು ಶ್ರೀ ಅನ್ನಪೂರ್ಣೇಶ್ವರಿ ದೇವರ ಮೊರೆ ಹೋಗಿದ್ದಾರೆ.

ಇದನ್ನೂ ಓದಿ:ಮೇಲುಕೋಟೆಯಲ್ಲಿ ಅದ್ಧೂರಿ ವೈರಮುಡಿ ಬ್ರಹ್ಮೋತ್ಸವ: ಸಚಿವರಿಂದ ಚಿನ್ನಲೇಪಿತ ಸಾರ್ವಭೌಮ ಛತ್ರ ದಾನ - Vairamudi Brahmotsava

30 ಬ್ರಹ್ಮಚಾರಿ ಯುವಕರ ಪಟ್ಟಿ ನೀಡಿ, ಶೀಘ್ರ ಹುಡುಗಿ ಸಿಗಲೆಂದು ವಿಶೇಷ ಪೂಜೆ ಮಾಡಿಸಿದ್ದಾರೆ. ಯುವಕರ ಒಂದು ಪಟ್ಟಿಯನ್ನು ಕಾಣಿಕೆ ಹುಂಡಿಗೂ, ಇನ್ನೊಂದು ಪಟ್ಟಿಯನ್ನು ಪರದೇಶಪ್ಪನ ಮಠಕ್ಕೂ ರವಾನಿಸಿದ್ದಾರೆ. ಸುಗ್ಗಿ ಜಾತ್ರಾ ಮಹೋತ್ಸವದ 4ನೇ ದಿನ ಇಂಥದ್ದೊಂದು ಪ್ರಾರ್ಥನೆ ಸಲ್ಲಿಕೆಯಾಗಿದೆ.

ಇದನ್ನೂ ಓದಿ:ಕಾಫಿನಾಡಿನಲ್ಲಿ ಹುಲಿ, ಕಾಡಾನೆ ಹಾವಳಿ: 5 ಜಾನುವಾರು ಸಾವು, ಬೆಳೆ ನಾಶ - Wild Elephants Menace

ABOUT THE AUTHOR

...view details