ಶಿವಮೊಗ್ಗ:ರಾಜ್ಯದ ಗಮನ ಸೆಳೆದಿರುವ ಶಿವಮೊಗ್ಗ ಹಿಂದು ಮಹಾಮಂಡಳದ ಗಣಪನ ಮೆರವಣಿಗೆ ಶಾಂತಯುತವಾಗಿ ಸಾಗುತ್ತಿದೆ. ಬೆಳಗ್ಗೆ 11 ಗಂಟೆಗೆ ವಿಸರ್ಜನಾ ಪೂರ್ವ ಮೆರವಣಿಗೆಯು ಸಂಜೆ 5:30 ರ ಸುಮಾರಿಗೆ ಗಾಂಧಿ ಬಜಾರ್ ದಾಟಿ ಮುಂದೆ ಸಾಗಿತು. ಈ ವೇಳೆ ಯುವ ಸಮೂಹ ಸೇರಿದಂತೆ ಮಹಿಳೆಯರು ಹಾಗೂ ಮಕ್ಕಳು ಮೆರವಣಿಗೆಯಲ್ಲಿ ಸಾಗಿದ್ದು ವಿಶೇಷವಾಗಿತ್ತು.
ಶಿವಮೊಗ್ಗ: ಹಿಂದೂ ಮಹಾಮಂಡಳ ಗಣಪನ ಅದ್ಧೂರಿ ಮೆರವಣಿಗೆ, ಪಟಾಕಿ ಸಿಡಿಸಿ ಸಂಭ್ರಮ - Shimogga ganesh procession - SHIMOGGA GANESH PROCESSION
ಶಿವಮೊಗ್ಗದ ಹಿಂದೂ ಮಹಾಮಂಡಳ ಗಣಪನ ಮೆರವಣಿಗೆ ಅದ್ಧೂರಿಯಿಂದ ಸಾಗಿದೆ. ನಾಳೆ ಬೆಳಗಿನ ಜಾವ ಗಣೇಶ ನಿಮಜ್ಜನ ನಡೆಯುವ ಸಾಧ್ಯತೆ ಇದೆ.
ಶಿವಮೊಗ್ಗ: ಶಾಂತಿಯುತವಾಗಿ ಸಾಗುತ್ತಿರುವ ಹಿಂದೂ ಮಹಾಮಂಡಳ ಗಣಪನ ಮೆರವಣಿಗೆ (ETV Bharat)
Published : Sep 17, 2024, 9:45 PM IST
|Updated : Sep 17, 2024, 10:03 PM IST
ದಾರಿ ಉದ್ದಕ್ಕೂ ಭಜನೆ, ಡ್ಯಾನ್ಸ್ ನೊಂದಿಗೆ ಯುವ ಸಮೂಹ ಸಾಗಿತ್ತು. ಗಾಂಧಿ ಬಜಾರ್ ನಲ್ಲಿ ಯುವಕರು ಕರ್ಪೂರ ಹಚ್ಚಿ ಡ್ಯಾನ್ಸ್ ಮಾಡಿದರು. ಗಾಂಧಿ ಬಜಾರ್ ನಲ್ಲಿ ರಾಷ್ಟ್ರ ಭಕ್ತ ಬಳಗದ ಕೆ.ಎಸ್.ಈಶ್ವರಪ್ಪ ಹಾಗೂ ಇವರ ಪುತ್ರ ಕೆ.ಈ.ಕಾಂತೇಶ್ ಅವರು ಸಾಗಿದಾಗ ಅಭಿಮಾನಿಗಳು ಅವರನ್ನು ಎತ್ತಿಕೊಂಡು ಕುಣಿದರು. ಇದೇ ವೇಳೆ, ಭಜನೆ ಮಾಡುತ್ತಿದ್ದ ಯುವಕರೊಂದಿಗೆ ಸಂಸದ ಬಿ.ವೈ.ರಾಘವೇಂದ್ರ ಸಾಗಿದರು. ಅಲ್ಲಲ್ಲಿ ಸೆಲ್ಪಿಗೆ ನಗು ಬಿರಿದರು.
Last Updated : Sep 17, 2024, 10:03 PM IST