ಕರ್ನಾಟಕ

karnataka

ETV Bharat / state

ರೇಣುಕಾಸ್ವಾಮಿ ಕೊಲೆ ಪ್ರಕರಣ: ಮತ್ತೋರ್ವ ಆರೋಪಿ ಬಂಧನ - Renukaswamy murder case - RENUKASWAMY MURDER CASE

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿ ಬಂಧನವಾಗಿದೆ.

ACCUSED ARRESTED  ACTOR DARSHAN  BENGALURU
ರೇಣುಕಾಸ್ವಾಮಿ ಕೊಲೆ ಪ್ರಕರಣ: ಮತ್ತೋರ್ವ ಆರೋಪಿ ಬಂಧನ (ETV Bharat)

By ETV Bharat Karnataka Team

Published : Jun 17, 2024, 12:14 PM IST

ಬೆಂಗಳೂರು:ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರಿಗೆ ದರ್ಶನ್ ಅಂಡ್ ಗ್ಯಾಂಗ್ ನಡೆಸಿದ ಹೀನ ಕೃತ್ಯಗಳು ಬೆಳಕಿಗೆ ಬರುತ್ತಿವೆ. ಕೃತ್ಯದಲ್ಲಿ ಬಂಧಿತನಾಗಿರುವ ಧನರಾಜ್ ಜೊತೆಗೆ ಆತನ ಸಹಚರರು ಎಲೆಕ್ಟ್ರಿಕಲ್ ಶಾಕ್ ನೀಡಿದ್ದರು ಎಂಬ ಸತ್ಯ ಸಂಗತಿಯೂ ಈಗ ಹೊರಬಿದ್ದಿದೆ.

ಪ್ರಕರಣದಲ್ಲಿ 9ನೇ ಆರೋಪಿಯಾಗಿರುವ ಧನರಾಜ್, ನಟ ದರ್ಶನ್ ಮನೆಯಲ್ಲಿ ಸಾಕು ನಾಯಿಗಳನ್ನ ನೋಡಿಕೊಳ್ಳುತ್ತಿದ್ದ. ಇದಕ್ಕೂ ಮೊದಲು ಧನರಾಜ್​ ಡಾಗ್ ಬ್ರೀಡಿಂಗ್ ಆಗಿದ್ದ. ದರ್ಶನ್ ಜೊತೆ ಆಪ್ತನಾದ ಬಳಿಕ ಇವರ ಮನೆಯಲ್ಲೇ ಕೆಲಸ ಮಾಡಿಕೊಂಡಿದ್ದ. ಧನರಾಜ್​ನನ್ನು ಬಂಧಿಸಿದ ಪೊಲೀಸರು ವಿಚಾರಣೆಯಲ್ಲಿ ಹಲವಾರು ಮಾಹಿತಿಗಳನ್ನು ಕಲೆ ಹಾಕಿದ್ದಾರೆ.

ಧನರಾಜ್ ಎಲೆಕ್ಟ್ರಿಕ್ ಶಾಕ್ ನೀಡುವ ಮೆಗ್ಗಾರ್ ಅನ್ನು ಹಲವಾರು ತಿಂಗಳಿಂದ ಇಟ್ಟುಕೊಂಡಿದ್ದ. ಫೈನಾನ್ಸ್ ಸರಿಯಾಗಿ ಕಟ್ಟದ ಹಲವರಿಗೆ ಬಂಧಿತ ಆರೋಪಿಯಾಗಿರುವ ವಿನಯ್ ಶೆಡ್​ನಲ್ಲಿ ಹಲ್ಲೆ ಮಾಡುತ್ತಿದ್ದ. ಈ ವೇಳೆ ಹಲ್ಲೆ ಮಾಡುವಾಗೆಲ್ಲಾ ಈ ಧನರಾಜ್​ ಜೊತೆಗೆ ಇರುತ್ತಿದ್ದ. ಈ ಹಿಂದೆ ಹಲವಾರು ಜನರಿಗೆ ಹಲ್ಲೆ ಮಾಡುವಾಗ ಇದೇ ಮೆಗ್ಗಾರ್​ನಿಂದ ಶಾಕ್ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಿನಿಮಾದಲ್ಲಿ ನಡೆಯುವ ರೀತಿ ಚೇರ್​ಗೆ ಕಟ್ಟಿ ಕೂರಿಸಿ ನಂತರ ಶಾಕ್ ನೀಡುತ್ತಿದ್ದರು. ಆರ್​.ಆರ್ ನಗರ ಪೊಲೀಸ್ ಠಾಣೆ ಹಿಂಭಾಗದ ರಸ್ತೆಯಲ್ಲಿ ವಾಸವಾಗಿದ್ದ ಆರೋಪಿಯನ್ನ ಬಂಧಿಸಲಾಗಿದೆ.

ಓದಿ:ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು : ಕಿಚ್ಚ ಸುದೀಪ್ - ACTOR SUDEEP REACTION

ABOUT THE AUTHOR

...view details