ಬೆಂ.ಗ್ರಾಮಾಂತರ, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ನಾಮಪತ್ರ ಹಿಂಪಡೆದ ಅಭ್ಯರ್ಥಿಗಳು - Nomination Papers - NOMINATION PAPERS
ಸೋಮವಾರ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದು ದಕ್ಷಿಣ ಕನ್ನಡ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆ ಲೋಕಸಭಾ ಕ್ಷೇತ್ರದಲ್ಲಿ ಹಲವು ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದಾರೆ. ಈಗ ಉಳಿದಿರುವ ಒಟ್ಟು ಅಭ್ಯರ್ಥಿಗಳ ಮಾಹಿತಿ ಇಲ್ಲಿದೆ.
ಮಂಗಳೂರು:ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಸತೀಶ್ ಬೂಡುಮಕ್ಕಿ ನಾಮಪತ್ರ ಹಿಂಪಡೆದುಕೊಂಡಿದ್ದಾರೆ. ಇದರೊಂದಿಗೆ ಅಂತಿಮವಾಗಿ 9 ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದಿದ್ದಾರೆ. ಉಮೇದುವಾರಿಕೆ ವಾಪಸ್ ಪಡೆಯಲು ಸೋಮವಾರ ಕೊನೆಯ ದಿನವಾಗಿತ್ತು.
ದಕ್ಷಿಣ ಕನ್ನಡ: ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳು
ಪಕ್ಷ
ಅಭ್ಯರ್ಥಿ
1
ಬಿಜೆಪಿ
ಕ್ಯಾ. ಬೃಜೇಶ್ ಚೌಟ
2
ಕಾಂಗ್ರೆಸ್
ಪದ್ಮರಾಜ್ .ಆರ್. ಪೂಜಾರಿ
3
ಬಹುಜನ ಸಮಾಜ ಪಾರ್ಟಿ
ಕಾಂತಪ್ಪ ಅಲಂಗಾರ
4
ಕರುನಾಡ ಸೇವಕರ ಪಕ್ಷ
ದುರ್ಗಾ ಪ್ರಸಾದ್
5
ಉತ್ತಮ ಪ್ರಜಾಕೀಯ ಪಕ್ಷ
ಮನೋಹರ
6
ಕರ್ನಾಟಕ ರಾಷ್ಟ್ರ ಸಮಿತಿ
ರಂಜಿನಿ .ಎಂ.
7
ಪಕ್ಷೇತರ
ದೀಪಕ್ ರಾಜೇಶ್ ಕುವೆಲ್ಲೊ
8
ಪಕ್ಷೇತರ
ಮೆಕ್ಸಿಂ ಪಿಂಟೊ
9
ಪಕ್ಷೇತರ
ಸುಪ್ರೀತ್ ಕುಮಾರ್ ಪೂಜಾರಿ ಕಟೀಲು
ಇನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೂ 13 ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದಿದ್ದು, ಅಂತಿಮವಾಗಿ ಕಣದಲ್ಲಿ 15 ಅಭ್ಯರ್ಥಿಗಳು ಉಳಿದಿದ್ದಾರೆಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ: ಅಂತಿಮ ಕಣದಲ್ಲಿರುವ 15 ಅಭ್ಯರ್ಥಿಗಳು