ಕರ್ನಾಟಕ

karnataka

ETV Bharat / state

'ಕೊರಗಜ್ಜನ ಕಟ್ಟೆ ನೆಮ್ಮದಿ ಕೊಡುತ್ತದೆ': ಕುತ್ತಾರಿಗೆ ನಟ ಶಿವರಾಜ್​ಕುಮಾರ್​ ದಂಪತಿ ಭೇಟಿ - SHIVARAJKUMAR VISITS KUTHAR

ಹ್ಯಾಟ್ರಿಕ್ ಹೀರೋ ಶಿವರಾಜ್​​ಕುಮಾರ್ ಮತ್ತು ಪತ್ನಿ ಗೀತಾ ಕುತ್ತಾರು ದೆಕ್ಕಾಡು ಕೊರಗಜ್ಜನ ಆದಿಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆ.

Shivarajkumar visits kuthar
ಕುತ್ತಾರಿಗೆ ಶಿವರಾಜ್​​ಕುಮಾರ್ ದಂಪತಿ ಭೇಟಿ (Photo source: ETV Bharat)

By ETV Bharat Entertainment Team

Published : Oct 15, 2024, 1:06 PM IST

Updated : Oct 15, 2024, 1:22 PM IST

ಉಳ್ಳಾಲ (ದಕ್ಷಿಣ ಕನ್ನಡ): ''ಕುತ್ತಾರು ಅಜ್ಜನ ಕಟ್ಟೆಗೆ ಬಂದಾಗ ನೆಮ್ಮದಿ ಸಿಗುತ್ತದೆ. ನಂಬಿಕೆ ಇರುವುದರಿಂದ ಮಂಗಳೂರು ವ್ಯಾಪ್ತಿಗೆ ಬಂದಾಗ ಈ ಭಾಗಕ್ಕೆ ಭೇಟಿ ನೀಡುತ್ತಿರುತ್ತೇನೆ'' ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್​​ಕುಮಾರ್ ತಿಳಿಸಿದ್ದಾರೆ. ಕುತ್ತಾರು ದೆಕ್ಕಾಡು ಕೊರಗಜ್ಜನ ಆದಿಸ್ಥಳಕ್ಕೆ ಪತ್ನಿ ಗೀತಾ ಜೊತೆ ಭೇಟಿ ನೀಡಿದ ಕನ್ನಡದ ಖ್ಯಾತ ನಟ ಬಳಿಕ ಮಾಧ್ಯಮದವರೊಂದಿಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ಶೃಂಗೇರಿ ಮಠ, ಶ್ರೀ ಕೃಷ್ಣ ಮಠ, ಕುದ್ರೋಳಿ ಗೋಕರ್ಣನಾಥೇಶ್ವರ, ವನದೇವತೆ, ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ನೀಡುತ್ತಾ ಬಂದಿದ್ದೇನೆ. ಈ ಎಲ್ಲ ಸಾನಿಧ್ಯಗಳಿಗೆ ಭೇಟಿ ಕೊಟ್ಟಾಗ ನೆಮ್ಮದಿ ಇರುತ್ತದೆ. ನಂಬಿಕೆಯೂ ಬಲವಾಗಿರುವುದರಿಂದ ಜೀವನ ಚೆನ್ನಾಗಿರಲಿ ಎಂದು ಭೇಟಿ ನೀಡುತ್ತಾ ಬಂದಿದ್ದೇನೆ. ನವೆಂಬರ್ ಆಸುಪಾಸಿನಲ್ಲಿ ಅರ್ಜುನ್ ಜನ್ಯ ನಿರ್ದೇಶನದ 45 ಚಿತ್ರ ತೆರೆಕಾಣಲಿದೆ. ರಿಯಲ್ ಸ್ಟಾರ್ ಉಪೇಂದ್ರ , ರಾಜ್ ಬಿ ಶೆಟ್ಟಿ ಜೊತೆ ತೆರೆಹಂಚಿಕೊಂಡಿರುವ ಚಿತ್ರವಿದು. ಕೈಯಲ್ಲಿ ಐದಾರು ಪ್ರಾಜೆಕ್ಟ್​ಗಳಿವೆ. ಶೀಘ್ರವೇ ಸಿನಿಮಾ ಒಂದು ಆರಂಭವಾಗಲಿದೆ ಎಂದರು.

ಕುತ್ತಾರಿಗೆ ಶಿವರಾಜ್​​ಕುಮಾರ್ ದಂಪತಿ ಭೇಟಿ (video source: ETV Bharat)

ಇದನ್ನೂ ಓದಿ:ಪ್ರಮೋದ್​ ಶೆಟ್ಟಿಯೀಗ 'ಜಲಂಧರ': ನಾಯಕ ನಟನಾಗಿ ಮತ್ತೆ ಅದೃಷ್ಟ ಪರೀಕ್ಷೆಗಳಿದ 'ಲಾಫಿಂಗ್ ಬುದ್ಧ'

ಈ ಸಂದರ್ಭ ನಿರ್ಮಾಪಕ ಶ್ರೀಕಾಂತ್, ರಾಜೇಶ್ ಭಟ್, ಶ್ರೀ ಪಂಜಂದಾಯ ಬಂಟ ವೈದ್ಯನಾಥ ಮತ್ತು ಕೊರಗತನಿಯ ದೈವಗಳ ಆದಿಸ್ಥಳ ಟ್ರಸ್ಟ್ ಉಪಾಧ್ಯಕ್ಷ ಮಹಾಬಲ ಹೆಗ್ಡೆ ದೆಬ್ಬೇಲಿ, ಟ್ರಸ್ಟಿಗಳಾದ ಪ್ರೀತಮ್ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ, ಜಗನ್ನಾಥ್ ರೈ, ವಿದ್ಯಾಚರಣ್ ಭಂಡಾರಿ, ಶ್ರೀರಾಮ್ ರೈ, ಬಾಲಕೃಷ್ಣ ರೈ ಉಪಸ್ಥಿತರಿದ್ದರು.

ಇದನ್ನೂ ಓದಿ:'ನಾನು ಅನ್​​​ಫಿಟ್​​ ಅನಿಸ್ತಿದೆ': ಬಿಗ್​ ಬಾಸ್​ ಮನೆಯಲ್ಲಿ ಧನರಾಜ್​ ಕಣ್ಣೀರು; ಬ್ಯಾಗ್​ ಪ್ಯಾಕ್ ಮಾಡಲು ಸಲಹೆ

Last Updated : Oct 15, 2024, 1:22 PM IST

ABOUT THE AUTHOR

...view details