ಮಾಜಿ ಕ್ರಿಕೆಟಿಗ್ ಜಾವಗಲ್ ಶ್ರೀನಾಥ್ ಮಾತನಾಡಿದರು. ಮೈಸೂರು:ಮೈಸೂರು-ಕೊಡಗು ಲೋಕಸಭಾ ಚುನಾವಣೆಯ ರಾಯಭಾರಿ ಹಾಗು ಮಾಜಿ ಹಿರಿಯ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಇಂದು ಕುವೆಂಪು ನಗರದಲ್ಲಿರುವ ಜ್ಞಾನಗಂಗಾ ಪಿಯು ಕಾಲೇಜಿನ ಮತಗಟ್ಟೆಯಲ್ಲಿ ಮತದಾನ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, "ಜನರು ಬೇಗ ಬೇಗ ಬಂದು ಮತದಾನ ಮಾಡಬೇಕು. ಮೈಸೂರು ಜಿಲ್ಲಾ ಸ್ವೀಪ್ ಸಮಿತಿಯಿಂದ ಮತದಾನದ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸಲಾಗಿದೆ. ಜಿಲ್ಲೆಯ ಚುನಾವಣಾ ರಾಯಭಾರಿಯಾಗಿರುವ ನಾನು ಬಹಳ ಖುಷಿಯಿಂದ ವೋಟ್ ಮಾಡಿದ್ದೇನೆ. ಮತದಾನ ನಮ್ಮ ಹಕ್ಕು, ಎಲ್ಲರೂ ಮತದಾನ ಮಾಡಬೇಕು. ಒಳ್ಳೆಯ ನಾಯಕರನ್ನು ನೀವೇ ಆಯ್ಕೆ ಮಾಡಬೇಕು. ಯುವ ಮತದಾರರು ಸಾಕಷ್ಟು ಸಂಖ್ಯೆಯಲ್ಲಿದ್ದು ಯೋಚಿಸಿ ಮತ ಹಾಕಿ. ಈ ಮೂಲಕ ನೀವು ದೇಶದ ಅಭಿವೃದ್ಧಿಗೆ ಕೈಜೋಡಿಸಿ" ಎಂದು ಹೇಳಿದರು.
'ಮತ ಹಾಕಲು ಹೈದರಾಬಾದ್‌ನಿಂದ ಬಂದೆ':ನಿನ್ನೆ ಹೈದರಾಬಾದ್ನಲ್ಲಿದ್ದು, ಇಂದು ಮತ ಹಾಕಲು ಅಲ್ಲಿಂದ ಬಂದಿದ್ದೇನೆ ಎಂದು ಜಾವಗಲ್ ಶ್ರೀನಾಥ್ ತಿಳಿಸಿದರು.
ಇದನ್ನೂಓದಿ:ಸ್ಯಾಂಡಲ್ವುಡ್ ಸೆಲೆಬ್ರಿಟಿಗಳು ಯಾರೆಲ್ಲಾ ವೋಟ್ ಮಾಡಿದ್ರು?: ವಿಡಿಯೋ ನೋಡಿ - Sandalwood Stars Voting
ಗಮನ ಸೆಳೆದ ಸಿಬ್ಬಂದಿ:ನಂಜನಗೂಡು ತಾಲೂಕಿನ ವಿಶೇಷ ಮತಗಟ್ಟೆಗಳಲ್ಲಿ ಚುನಾವಣಾ ಸಿಬ್ಬಂದಿ ವಿಷಯಾಧಾರಿತ ಉಡುಗೆ ತೊಟ್ಟು ಕರ್ತವ್ಯಕ್ಕೆ ಹಾಜರಾಗಿದ್ದು, ಎಲ್ಲರ ಗಮನ ಸೆಳೆಯಿತು. ವಿಶೇಷ ಮತಗಟ್ಟೆಗಳಲ್ಲಿ ಚುನಾವಣಾ ಸಿಬ್ಬಂದಿಯೂ ವಿಶಿಷ್ಟವಾಗಿ ಕಂಡುಬಂದರು.
ತಾಂಡವಪುರ, ಹುಲ್ಲಹಳ್ಳಿ ಯತ್ನಿಕ್ ಮತಗಟ್ಟೆಯಲ್ಲಿ ಬಿಳಿಪಂಚೆ, ಬಿಳಿಶರ್ಟ್, ಶಲ್ಯ, ಮೈಸೂರುಪೇಟ ತೊಟ್ಟಿದ್ದು, ಸಖಿ ಮತಗಟ್ಟೆಗಳಲ್ಲಿ ಗುಲಾಬಿ ಬಣ್ಣದ ಉಡುಗೆ ಧರಿಸಿದ್ದರು. ಬಂಕಹಳ್ಳಿಯ ಹಾಡಿ ಮತಗಟ್ಟೆಗಳಲ್ಲಿ ಪುಕ್ಕದ ಕಿರೀಟ, ನಡುವಿಗೆ ಸೊಪ್ಪುಗಳಿಂದ ಸುತ್ತಿಕೊಂಡು ಗಮನ ಸೆಳೆದರು. ಇತ್ತ ದೇವಿರಮ್ಮನಹಳ್ಳಿ ಪಾಳ್ಯದ ಯುವ ಮತಗಟ್ಟೆಯಲ್ಲಿ ಸಿಬ್ಬಂದಿ ಗರಿ-ಗರಿ ಕೋಟು ತೊಟ್ಟಿದ್ದರು.
ಗಮನ ಸೆಳೆದ ಚುನಾವಣಾ ಸಿಬ್ಬಂದಿ ಸಿಂಧುವಳ್ಳಿ ಗ್ರಾಮ ಪಂಚಾಯಿತಿಯ ಕುರಹಟ್ಟಿ ಗ್ರಾಮದ ಸಖಿಮತಗಟ್ಟೆಗೆ ಸ್ವಸಹಾಯ ಸಂಘದ ಮಹಿಳೆಯರು ಪಿಂಕ್ ಸೀರೆ ಧರಿಸಿ ಹಕ್ಕು ಚಲಾಯಿಸಲು ಬಂದಿದ್ದು ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.