ಕರ್ನಾಟಕ

karnataka

ETV Bharat / state

ತಿರುಪತಿ ಮಾದರಿಯಲ್ಲಿ ಯಲ್ಲಮ್ಮನ ಗುಡ್ಡ ಅಭಿವೃದ್ಧಿ : ಸಚಿವ ಹೆಚ್ ಕೆ ಪಾಟೀಲ - SAVADATTI YALLAMMAGUDDA

ಬೆಳಗಾವಿ ಜಿಲ್ಲೆಯ ಧಾರ್ಮಿಕ ಕ್ಷೇತ್ರ ಯಲ್ಲಮ್ಮನ ಗುಡ್ಡವನ್ನು ಆಂಧ್ರ ಪ್ರದೇಶದ ತಿರುಪತಿ ಮಾದರಿಯಲ್ಲಿ ಅಭಿವೃದ್ಧಿ ಪಡಿಸುವುದಾಗಿ ಪ್ರವಾಸೋದ್ಯಮ ಸಚಿವ ಹೆಚ್​ ಕೆ ಪಾಟೀಲ ತಿಳಿಸಿದ್ದಾರೆ.

Savadatti Yallammagudda Development
ಯಲ್ಲಮ್ಮನ ಗುಡ್ಡ ಅಭಿವೃದ್ಧಿ ಕುರಿತು ಸಚಿವರ ಮಾಹಿತಿ (ETV Bharat)

By ETV Bharat Karnataka Team

Published : Feb 5, 2025, 5:43 PM IST

Updated : Feb 5, 2025, 5:56 PM IST

ಬೆಳಗಾವಿ: ಈ ಬಾರಿ ಭರತ ಹುಣ್ಣಿಮೆ ವೇಳೆ ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ಜಿಲ್ಲಾಡಳಿತದ ವತಿಯಿಂದ ಜನಸಂದಣಿ ನಿರ್ವಹಣೆಗೆ ಪಾರ್ಕಿಂಗ್, ಶೌಚಾಲಯ, ಎಲ್.ಇ.ಡಿ. ಸ್ಕ್ರೀನ್ ಅಳವಡಿಕೆ ಸೇರಿದಂತೆ ಸಕಲ ವ್ಯವಸ್ಥೆ ಕೈಗೊಳ್ಳಲಾಗುತ್ತದೆ ಎಂದು ಪ್ರವಾಸೋದ್ಯಮ ಇಲಾಖೆಯ ಸಚಿವ ಹೆಚ್. ಕೆ. ಪಾಟೀಲ ಹೇಳಿದರು.

ದಾಸೋಹ ಭವನಕ್ಕೆ ಒಂದು ತಿಂಗಳಲ್ಲಿ ಶಂಕುಸ್ಥಾಪನೆ; ಇಂದು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ದಾಸೋಹ ಭವನ ಮತ್ತು ಮೇವು ದಾಸೋಹ ಭವನ ನಿರ್ಮಾಣಕ್ಕೆ ಒಂದು ತಿಂಗಳಿನಲ್ಲಿ ಶಂಕುಸ್ಥಾಪನೆ ಮಾಡಲು ಪ್ರಯತ್ನಿಸಲಾಗುತ್ತಿದೆ. ಆಂಧ್ರಪ್ರದೇಶದ ತಿರುಪತಿಯ ಟಿಟಿಡಿ ಮಾದರಿಯಲ್ಲಿ ಅಭಿವೃದ್ಧಿಯನ್ನು ಮಾದರಿಯಾಗಿಟ್ಟುಕೊಂಡು ಯೋಜನೆ ರೂಪಿಸಲಾಗುವುದು.‌ ಸವದತ್ತಿ ಅಭಿವೃದ್ಧಿ ಮಂಡಳಿ ಪ್ರಗತಿ ಪರಿಶೀಲನೆ, ಸಣ್ಣಪುಟ್ಟ ಕಾನೂನಾತ್ಮಕ ಸಮಸ್ಯೆಗಳನ್ನು ಜಿಲ್ಲಾಡಳಿತ ಬಗೆಹರಿಸಿದೆ ಎಂದು ತಿಳಿಸಿದರು.

ತಿರುಪತಿ ಮಾದರಿಯಲ್ಲಿ ಯಲ್ಲಮ್ಮನ ಗುಡ್ಡ ಅಭಿವೃದ್ಧಿ : ಸಚಿವ ಹೆಚ್ ಕೆ ಪಾಟೀಲ (ETV Bharat)

ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನದಿಂದ ಅಭಿವೃದ್ಧಿ; ಕೇಂದ್ರದಿಂದ ನೂರು ಕೋಟಿ ರೂಪಾಯಿ ಮಂಜೂರಾಗಿದೆ. ಇದು ಮಾತ್ರವಲ್ಲದೇ ₹20 ಕೋಟಿ ಪ್ರಸಾದ ಯೋಜನೆಯಡಿ ಮಂಜೂರಾಗಿದೆ. ಅಲ್ಲದೇ ರಾಜ್ಯ ಸರ್ಕಾರದಿಂದ ಕೂಡ ಸಾಕಷ್ಟು ಅನುದಾನ ನೀಡಲಾಗುತ್ತಿದೆ. ವಸತಿ ಗೃಹ, ದಾಸೋಹ ಭವನ, ಮೂಲಸೌಕರ್ಯಗಳನ್ನು ಒಳಗೊಂಡ ಮಾಸ್ಟರ್ ಪ್ಲಾನ್ ಬಹುತೇಕ ಸಿದ್ಧವಾಗಿದೆ. ವೆಬ್​ಸೈಟ್ ನಲ್ಲೂ ಪ್ಲಾನ್ ಪ್ರಕಟಿಸಿ ಸಾರ್ವಜನಿಕರಿಂದ ಸಲಹೆಗಳನ್ನು ಸ್ವೀಕರಿಸಲಾಗುವುದು ಎಂದು ಸಚಿವ ಹೆಚ್. ಕೆ. ಪಾಟೀಲ ಮಾಹಿತಿ ನೀಡಿದರು.

ಸವದತ್ತಿ ಗುಡ್ಡದಲ್ಲಿ ಬಯಲು ಶೌಚಾಲಯ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಶೌಚಾಲಯ ಸೇರಿದಂತೆ ಅಗತ್ಯ ಮೂಲಸೌಕರ್ಯ ಒದಗಿಸಲಾಗುವುದು ಎಂದು ಸಚಿವರು ವಿವರಿಸಿದರು.

ಯಲ್ಲಮ್ಮನ ಗುಡ್ಡ ಅಭಿವೃದ್ಧಿ ಕುರಿತು ಸಚಿವರ ಮಾಹಿತಿ (ETV Bharat)

ಗೋಕಾಕ್​ ಫಾಲ್ಸ್ ರೋಪ್ ಕಾರ್ ಯೋಜನೆ; ಅಕ್ಟೋಬರ್ 2ರ ವರೆಗೆ ಗಾಂಧಿ ಭಾರತ ಕಾರ್ಯಕ್ರಮ ನಡೆಯಲಿದೆ. ಇದರ ಅಂಗವಾಗಿ 28 ಬಗೆಯ ಕಾರ್ಯಕ್ರಮಗಳನ್ನು ಸರ್ಕಾರದ ವತಿಯಿಂದ ಹಮ್ಮಿಕೊಳ್ಳಲಾಗುವುದು. ಗೋಕಾಕ್​ ಫಾಲ್ಸ್ ರೋಪ್ ಕಾರ್ ಯೋಜನೆ ಸಿದ್ಧಪಡಿಸಲಾಗುತ್ತಿದೆ. ಭೀಮಗಡ ಪ್ರದೇಶದಲ್ಲಿ 18 ಕಿ.ಮೀ. ಸಫಾರಿಗಾಗಿ ಮುಕ್ತಗೊಳಿಸಲಾಗುತ್ತಿದೆ. ಅದು ಆರಂಭಗೊಂಡ ಬಳಿಕ ಭೀಮಗಡ ಅತ್ಯಾಕರ್ಷಕ ಪ್ರವಾಸಿತಾಣ ಆಗಲಿದೆ ಎಂದು ಹೆಚ್. ಕೆ. ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.

ಯಲ್ಲಮ್ಮನ ಗುಡ್ಡ ಅಭಿವೃದ್ಧಿ ಕುರಿತು ಸಚಿವರ ಮಾಹಿತಿ (ETV Bharat)

ಇದೇ ಸಂದರ್ಭದಲ್ಲಿ ಪ್ರವಾಸೋದ್ಯಮ ಕುರಿತ ಮಾಹಿತಿ ಪುಸ್ತಕವನ್ನು ಸಚಿವರು ಬಿಡುಗಡೆಗೊಳಿಸಿದರು. ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ, ಪ್ರವಾಸೋಧ್ಯಮ ಇಲಾಖೆ ಜಂಟಿ ನಿರ್ದೇಶಕ ಸೌಮ್ಯಾ ಬಾಪಟ್ ಸೇರಿ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ :ಒಕ್ಕುಂದ ಉತ್ಸವ ನೃಪತುಂಗ ಜ್ಯೋತಿ ಮೆರವಣಿಗೆ : ಗೊಂಬೆ-ಡೊಳ್ಳು ಕುಣಿತದ ಆಕರ್ಷಣೆ

Last Updated : Feb 5, 2025, 5:56 PM IST

ABOUT THE AUTHOR

...view details