ಶಿವಮೊಗ್ಗ: ಪುನೀತ್ ರಾಜ್ಕುಮಾರ್ ನಮ್ಮನ್ನಗಲಿ ಇಂದಿಗೆ ಮೂರು ವರ್ಷ. ಅವರ ಹೆಸರಿನಲ್ಲಿ ಇಂದಿಗೂ ಪುಣ್ಯಕಾರ್ಯಗಳು ಮುಂದುವರಿದಿವೆ. ಮೂರನೇ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಅಪ್ಪು ಅಭಿಮಾನಿಗಳು ವಿಧವೆಯೊಬ್ಬರಿಗೆ ಸುಮಾರು 20 ಸಾವಿರ ರೂ. ಮೌಲ್ಯದ 2 ಮೇಕೆಗಳನ್ನು ನೀಡಿ, ಅವರ ಸ್ವಾಭಿಮಾನಿ ಬದುಕಿಗೆ ದಾರಿದೀಪವಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಪ್ರಶಾಂತ್ ಹಾಗೂ ಸ್ನೇಹಿತರು ಸೇರಿ ತಾವೇ ಹಣ ಸಂಗ್ರಹಿಸಿ ಎರಡು ಹೆಣ್ಣು ಮೇಕೆಗಳನ್ನು ಅಪ್ಪು ನೆನಪಿಗಾಗಿ ನೀಡಿದ್ದಾರೆ.
ಭದ್ರಾವತಿ ತಾಲೂಕಿನ ಜಂಕ್ಷನ್ ಬಳಿಯ ರಂಗನಾಥಪುರ ಗ್ರಾಮದ ಮಹಿಳೆ ಅನು ಎಂಬವರಿಗೆ ಎರಡು ಮೇಕೆ ಮರಿಗಳನ್ನು ನೀಡಲಾಗಿದೆ. ಮಹಿಳೆಯ ಪತಿ ತೀರಿಕೊಂಡು ಸುಮಾರು 7 ತಿಂಗಳುಗಳಾಗಿದೆ. ಅನು ಅವರಿಗೆ ಎರಡು ಮಕ್ಕಳಿದ್ದು, ಅವರ ಮುಂದಿನ ಜೀವನಕ್ಕೆ ಅನುಕೂಲವಾಗಲೆಂದು ತಿರುಮಲ ಚಾರಿಟೇಬಲ್ ಫೌಡೇಂಷನ್ನ ಪ್ರಶಾಂತ್ ಹಾಗೂ ಅವರ ಸ್ನೇಹಿತರ ತಂಡ ತಮ್ಮಲ್ಲಿಯೇ 20 ಸಾವಿರ ರೂ. ಸಂಗ್ರಹಿಸಿ, 2 ಹೆಣ್ಣು ಮೇಕೆಗಳನ್ನು ತಂದುಕೊಟ್ಟಿದ್ದಾರೆ.
ಇದನ್ನೂ ಓದಿ:ಹಾವೇರಿಯ ಅಭಿಮಾನಿ ಕಟ್ಟಿದ ಪುನೀತ್ ದೇಗುಲದಲ್ಲಿ ವಿಶೇಷ ಪೂಜೆ; ಗ್ರಾಮಸ್ಥರಿಂದ ನಮನ