ಬೆಂಗಳೂರು:ಮದ್ಯಪಾನ ಮಾಡಿ ಶಾಲಾ ವಾಹನ ಚಲಾಯಿಸುತ್ತಿದ್ದವರ ವಿರುದ್ಧ ಬೆಂಗಳೂರು ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕೆಲ ದೂರುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು, ಇದುವರೆಗೆ ಒಟ್ಟು 12,165 ವಾಹನಗಳ ಚಾಲಕರನ್ನು ತಪಾಸಣೆಗೊಳಪಡಿಸಿದ್ದಾರೆ. ಈ ಪೈಕಿ, 72 ಚಾಲಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಮದ್ಯ ಸೇವಿಸಿ ಶಾಲಾ ವಾಹನ ಚಲಾಯಿಸಿದರೆ ಕಠಿಣ ಕ್ರಮ; 72 FIR ದಾಖಲಿಸಿದ ಪೊಲೀಸರು - Drunk Driving Cases - DRUNK DRIVING CASES
ಪಾನಮತ್ತರಾಗಿ ಶಾಲಾ ವಾಹನ ಚಾಲನೆಯ ವಿರುದ್ಧ ಕಠಿಣ ಕ್ರಮ ಕೈಗೊಂಡಿರುವ ಬೆಂಗಳೂರು ಪೊಲೀಸರು, 72 ಚಾಲಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಚಾಲಕನ ವಿರುದ್ಧ ಕ್ರಮ ಕೈಗೊಂಡ ಪೊಲೀಸರು (ETV Bharat)
Published : Aug 5, 2024, 3:33 PM IST
ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿರುವ ಕೆಲ ಚಾಲಕರಿಂದ ಅಪಘಾತ, ಎಲ್ಲೆಂದರಲ್ಲಿ ಶಾಲಾ ವಾಹನಗಳ ನಿಲುಗಡೆ ಮುಂತಾದ ಆರೋಪಗಳು ಬಂದಿದ್ದವು. ಇದರಿಂದಾಗಿ ಈ ವರ್ಷದ ಆರಂಭದಿಂದಲೇ ಸಂಚಾರಿ ಪೊಲೀಸರು ಜನವರಿಯಲ್ಲಿ 16, ಪೆಬ್ರವರಿಯಲ್ಲಿ 07, ಜುಲೈ ತಿಂಗಳಿನಲ್ಲಿ 23 ಹಾಗೂ ಆಗಸ್ಟ್‌ನಲ್ಲಿ ಇದುವರೆಗೂ 26 ಪ್ರಕರಣಗಳನ್ನು ದಾಖಲಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ:ಬಸ್ನಡಿ ಸಿಲುಕಿ ದ್ವಿಚಕ್ರ ವಾಹನ ಸವಾರ ಸಾವು: ಸಿಸಿಟಿವಿ ದೃಶ್ಯ - Road Accident