ಬೆಂಗಳೂರು: ಚಿತ್ರದುರ್ಗದ ನಿವಾಸಿ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಅವರನ್ನು ಇಂದು ಆರ್.ಆರ್.ನಗರದ ಪಟ್ಟಣಗೆರೆಯ ಶೆಡ್‌ಗೆ ಕರೆದೊಯ್ದ ಪೊಲೀಸರು ಸ್ಥಳ ಮಹಜರು ನಡೆಸಿದರು. ಈ ಶೆಡ್ ಆರೋಪಿಗಳ ಪೈಕಿ ಓರ್ವನಾದ ವಿನಯ್ ಸೋದರ ಮಾವನ ಒಡೆತನದಲ್ಲಿದೆ. ಇಲ್ಲಿಗೆ ದರ್ಶನ್ ಹೋಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಮಹಜರು ನಡೆಸಲಾಗಿದೆ.
ರೇಣುಕಾಸ್ವಾಮಿ ಹತ್ಯೆಗೈದ ಸ್ಥಳಕ್ಕೆ ದರ್ಶನ್ ಕರೆದೊಯ್ದು ಮಹಜರು ನಡೆಸಿದ ಪೊಲೀಸರು - Renukaswamy Murder Case - RENUKASWAMY MURDER CASE
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್.ಆರ್.ನಗರದ ಪಟ್ಟಣಗೆರೆಯ ಶೆಡ್‌ಗೆ ಆರೋಪಿ ದರ್ಶನ್ ಕರೆದೊಯ್ದು ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖೆ (ETV Bharat)
Published : Jun 12, 2024, 4:37 PM IST
ದರ್ಶನ್ ಶೆಡ್ ಬಳಿ ಯಾವಾಗ ಹೋಗಿದ್ದರು?, ರೇಣುಕಾಸ್ವಾಮಿ ಅವರನ್ನು ಎಲ್ಲಿರಿಸಲಾಗಿತ್ತು?, ಯಾವ ರೀತಿ ಹಲ್ಲೆ ಮಾಡಲಾಗಿತ್ತು?, ನೀವು ಹಲ್ಲೆ ಮಾಡಿದ್ದೀರಾ?, ನಿಮ್ಮದುರಿನಲ್ಲೇ ಇತರರಿಂದ ಹಲ್ಲೆ ನಡೆದಿತ್ತಾ? ಹಲ್ಲೆಯನ್ನು ನೀವು ತಡೆಯಲಿಲ್ಲವೇ? ಎಂಬೆಲ್ಲಾ ವಿವರಣೆಯನ್ನು ಪೊಲೀಸರು ಪಡೆದುಕೊಳ್ಳುತ್ತಿದ್ದಾರೆ.
ಇದನ್ನೂ ಓದಿ:ಬೆಂಗಳೂರು: ರೇಣುಕಾಸ್ವಾಮಿ ಶವ ಎಸೆದಿದ್ದ ಜಾಗ ತೋರಿಸಿದ ಆರೋಪಿಗಳು - Renukaswamy Murder case