ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ಗೆ ಮೆಜಾರಿಟಿ ಬರದೇ ಇದ್ರೆ ತಾನು ಬದಲಾವಣೆ ಆಗೋದು ಗ್ಯಾರಂಟಿ ಅನ್ನೋ ಭಯ ಸಿಎಂ ಸಿದ್ದರಾಮಯ್ಯ ಅವರಿಗೆ ಬಂದಿದೆ. ಅದಕ್ಕಾಗಿ ಸಿಎಂ ಸೀಟ್ನಲ್ಲಿ ಮುಂದುವರೆಯಬೇಕಾದರೆ 60 ಸಾವಿರ ಲೀಡ್ ಬೇಕು ಎಂದಿದ್ದಾರೆ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ ಟಿ ದೇವೇಗೌಡ ತಿಳಿಸಿದ್ದಾರೆ.
ಇಂದು ಇಲ್ಲಿನ ಖಾಸಗಿ ಹೋಟೆಲ್ನಲ್ಲಿ ಅಮಿತ್ ಶಾ ಜೊತೆಗಿನ ಸಭೆಗೂ ಮುನ್ನ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರೀಯ ನಾಯಕ ಗೃಹ ಸಚಿವ ಅಮಿತ್ ಶಾ ಇಂದು ಕರ್ನಾಟಕ ಸಭೆ ಕರೆದಿದ್ದಾರೆ. ಕೋರ್ ಕಮಿಟಿ ಮುಖಂಡರ ಸಭೆ ಇದೆ. ನಮ್ಮ ಕಡೆಯಿಂದ ಆರು ಮುಖಂಡರನ್ನು ಸಭೆಗೆ ಕರೆದಿದ್ದಾರೆ. ಎರಡೂ ಪಕ್ಷದ ಮುಖಂಡರ ಸಭೆ ಕರೆದು, ಚುನಾವಣೆ ಸಿದ್ಧತೆ ಹೇಗೆ ಸಾಗುತ್ತಿದೆ ಎನ್ನುವ ಕುರಿತು ಮುಕ್ತವಾಗಿ ಚರ್ಚೆ ಮಾಡಲಾಗುತ್ತದೆ. ಮುಂದೇನು ಮಾಡಬೇಕು ಅಂತ ಮುಕ್ತವಾಗಿ ಚರ್ಚಿಸಿ ಎಲ್ಲ ಕ್ಷೇತ್ರ ಗೆಲ್ಲಲು ರಣತಂತ್ರ ಹೆಣೆಯಲಾಗುತ್ತದೆ ಎಂದರು.
ಸಿಎಂ ಸೀಟ್ನಲ್ಲಿ ಮುಂದುವರೆಯಬೇಕಾದರೆ 60 ಸಾವಿರ ಲೀಡ್ ಬೇಕು ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಜಿ ಟಿ ದೇವೇಗೌಡ, ಸಿದ್ದರಾಮಯ್ಯ ಅವರ ಮನಸಲ್ಲಿ ಇರೋದನ್ನ ಹೇಳಿದ್ದಾರೆ. ಒಂದು ವರ್ಷದಿಂದ ಸಿಎಂ ಬದಲಾವಣೆ, ನಾಲ್ವರು ಡಿಸಿಎಂ ನೇಮಕದ ಬಗ್ಗೆ ಚರ್ಚೆ ನಡೀತಿದೆ. ಲೋಕಸಭೆ ನಂತರ ಸಿದ್ದರಾಮಯ್ಯ ಕೆಳಗಿಳಿಸ್ತಾರೆ ಅಂತ ಅವರ ಪಕ್ಷದವರೇ ಚರ್ಚೆ ಮಾಡ್ತಿದ್ದಾರೆ. ಹೀಗಾಗಿ ಮೆಜಾರಿಟಿ ಬಂದ್ರೆ, ಪಕ್ಷ ಗೆದ್ದರೆ ಮಾತ್ರ ನಾನು ಉಳಿತೇನೆ, ಗೆಲ್ಲದಿದ್ರೆ ನನ್ನ ಬದಲಾವಣೆ ಮಾಡ್ತಾರೆ ಅನ್ನೋ ಸಂದೇಶ ಕೊಟ್ಟಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದರು.
ಇದನ್ನೂ ಓದಿ:ಯಾರು ಏನೇ ತಂತ್ರ ಮಾಡಿದರೂ ಮತ್ತೆ ಕುಮಾರಸ್ವಾಮಿ ಸರ್ಕಾರ ಬರೋದು ಖಚಿತ: ದೇವೇಗೌಡ ಭವಿಷ್ಯ - HD Devegowda