ಕರ್ನಾಟಕ

karnataka

ETV Bharat / state

ವಿಜಯೇಂದ್ರ ಜೂನಿಯರ್, ಅವರಿಗೆ ಉತ್ತರ ಕೊಡಲ್ಲ: ರಮೇಶ್ ಜಾರಕಿಹೊಳಿ - Ramesh Jarakiholi - RAMESH JARAKIHOLI

ಈಶ್ವರಪ್ಪ ಮನೆಗೆ ಯತ್ನಾಳ್ ಕರೆದರೆಂದು ಹೋಗಿದ್ದೆ. ಅಲ್ಲಿ ಯಾವುದೇ ರಾಜಕೀಯ ವಿಚಾರ ಚರ್ಚೆ ಆಗಿಲ್ಲ. ಮೀಸಲಾತಿ ಮತ್ತು ಹಿಂದೂ ಸಮಾಜದ ಕುರಿತು ಚರ್ಚೆ ಮಾಡಿದ್ದೇವೆ ಎಂದು ರಮೇಶ್ ಜಾರಕಿಹೊಳಿ ತಿಳಿಸಿದರು.

ರಮೇಶ್ ಜಾರಕಿಹೊಳಿ
ರಮೇಶ್ ಜಾರಕಿಹೊಳಿ (ETV Bharat)

By ETV Bharat Karnataka Team

Published : Sep 27, 2024, 1:21 PM IST

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಜ್ಯೂನಿಯರ್, ಅವರಿಗೆ ನಾನು ಉತ್ತರ ಕೊಡಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಟಕ್ಕರ್ ನೀಡಿದ್ದಾರೆ. ಸದಾಶಿವನಗರ ನಿವಾಸದಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಬಾಯಲ್ಲಿ ಪಕ್ಷ ಸಿದ್ಧಾಂತದ ಮಾತು ಬರುತ್ತಿರುವುದು ಒಳ್ಳೆಯದು ಎಂದು ವಿಜಯೇಂದ್ರ ಹೇಳಿಕೆ ನೀಡಿದ್ದಾರೆ. ಆದರೆ ವಿಜಯೇಂದ್ರ ಜ್ಯೂನಿಯರ್, ಅವರಿಗೆ ನಾನು ಉತ್ತರ ಕೊಡಲ್ಲ ಎಂದರು.

ಈಶ್ವರಪ್ಪ ಹಿಂದೂ ಸಮಾಜದ ಪ್ರಮುಖ ನಾಯಕ, ಅವರ ಬಗ್ಗೆ ಇವತ್ತೂ ಗೌರವವಿದೆ. ಅವರ ಮನೆಗೆ ಹೋಗಿದ್ದು ನಿಜ, ಯತ್ನಾಳ್ ಕರೆದರು ಅಂತಾ ಹೋಗಿದ್ದೆ, ಅಲ್ಲಿ ರಾಜೂಗೌಡ ಇರುವ ವಿಷಯ ಗೊತ್ತಿದ್ದರೆ ಈಶ್ವರಪ್ಪ ನಿವಾಸಕ್ಕೆ ನಾನು ಹೋಗ್ತಾನೇ ಇರಲಿಲ್ಲ. ರಾಜೂಗೌಡ ಯಡಿಯೂರಪ್ಪ ಶಿಷ್ಯರಾಗಿ ಗುರುತಿಸಿಕೊಂಡಿದ್ದಾರೆ, ಅವರ ಬಗ್ಗೆ ಹೆಚ್ಚು ಮಾತನಾಡಲ್ಲ. ಅವರಿರುವ ಮಾಹಿತಿ ಸಿಕ್ಕಿದ್ದರೆ ನಾನು ಮನೆಯ ಹೊರಗಡೆಯಿಂದಲೇ ವಾಪಸ್ ಬರುತ್ತಿದೆ. ಅಲ್ಲಿ ಮೀಸಲಾತಿ, ಹಿಂದೂ ಸಮಾಜದ ಕುರಿತು ಚರ್ಚೆ ಮಾಡಿದ್ದೇವೆ. ರಾಜಕೀಯ ವಿಚಾರದ ಬಗ್ಗೆ ಮಾತುಕತೆ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದರು.

ಈಶ್ವರಪ್ಪರನ್ನು ಪಕ್ಷದ ವರಿಷ್ಠರು ಉಚ್ಛಾಟಿಸಿದ್ದಾರೆ. ಅವರನ್ನು ಮರಳಿ ಕರೆತರುವ ಶಕ್ತಿ ನಮಗಿಲ್ಲ, ಅದನ್ನು ಹೈಕಮಾಂಡ್ ನಿರ್ಧರಿಸಬೇಕು, ಅವರನ್ನು ಬಿಜೆಪಿಗೆ ಕರೆತರುವಲ್ಲಿ ನಮ್ಮ ಪಾತ್ರವೇನೂ ಇಲ್ಲ, ಪಕ್ಷವೇ ನಿರ್ಧರಿಸಬೇಕು ಎಂದರು.

ಸಿದ್ದರಾಮಯ್ಯ ವಿರುದ್ಧ ನಮ್ಮ ಪಕ್ಷದ ಹೋರಾಟಕ್ಕೆ ನಾವು ಬದ್ಧ. ಯಡಿಯೂರಪ್ಪ ಪ್ರಕರಣದಲ್ಲಿ ಸಿದ್ದರಾಮಯ್ಯ ಮಾತನಾಡಿದ್ದನ್ನು ಅವರು ನೆನಪಿಸಿಕೊಳ್ಳಬೇಕು. ಸಿದ್ದರಾಮಯ್ಯರನ್ನು ಮುಗಿಸಲು ಅವರ ಪಕ್ಷವೇ ಮುಂದಾಗಿದೆ, ನಾವು ವಿರೋಧ ಪಕ್ಷವಾಗಿ ಕೆಲಸ ಮಾಡುತ್ತಿದ್ದೇವೆ ಅಷ್ಟೇ. ಈ ಹೋರಾಟದಲ್ಲಿ ನಮ್ಮ ಪಕ್ಷದ ಅಣತಿಯಂತೆ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

ಸಿಬಿಐಗೆ ನೀಡಿದ್ದ ಮುಕ್ತ ಅಧಿಕಾರವನ್ನು ಸಂಪುಟ ವಾಪಸ್ ಪಡೆದಿದೆ. ಆ ಮೂಲಕ ಸಿಬಿಐಗೆ ಇವರು ನಿರ್ಬಂಧಿಸಿರಬಹುದು. ಆದರೆ ನ್ಯಾಯಾಂಗ ಇದೆ, ಅದನ್ನು ನಿರ್ಬಂಧಿಸಲಾಗಲ್ಲ, ಸಿಎಂ, ಡಿಸಿಎಂ ವಿರುದ್ಧ ಆರೋಪವಿದ್ದಾಗ ಈ ರೀತಿ ಮಾಡಿದ್ದು ತಪ್ಪು. ಯಾರು ಬೇಕಾದರೂ ಕೋರ್ಟ್​ನಲ್ಲಿ ಪ್ರಶ್ನೆ ಮಾಡಬಹುದಾಗಿದೆ. ಮುಡಾ ಹಗರಣ ವಿಚಾರದಲ್ಲಿ ಹೋರಾಟ ತಾರ್ಕಿಕ ಅಂತ್ಯಕ್ಕೆ ಬಂದಿದೆ. ವಾಲ್ಮೀಕಿ ನಿಗಮ ಹಗರಣದಲ್ಲಿಯೂ ತಾರ್ಕಿಕ ಅಂತ್ಯಕ್ಕೆ ಬರಬೇಕಿದೆ. ಆ ನಿಟ್ಟಿನಲ್ಲಿ ಮುಂದಿನ ಹೋರಾಟದ ಕುರಿತು ಪಕ್ಷದ ವೇದಿಕೆಯಲ್ಲಿ ಮಾತನಾಡಿದ್ದೇವೆ, ಒಳ್ಳೆಯ ನಿರ್ಧಾರವಾಗಲಿದೆ ಎಂದರು.

ಬೆಳಗಾವಿ ಜಿಲ್ಲೆಯ ವಿಭಜನೆ ಮಾಡುವ ಸರ್ಕಾರದ ಚಿಂತನೆಗೆ ನನ್ನ ಸಹಮತ ಇದೆ. ಆಡಳಿತಾತ್ಮಕ ಕಾರಣಕ್ಕಾಗಿ ಜಿಲ್ಲೆಯ ವಿಭಜನೆ ಅಗತ್ಯ. ಆದರೆ ಮೊದಲು ತಾಲೂಕುಗಳ ವಿಂಗಡಣೆ ಆಗಿ ನಂತರ ಜಿಲ್ಲೆ ಇಬ್ಭಾಗ ಮಾಡಲಿ ಎಂದು ಅಭಿಪ್ರಾಯಪಟ್ಟರು. ಪಕ್ಷ ಸಂಘಟನೆಗೆ ಮೊದಲ ಆದ್ಯತೆ, ಮುಂದಿನ ಬಾರಿ 120 ಸ್ಥಾನ ನಮಗೆ ಖಚಿತ, ಒಳ್ಳೆಯ ಆಡಳಿತ ಕೊಡುವ ವಿಶ್ವಾಸ ನಮಗಿದೆ ಎಂದು ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ರಾಜಭವನದಿಂದ ಮಾಹಿತಿ ಸೋರಿಕೆ ಆರೋಪ: ರಾಜ್ಯಪಾಲರು ಅನುಮತಿ ನೀಡಿದರೆ ತನಿಖೆಗೆ ನಾವು ರೆಡಿ- ಜಿ.ಪರಮೇಶ್ವರ್ - G Parameshwar

ABOUT THE AUTHOR

...view details