ETV Bharat / state

ಬೆಂಗಳೂರು: ಡೆತ್ ನೋಟ್ ಬರೆದಿಟ್ಟು ಕೆಎಸ್​ಡಿಎಲ್ ಅಧಿಕಾರಿ ಆತ್ಮಹತ್ಯೆ - KSDL OFFICER DIED

ಕೆಎಸ್​ಡಿಎಲ್ ಅಧಿಕಾರಿಯೊಬ್ಬರು ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಹಾಲಕ್ಷ್ಮಿ ಲೇಔಟ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

Amrit Shiroor
ಅಮೃತ್ ಶಿರೂರು (ETV Bharat)
author img

By ETV Bharat Karnataka Team

Published : Dec 30, 2024, 4:38 PM IST

ಬೆಂಗಳೂರು : ಕರ್ನಾಟಕ ಸಾಬೂನು ಹಾಗೂ ಮಾರ್ಜಕ ನಿಯಮಿತ (ಕೆಎಸ್​ಡಿಎಲ್) ಖರೀದಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಯೊಬ್ಬರು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಅಮೃತ್ ಶಿರೂರು (42) ಆತ್ಮಹತ್ಯೆಗೆ ಶರಣಾದ ಅಧಿಕಾರಿ. ಕೆಎಸ್​ಡಿಎಲ್​ನ ಖರೀದಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಅಮೃತ್​ ಅವರು, ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದರು. ಡಿ. 28ರ ಸಂಜೆ 5ಗಂಟೆ ಸುಮಾರಿಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನೆ ಸಂಬಂಧ ಪರಿಶೀಲನೆ ನಡೆಸಿ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಉತ್ತರ ವಿಭಾಗದ ಡಿಸಿಪಿ ಸೈದುಲು ಅಡಾವತ್ ಮಾತನಾಡಿದರು (ETV Bharat)

ಈ ಕುರಿತು ಉತ್ತರ ವಿಭಾಗದ ಡಿಸಿಪಿ ಸೈದುಲು ಅಡಾವತ್ ಮಾತನಾಡಿ, ಕೆಎಸ್​ಡಿಎಲ್​​ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ದೂರು ಬಂದಿತ್ತು. ಮನೆ ಮಾಲೀಕ ಗಿರೀಶ್ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ರು. ನಂತರ ಠಾಣೆ ಸಿಬ್ಬಂದಿ ಹೋಗಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಿ ನಂತರ ಅವರ ಸಹೋದರನಿಗೆ ನೀಡಿದ್ದೇವೆ. ಶಿವಮೊಗ್ಗ ಜಿಲ್ಲೆ ಶಿರಾಳಕೊಪ್ಪ ಮೂಲದ ಮೃತ ಅಮೃತ್​ ಶಿರೂರು ಅವರು 10 ವರ್ಷದಿಂದ ಕೆಎಸ್​ಡಿಎಲ್​ನಲ್ಲಿ ಕೆಲಸ ಮಾಡ್ತಿದ್ರು. ಸ್ಥಳದಲ್ಲಿ ಒಂದು ಡೆತ್ ನೋಟ್ ಸಿಕ್ಕಿದೆ. ಅದರಲ್ಲಿ ನನ್ನ ಸಾವಿಗೆ ಯಾರೂ ಕಾರಣ ಅಲ್ಲ ಎಂದು ಬರೆಯಲಾಗಿದೆ. ಅದೇ ರೀತಿ ನನ್ನ ಜೀವನ ಜಿಗುಪ್ಸೆಯಾಗಿದೆ ಎಂಬ ಮಾತನ್ನ ಉಲ್ಲೇಖಿಸಿದ್ದಾರೆ. ಮುಂದಿನ ದಿನಗಳಲ್ಲಿ ಪ್ರಕರಣದ ತನಿಖೆ ನಡೆಸಲಾಗುತ್ತೆ ಎಂದು ಹೇಳಿದರು.

ಡೆತ್ ನೋಟ್​ನಲ್ಲಿ ಯಾವ ಅಧಿಕಾರಿ ಹೆಸರು ಕೂಡ ಉಲ್ಲೇಖ ಮಾಡಿಲ್ಲ, ನನ್ನ ಕೆಲಸಕ್ಕೆ ನ್ಯಾಯ ಒದಗಿಸಲಾಗ್ತಿಲ್ಲ ಎಂದು ಮಾತ್ರ ಡೆತ್ ನೋಟ್​ನಲ್ಲಿ ಉಲ್ಲೇಖಿಸಿದ್ದಾರೆ. ಘಟನಾ ಸ್ಥಳ ನೋಡಿದಾಗ ಯಾವುದೇ ರೀತಿಯ ಸಂಶಯ ಕಂಡು ಬಂದಿಲ್ಲ. ಇನ್ನೂ ಮೆಡಿಕಲ್ ರಿಪೋರ್ಟ್ ಬರಬೇಕಿದೆ. ಅದರ ಆಧಾರದ ಮೇಲೆ ತನಿಖೆ ನಡೆಸುತ್ತೇವೆ. ಅಮೃತ್​ಗೆ ಮೊದಲ ಮದುವೆಯ ಡಿವೋರ್ಸ್ ಬಳಿಕ ಮತ್ತೊಂದು ಮದುವೆ ಆಗಿತ್ತು. ಅದು ಕೂಡ ವಿಚ್ಛೇದನ ಪ್ರಕ್ರಿಯೆ ನಡೆಯುತ್ತಿದೆ. ಅದರ ಬಗ್ಗೆ ನಮಗೆ ಯಾವುದೇ ಡಾಕ್ಯುಮೆಂಟ್ಸ್​ ಸಿಕ್ಕಿಲ್ಲ. ಕೌಟುಂಬಿಕ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬುದು ನಮ್ಮ ಅನುಮಾನ. ಅವರು ಬಾಡಿಗೆ ಮನೆಯಲ್ಲಿ ಒಬ್ಬರೇ ವಾಸವಾಗಿದ್ರು ಎಂದು ಡಿಸಿಪಿ ಮಾಹಿತಿ ನೀಡಿದರು.

ಇದನ್ನೂ ಓದಿ : ನಿವೃತ್ತಿಯಂಚಿನಲ್ಲಿದ್ದ ಮುಖ್ಯ ಶಿಕ್ಷಕ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ - HEADMASTER COMMITTED SUICIDE

ETV Bharat Logo

Copyright © 2025 Ushodaya Enterprises Pvt. Ltd., All Rights Reserved.