ಬೆಂಗಳೂರು:ರೈಸ್ ಪುಲ್ಲಿಂಗ್ ಚೊಂಬು ತೋರಿಸಿ ಉದ್ಯಮಿಗೆ 6.58 ಎಕರೆ ಬರೆಯಿಸಿಕೊಂಡು ಕೋಟ್ಯಂತರ ರೂಪಾಯಿ ವಂಚಿಸಿದ ಆರೋಪದ ಮೇಲೆ ಮಹಿಳೆ ಸೇರಿದಂತೆ ಐವರನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ವಂಚನೆಗೊಳಗಾದ ಉದ್ಯಮಿ ಕಾಂತರಾಜು ನೀಡಿದ ದೂರಿನ ಮೇರೆಗೆ ನಾಗರತ್ನ, ರಾಮಚಂದ್ರ, ಸುಕುಮಾರ್ ಹಾಗೂ ನಟೇಶ್, ಮಂಜುನಾಥ್ ಎಂಬುವರನ್ನ ಸಿಸಿಬಿ ಪೊಲೀಸರು ಸೆರೆ ಹಿಡಿದಿದ್ದಾರೆ.
ಕಳೆದ ಮೂರು ವರ್ಷಗಳ ಹಿಂದೆ ಗಂಗಾ ಬೋರ್ವೇಲ್ ಕಂಪನಿ ಸ್ಥಾಪಿಸಿದ್ದ ಕಾಂತರಾಜು, ಅಂಡರ್ ವಾಟರ್ ಹಾಗೂ ಕ್ರೂಡಾಯಿಲ್ ಪತ್ತೆ ಹಚ್ಚಿರುವುದರಲ್ಲಿ ಪರಿಣಿತರಾಗಿದ್ದರು. ರಾಜ್ಯಪಾಲರಿಂದ ವಿಶಲ್ ಮ್ಯಾನ್ ಎಂದು ಕರೆಯಿಸಿಕೊಂಡಿದ್ದರು. ಈವರೆಗೂ ಸುಮಾರು 7 ಸಾವಿರಕ್ಕೂ ಹೆಚ್ಚು ಅಂಡರ್ ವಾಟರ್ ಪಾಯಿಂಟ್ಗಳನ್ನ ಕಾಂತರಾಜು ಪತ್ತೆ ಹಚ್ಚಿದ್ದರು. ಸ್ವಂತದೊಂದು ಕ್ರೂಡ್ ಆಯಿಲ್ ಹಾಗೂ ರಿಪೈನರಿ ಪ್ಲ್ಯಾಂಟ್ ತೆರೆಯಬೇಕೆಂದು ಮುಂದಾಗಿದ್ದರು. ಆದರೆ, ಪ್ಲ್ಯಾಂಟ್ ಸ್ಥಾಪನೆಗೆ ಪರವಾನಗಿ ಸಿಕ್ಕಿರಲಿಲ್ಲ. ಈ ವೇಳೆ, ಆರೋಪಿಗಳ ಪರಿಚಯವಾಗಿದೆ. ತಮ್ಮ ಬಳಿ ಪೆಟ್ರೋಲ್ ಬಂಕ್ ಇದ್ದು ನಿಮಗೆ ಪ್ಲಾಂಟ್ ತೆರೆಯಲು ಅನುಮತಿ ಕೊಡಿಸುತ್ತೇನೆ. ಇದಕ್ಕೆ ಕೋಟ್ಯಂತರ ರೂಪಾಯಿ ಹಣ ತಗುಲಿದ್ದು, ಅದನ್ನ ನಾವು ನಿಮಗೆ ಕೊಡುತ್ತೇವೆ, ಆದರೆ ಸದ್ಯ ನಮ್ಮ ಬಳಿ ಹಣವಿಲ್ಲ ಎಂದಿದ್ದರು.