ಕರ್ನಾಟಕ

karnataka

ETV Bharat / state

ಬಂಡೀಪುರದಲ್ಲಿ ಅಪರೂಪದ ಚಿರತೆ: ಎರಡೂ ಕಣ್ಣುಗಳ ಬಣ್ಣ ವಿಭಿನ್ನ! - Leopard With Different Eye Colours - LEOPARD WITH DIFFERENT EYE COLOURS

ವನ್ಯಜೀವಿ ಛಾಯಾಗ್ರಾಹಕ​ ಧ್ರುವ್​​ ಪಾಟೀಲ್ ಕ್ಯಾಮೆರಾ ಕಣ್ಣಿಗೆ 2 ಬಣ್ಣದ ವಿಭಿನ್ನ ಕಣ್ಣುಗಳುಳ್ಳ ಚಿರತೆ ಸೆರೆಯಾಗಿದೆ.

DIFFERENT EYE LEOPARD
ಇದು ಅಪರೂಪದ ಚಿರತೆ! ಎರಡು ಕಣ್ಣುಗಳ ಬಣ್ಣ ನೋಡಿ.. (Photographer: Druv Patil)

By ETV Bharat Karnataka Team

Published : Aug 4, 2024, 10:04 AM IST

Updated : Aug 4, 2024, 10:25 AM IST

ಚಾಮರಾಜನಗರ:ಗುಂಡ್ಲುಪೇಟೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ವಿಭಿನ್ನ ರೀತಿಯ ಕಣ್ಣುಗಳುಳ್ಳ ವಿಶೇಷ ಚಿರತೆ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವನ್ಯಜೀವಿ ಛಾಯಾಗ್ರಾಹಕ ಧ್ರುವ್​ ಪಾಟೀಲ್​ ಈ ಚಿತ್ರವನ್ನು ಸೆರೆ ಹಿಡಿದು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಈ‌ ರೀತಿಯ ಚಿರತೆ ಭಾರತದಲ್ಲಿ ಇದೇ ಮೊದಲ ಬಾರಿಗೆ ಪತ್ತೆಯಾಗಿದೆ ಎಂದು ಅವರು ಬರೆದುಕೊಂಡಿದ್ದಾರೆ.

ಎಡಗಣ್ಣು ಕಂದು, ಬಲಗಣ್ಣು ನೀಲಿ ಹಸಿರು!: ಹೆಣ್ಣು ಚಿರತೆಯೊಂದು ಮರದ ಮೇಲೆ ವಿರಮಿಸುತ್ತಿದ್ದು, ಅದರ ಎರಡೂ ಕಣ್ಣುಗಳೂ ಬೇರೆ ಬಣ್ಣ ಹೊಂದಿರುವುದನ್ನು ನೋಡಬಹುದು. ಎಡಗಣ್ಣು ನೀಲಿ ಹಸಿರಿನಲ್ಲಿದ್ದರೆ, ಬಲಗಣ್ಣು ಕಂದು ಬಣ್ಣದಲ್ಲಿದೆ. ಇದಕ್ಕೆ 'ಹೆಟ್ರೋಕ್ರೊಮಿಯಾ' ಎಂಬ ಅಂಶ ಕಾರಣವಾಗಿದ್ದು ಭಾರತದಲ್ಲಿ ಈ ರೀತಿಯ ವಿಭಿನ್ನ ಕಣ್ಣುಗಳನ್ನು ಹೊಂದಿರುವ ಚಿರತೆ ಈವರೆಗೆ ದಾಖಲಾಗಿಲ್ಲ ಎಂದು ತಿಳಿದುಬಂದಿದೆ.

ವನ್ಯಜೀವಿ ಛಾಯಾಗ್ರಾಹಕ ಧ್ರುವ್​ ಪಾಟೀಲ್ ಪ್ರತಿಕ್ರಿಯೆ:​ "ಭಾರತದಲ್ಲಿ ಈ ರೀತಿ ಚಿರತೆ ಪತ್ತೆಯಾಗಿರುವುದು ಇದೇ ಮೊದಲು. ಕಳೆದ ವಾರ ಬಂಡೀಪುರಕ್ಕೆ ಬಂದಿದ್ದಾಗ ಸಫಾರಿ ರಸ್ತೆಯಲ್ಲಿ ಈ ಚಿರತೆಯ ಫೋಟೋ ಸೆರೆ ಹಿಡಿದಿದ್ದೆ. ಅದಾದ ಬಳಿಕ ಕಳೆದ ಎರಡು ದಿನಗಳ ಹಿಂದೆ ಮನೆಯಲ್ಲಿ ಕುಳಿತು ಫೋಟೋ ಗಮನಿಸಿದಾಗ ಎರಡೂ ಕಣ್ಣುಗಳು ಕೂಡ ವಿಭಿನ್ನವಾಗಿರುವುದು ಕಂಡುಬಂತು. ಬೆಕ್ಕುಗಳಲ್ಲಿ ಈ ರೀತಿಯ ಮ್ಯೂಟೆಷನ್ ಕಂಡುಬರುತ್ತದೆ. ಆದರೆ ಚಿರತೆಯಲ್ಲಿ ಇದೇ ಮೊದಲು" ಎಂದರು.

ಇದನ್ನೂ ಓದಿ:ಶಿವಮೊಗ್ಗ - ಅಪರೂಪದ ಚಿರತೆ ಬೆಕ್ಕು ಅಸ್ವಸ್ಥ: ಅರಣ್ಯಾಧಿಕಾರಿಗಳಿಂದ ರಕ್ಷಣೆ

Last Updated : Aug 4, 2024, 10:25 AM IST

ABOUT THE AUTHOR

...view details