ಕರ್ನಾಟಕ

karnataka

ETV Bharat / state

ದೊಡ್ಡಬಳ್ಳಾಪುರ: ಹೆತ್ತ ತಾಯಿಯನ್ನೇ ಕೊಂದ ಮಗ - Son Kills Mother - SON KILLS MOTHER

- ಕ್ಷುಲ್ಲಕ ಕಾರಣಕ್ಕೆ ಜಗಳ, ಮಗನಿಂದಲೇ ತಾಯಿಯ ಕೊಲೆ - ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಘಟನೆ, ಆರೋಪಿ ಬಂಧಿಸಿದ ಪೊಲೀಸರು

mother murder
ಕೊಲೆ ನಡೆದ ಸ್ಥಳದಲ್ಲಿ ಪೊಲೀಸರಿಂದ ಪರಿಶೀಲನೆ (ETV Bharat)

By ETV Bharat Karnataka Team

Published : Sep 9, 2024, 10:07 PM IST

ದೊಡ್ಡಬಳ್ಳಾಪುರ (ಬೆಂ.ಗ್ರಾ):ಮಗನೇ ತನ್ನ ಹೆತ್ತ ತಾಯಿಯನ್ನು ಕೊಲೆ ಮಾಡಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕು ಮುದ್ದನಾಯಕನಪಾಳ್ಯ ಗ್ರಾಮದ ಹೊರವಲಯದ ರಾಗರಾಳ್ಯಗುಟ್ಟೆಯಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.

ರತ್ನಮ್ಮ (56) ಮಗನಿಂದಲೇ ಹತ್ಯೆಯಾದ ಮಹಿಳೆ. ಆಕೆಯ ಮಗನಾದ ಗಂಗಾಧರ್ ಕೃತ್ಯ ಎಸಗಿರುವ ಆರೋಪಿಯಾಗಿದ್ದು, ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮೃತ ರತ್ನಮ್ಮಳಿಗೆ ಇಬ್ಬರು ಗಂಡು ಮಕ್ಕಳು. ಹಿರಿಯ ಮಗ ಗಜ, ಎರಡನೇ ಮಗ ಗಂಗಾಧರ್, ಎಲ್ಲರೂ ಕೂಲಿ ಕೆಲಸ ಮಾಡುತ್ತ ಗ್ರಾಮದ ಹೊರಗಿನ ಗುಟ್ಟೆಯಲ್ಲಿ ವಾಸವಾಗಿದ್ದರು. ಇವರೆಲ್ಲರೂ ಸಹ ಕುಡಿತದ ಚಟಕ್ಕೆ ದಾಸರಾಗಿದ್ದರು. ನಿತ್ಯವೂ ಮದ್ಯ ಸೇವಿಸಿಕೊಂಡು ಕ್ಷುಲ್ಲಕ ವಿಚಾರಕ್ಕೆ ಪರಸ್ಪರ ಕಿತ್ತಾಡಿಕೊಳ್ಳುತ್ತಿದ್ದರು ಎನ್ನಲಾಗಿದೆ.

ಆರೋಪಿ ಗಂಗಾಧರ್​​ಗೆ ತಾಯಿ ತನ್ನ ಮಾತು ಕೇಳುತ್ತಿಲ್ಲ ಎಂಬ ಬೇಸರವಿತ್ತು. ಇದೇ ಕಾರಣಕ್ಕೆ ಇಬ್ಬರ ನಡುವೆ ಆಗಾಗ್ಗೆ ಜಗಳವಾಗುತ್ತಿತ್ತು. ಇಂದು ಬೆಳಗ್ಗೆಯೂ ಮತ್ತೆ ಜಗಳ ನಡೆದಿದೆ. ಕೋಪದಲ್ಲಿ ಗಂಗಾಧರ್ ಚಾಕುವಿನಿಂದ ತಾಯಿಯ ಕತ್ತು ಕೊಯ್ದಿದ್ದಾನೆ, ಅಧಿಕ ರಕ್ತಸ್ರಾವದಿಂದ ಆಕೆ ಸಾವನ್ನಪ್ಪಿದ್ದಾಳೆ. ಕೊಲೆ ನಂತರ ಆರೋಪಿಯು ಚಾಕು ಹಿಡಿದುಕೊಂಡು ಊರಿನಲ್ಲಿ ಓಡಾಡುತ್ತಿದ್ದ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ. ಬಾಬಾ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು, ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ:'ರೇಣುಕಾಸ್ವಾಮಿ ಬಿಡಬೇಡಿ' ಎಂದಿದ್ದ ಪವಿತ್ರಾಗೌಡ!; ಇದು ಚಾರ್ಜ್​​​​ಶೀಟ್​​ನಲ್ಲಿರುವ ಸ್ಫೋಟಕ ಅಂಶ! - PAVITRA GOWDA STATEMENTS

ABOUT THE AUTHOR

...view details