ಕರ್ನಾಟಕ

karnataka

ETV Bharat / state

ಗಣರಾಜ್ಯೋತ್ಸವ: ರಾಜ್ಯದ 21 ಜನ ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿಗಳ ಪದಕ

ಈ ಬಾರಿಯ ಗಣರಾಜ್ಯೋತ್ಸವದ ಪ್ರಯುಕ್ತ ನೀಡಲಾಗುವ ರಾಷ್ಟ್ರಪತಿಗಳ ಪದಕ ವಿಜೇತ ಅಧಿಕಾರಿಗಳು ಹಾಗೂ ಸಿಬ್ಬಂದಿ ಹೆಸರನ್ನು ಪ್ರಕಟಿಸಲಾಗಿದೆ.

By ETV Bharat Karnataka Team

Published : Jan 25, 2024, 4:06 PM IST

Special Service Medal awarding officers
ವಿಶೇಷ ಸೇವಾ ಪದಕ ವಿಜೇತ ಅಧಿಕಾರಿಗಳು

ಬೆಂಗಳೂರು: ಗಣರಾಜ್ಯೋತ್ಸವದ ನಿಮಿತ್ತ ಪೊಲೀಸ್, ಅಗ್ನಿಶಾಮಕ, ಗೃಹರಕ್ಷಕ ಹಾಗೂ ನಾಗರಿಕ ರಕ್ಷಣಾ ಇಲಾಖೆಗಳ 1,132 ರಾಷ್ಟ್ರಪತಿಗಳ ಪದಕ ವಿಜೇತ ಅಧಿಕಾರಿ ಹಾಗೂ ಸಿಬ್ಬಂದಿ ಹೆಸರನ್ನು ಕೇಂದ್ರ ಗೃಹ ಸಚಿವಾಲಯ ಪ್ರಕಟಿಸಿದೆ. ರಾಜ್ಯದ 21 ಜನ ಪೊಲೀಸ್ ಅಧಿಕಾರಿಗಳು ಈ ಗೌರವಕ್ಕೆ ಭಾಜನರಾಗಿದ್ದಾರೆ. ರಾಜ್ಯದ ಇಬ್ಬರು ಪೊಲೀಸ್ ಅಧಿಕಾರಿಗಳು ರಾಷ್ಟ್ರಪತಿಗಳ ವಿಶೇಷ ಸೇವಾ ಪದಕ ಮತ್ತು 19 ಜನ ಅಧಿಕಾರಿಗಳು ಪ್ರಶಂಸನೀಯ ಪದಕ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ರಾಷ್ಟ್ರಪತಿಗಳ ವಿಶೇಷ ಸೇವಾ ಪದಕ ವಿಜೇತರು:

  • ಎಡಿಜಿಪಿಸೌಮೇಂದು ಮುಖರ್ಜಿ
  • ಡಿವೈಎಸ್.ಪಿ ಸುಧೀರ್ ಮಹಾದೇವ ಹೆಗ್ಡೆ

ರಾಷ್ಟ್ರಪತಿಗಳ ಪ್ರಶಂಸನೀಯ ಪ್ರಶಸ್ತಿ ಪದಕ ವಿಜೇತರು:

  • ಐಜಿಪಿ ಪ್ರವೀಣ್ ಮಧುಕರ್ ಪವಾರ್
  • ಐಜಿಪಿ & ಅಡಿಷನಲ್ ಕಮಿಷನರ್ ಆಫ್ ಪೊಲೀಸ್ ರಮನ್ ಗುಪ್ತಾ
  • ಎಎಸ್​ಪಿ ಅನಿಲ್ ಕುಮಾರ್ ಎಸ್ ಭೂಮರೆಡ್ಡಿ
  • ಎಸಿಪಿ ಎಸ್.ಪಿ.ಧರಣೀಶ್
  • ಸಹಾಯಕ‌ ನಿರ್ದೇಶಕ / ಡಿಎಸ್ಪಿ ರಘುಕುಮಾರ್ ವೆಂಕಟೇಶಲು
  • ಎಸಿಪಿ ನಾರಾಯಣಸ್ವಾಮಿ.ವಿ
  • ಡಿಎಸ್​ಪಿ ಶ್ರೀನಿವಾಸರಾಜ್ ಬಿ.ಎಸ್
  • ಪೊಲೀಸ್ ಇನ್​ಸ್ಪೆಕ್ಟರ್ ಎಂ.ಆರ್.ಹರೀಶ್
  • ಪೊಲೀಸ್ ಇನ್​ಸ್ಪೆಕ್ಟರ್ ಎಸ್.ವೀರೇಂದ್ರ ಪ್ರಸಾದ್
  • ಅಸಿಸ್ಟೆಂಟ್ ರಿಸರ್ವ್ ಪೊಲೀಸ್ ಸಬ್ ಇನ್ಸ್​ಪೆಕ್ಟರ್​ ದಾದಾಪೀರ್ ಹೊನ್ನೂರ್ ಸಾಬ್
  • ಅಸಿಸ್ಟೆಂಟ್ ಸಬ್ ಇನ್ಸ್​ಪೆಕ್ಟರ್ (ವೈರ್ ಲೆಸ್) ಸುರೇಶ್ ಆರ್.ಪಿ
  • ಅಸಿಸ್ಟೆಂಟ್ ಸಬ್ ಇನ್ಸ್​ಪೆಕ್ಟರ್ ಶ್ರೀರಾಮ
  • ಎಸ್.ಪಿ & ಕಮ್ಯಾಂಡೆಂಟ್ ನಾಗರಾಜ ಅಂಜನಪ್ಪ
  • ಹೆಡ್ ಕಾನ್ಸ್​ಟೇಬಲ್​ ಸಿ.ವಿ.ಗೋವಿಂದರಾಜು
  • ಸಿವಿಲ್ ಪೊಲೀಸ್ ಹೆಡ್ ಕಾನ್ಸ್​ಟೇಬಲ್​​​​ ಮಣಿಕಂಠಯ್ಯ ಮಂದಾರಬೈಲ್
  • ಅಸಿಸ್ಟೆಂಟ್ ಸಬ್ ಇನ್ಸ್​ಪೆಕ್ಟರ್ ಶಮಂತ್ ಯಶ್.ಜಿ
  • ಸಿವಿಲ್ ಹೆಡ್ ಕಾನ್ಸ್​ಟೇಬಲ್​ ನರಸಿಂಹರಾಜು ಎಸ್.ಎನ್
  • ಅಸಿಸ್ಟೆಂಟ್ ಇಂಟಲಿಜೆನ್ಸ್ ಆಫಿಸರ್/ಎಎಸ್ಐ ವೆಂಕಟೇಶ.ಸಿ
  • ಸ್ಪೆಷಲ್ ರಿಸರ್ವ್ ಸಬ್ ಇನ್ಸ್​ಪೆಕ್ಟರ್​ ಆರ್.ಪುಂಡಲಿಕ ಜೆ.ವಿ ರಾಮರಾವ್ ನಾಯಕ್

ರಾಷ್ಟ್ರಪತಿಗಳ ವಿಶೇಷ ಸೇವಾ ಪದಕವನ್ನು ಇಲಾಖೆಯಲ್ಲಿನ ವಿಶೇಷವಾದ ಸೇವೆಯ ದಾಖಲೆಗಾಗಿ ನೀಡಲಾಗುತ್ತದೆ. ಮತ್ತು ಪ್ರಶಂಸನೀಯ ಪದಕವನ್ನು ಇಲಾಖೆಯಲ್ಲಿನ ಕರ್ತವ್ಯ ಹಾಗೂ ಅಮೂಲ್ಯ ಸೇವೆಗಾಗಿ ನೀಡಲಾಗುತ್ತದೆ. ವಿಜೇತರಿಗೆ ಪ್ರಶಸ್ತಿಯನ್ನು ಗಣರಾಜ್ಯೋತ್ಸವದ ಸಂದರ್ಭದಲ್ಲಿ ರಾಷ್ಟ್ರಪತಿಗಳು ನೀಡಲಿದ್ದಾರೆ.

ಇದನ್ನೂ ಓದಿ:ಗಣರಾಜ್ಯೋತ್ಸವಕ್ಕೆ ಮಾಣಿಕ್ ಷಾ ​ಮೈದಾನದಲ್ಲಿ ಸಕಲ ಸಿದ್ಧತೆ; ಮೈದಾನದ ಸುತ್ತಮುತ್ತ ಪೊಲೀಸ್ ಬಂದೋಬಸ್ತ್

ಮತ್ತೊಂದೆಡೆ ದೇಶಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ 1132 ಪೊಲೀಸರು 'ರಾಷ್ಟ್ರಪತಿ ಪದಕ'ಕ್ಕೆ ಭಾಜನರಾಗಿದ್ದಾರೆ. ಉಗ್ರರ ವಿರುದ್ಧ ಹೋರಾಡಿ ಹುತಾತ್ಮರಾದ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) ಯೋಧರಾದ ಸನ್ವಾಲಾ ರಾಮ್ ವಿಷ್ಣೋಯ್ ಮತ್ತು ದಿವಂಗತ ಶಿಶು ಪಾಲ್ ಸಿಂಗ್ ಅವರಿಗೆ ಮರಣೋತ್ತರವಾಗಿ 'ರಾಷ್ಟ್ರಪತಿ ಶೌರ್ಯ ಪದಕ' (ಪಿಎಂಜಿ) ಘೋಷಿಸಲಾಗಿದೆ.

102 ರಾಷ್ಟ್ರಪತಿ ಪದಕಗಳಲ್ಲಿ 94 ಪೊಲೀಸ್ ಸೇವೆಗೆ, 4 ಅಗ್ನಿಶಾಮಕ ಸೇವೆಗೆ, ಇನ್ನು ನಾಲ್ಕು ನಾಗರಿಕ ರಕ್ಷಣೆ ಮತ್ತು ಗೃಹರಕ್ಷಕ ಸೇವಾದಳಕ್ಕೆ ನೀಡಲಾಗಿದೆ. 753 ಅತ್ಯುತ್ತಮ ಸೇವಾ ಪದಕಗಳ ಪೈಕಿ 667 ಪೊಲೀಸ್ ಸೇವೆಗೆ, 32 ಅಗ್ನಿಶಾಮಕ ಸೇವೆಗೆ, 27 ಸಿವಿಲ್ ಡಿಫೆನ್ಸ್ ಮತ್ತು ಹೋಮ್ ಗಾರ್ಡ್​ ಸಿಬ್ಬಂದಿಗೆ ಮತ್ತು 27 ಸುಧಾರಣಾ ಸೇವೆಗೆ ನೀಡಲಾಗಿದೆ.

ABOUT THE AUTHOR

...view details