ಬೆಂಗಳೂರು:ರಸ್ತೆ ಸುರಕ್ಷತೆ ನಿಯಮ ಉಲ್ಲಂಘಿಸಿ ಸಂಚರಿಸುವ ಶಾಲಾ, ಕಾಲೇಜು ವಾಹನಗಳ ಚಾಲಕರಿಗೆ ಸಾರಿಗೆ ಇಲಾಖೆ (ಆರ್‌ಟಿಓ) ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ.
ತೆರಿಗೆ ಪಾವತಿಸದೆ, ಅರ್ಹತಾ ಪತ್ರಗಳನ್ನು ನವೀಕರಿಸದೆ, ರಹದಾರಿ ನಿಯಮಗಳನ್ನು ಉಲ್ಲಂಘಿಸಿ ಸಂಚರಿಸುತ್ತಿದ್ದ ಶಾಲಾ, ಕಾಲೇಜು ವಾಹನಗಳ ವಿರುದ್ಧ ಇಂದು ವಿಶೇಷ ಕಾರ್ಯಾಚರಣೆ ಕೈಗೊಂಡು, 65 ವಾಹನಗಳನ್ನು ಆರ್‌ಟಿಓ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ನಗರದಲ್ಲಿ ಕೆಲ ಶಾಲಾ ವಾಹನಗಳು ಚಾಲಕರು ಸಾರಿಗೆ ಇಲಾಖೆ ನಿಯಮಗಳು, ಸರ್ವೋಚ್ಚ ನ್ಯಾಯಾಲಯದ ಸೂಚನೆಗಳನ್ನು ಪಾಲಿಸದೆ, ಬೇಕಾಬಿಟ್ಟಿಯಾಗಿ ಸಂಚರಿಸುತ್ತಿರುವುದರ ಕುರಿತು ಸಾರಿಗೆ ಇಲಾಖೆಗೆ ದೂರುಗಳು ಬಂದಿದ್ದವು. ಇಂದು 10 ತಂಡಗಳಾಗಿ ವಿಶೇಷ ಕಾರ್ಯಾಚರಣೆ ಕೈಗೊಂಡ ಸಾರಿಗೆ ಇಲಾಖೆಯ ಅಧಿಕಾರಿಗಳು 500ಕ್ಕೂ ಅಧಿಕ ವಾಹನಗಳನ್ನು ತಪಾಸಣೆಗೊಳಪಡಿಸಿ, 231 ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿಕೊಡಿದ್ದಾರೆ. ಹಾಗೂ 65 ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಐಎಂಎ ಹಗರಣ: ರಂಜಾನ್ಗೂ ಮುನ್ನ ಹಣ ಕಳೆದುಕೊಂಡವರಿಗೆ ಪರಿಹಾರ- ಕೃಷ್ಣ ಬೈರೇಗೌಡ