ಕರ್ನಾಟಕ

karnataka

ETV Bharat / state

ರಾಮನಗರ: ಕಬ್ಬಿಣದ ರಾಡ್​ನಿಂಡ ಹೊಡೆದು ಪತ್ನಿ ಕೊಲೆ ಮಾಡಿದ ಪತಿ! - Husband Killed Wife - HUSBAND KILLED WIFE

ಪತಿಯೊಬ್ಬ ಬಸ್​ ನಿಲ್ದಾಣದಲ್ಲಿ ಕುಳಿತ್ತಿದ್ದ ತನ್ನ ಪತ್ನಿಯನ್ನು ಕಬ್ಬಿಣದ ರಾಡ್​ನಿಂಡ ಹೊಡೆದು ಕೊಲೆ ಮಾಡಿರುವ ಘಟನೆ ರಾಮನಗರ ಜಿಲ್ಲೆಯಲ್ಲಿ ನಡೆದಿದೆ.

BEATING HER WITH AN IRON ROD  MURDER  RAMANAGAR
ರಾಮನಗರ: ಪತ್ನಿಯನ್ನು ಕಬ್ಬಿಣದ ರಾಡ್​ನಿಂಡ ಹೊಡೆದು ಕೊಲೆ ಮಾಡಿದ ಪತಿ! (ETV Bharat)

By ETV Bharat Karnataka Team

Published : May 13, 2024, 4:27 PM IST

ರಾಮನಗರ: ದಾಂಪತ್ಯದಲ್ಲಿ ಬಿರುಕು ಬಿಟ್ಟು ದೂರವಾಗಿದ್ದ ಪತ್ನಿಯನ್ನು ಪತಿಯೇ ಕಬ್ಬಿಣದ ರಾಡಿನಿಂದ ತಲೆಗೆ ಹೊಡೆದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಕನಕಪುರ ತಾಲೂಕಿನ ಚಿಕ್ಕಮುದುವಾಡಿ ಸಂತೆ ಗೇಟ್‌ನಲ್ಲಿ ನಡೆದಿದೆ. ಮೃತರನ್ನು ಹಾರೋಹಳ್ಳಿ ತಾಲೂಕಿನ ಕೊಟ್ಟಗಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಿಚ್ಚನಕೆರೆ ಗ್ರಾಮದ ಮಂಜುಳಾ (35) ಎಂದು ಗುರುತಿಸಲಾಗಿದೆ. ರಾಮನಗರ ತಾಲೂಕು ವಡ್ಡರಹಳ್ಳಿ ಗ್ರಾಮದ ರಾಜೇಶ್‌ (45) ಕೊಲೆ ಮಾಡಿರುವ ಆರೋಪಿಯಾಗಿದ್ದಾರೆ.

ರಾಜೇಶ್‌ ಮತ್ತು ಮಂಜುಳಾ 13 ವರ್ಷಗಳ ಹಿಂದೆ ವಿವಾಹವಾಗಿದ್ದು, ದಂಪತಿಗೆ 12 ವರ್ಷದ ಮಗಳಿದ್ದಾರೆ. ದಂಪತಿಗಳ ನಡುವೆ ಹೊಂದಾಣಿಕೆ ಆಗದೇ ಆಗಾಗ ಜಗಳವಾಡುತ್ತಿದ್ದು ಕಳೆದ 2 ವರ್ಷಗಳಿಂದ ದೂರವಾಗಿದ್ದ ಮಂಜುಳಾ, ಪಿಚ್ಚನಕೆರೆ ಗ್ರಾಮದಲ್ಲಿ ತಾಯಿಯ ಮನೆಯಲ್ಲಿ ವಾಸವಾಗಿದ್ದರು. ನಿನ್ನೆ ಭಾನುವಾರ ಮಧ್ಯಾಹ್ನ ಸುಮಾರು 12 ಗಂಟೆ ಸಮಯದಲ್ಲಿ ರಾಮನಗರ ರಸ್ತೆಯ ಚಿಕ್ಕಮುದುವಾಡಿ ಸಂತೆಗೇಟ್‌ನಲ್ಲಿರುವ ಪ್ರಯಾಣಿಕರ ತಂಗುದಾಣದಲ್ಲಿ ಮಂಜುಳಾ ಕುಳಿತಿದ್ದಾಗ ರಾಜೇಶ್‌ ಬೈಕ್‌ನಲ್ಲಿ ಹೆಲ್ಮೆಟ್‌ ಹಾಕಿಕೊಂಡು ಬಂದು ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿ ಅಲ್ಲಿಂದ ಪರಾರಿಯಾಗಿದ್ದಾನೆ.

ರಾಡ್​​​​​​ನಿಂದ ಹಲ್ಲೆ ನಡೆಸಿ ತಲೆಗೆ ಹೊಡೆದಿದ್ದರಿಂದ ಮಂಜುಳಾ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಅತಿಯಾದ ರಕ್ತಸ್ರಾವವಾಗಿ ಸ್ಥಳದಲ್ಲೇ ಸಾವನಪ್ಪಿದ್ದಾರೆ. ಕಣ್ಮುಂದೆಯೇ ದಾರುಣ ಘಟನೆ ನಡೆದಿದ್ದರಿಂದ ಸ್ಥಳದಲ್ಲಿದ್ದವರು ಬೆಚ್ಚಿಬಿದ್ದಿದ್ದಾರೆ. ಬಳಿಕ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ಪೊಲೀಸರು ಘಟನಾ ಸ್ಥಳಕ್ಕೆ ದೌಡಾಯಿಸಿ ಸ್ಥಳ ಪರಿಶೀಲನೆ ನಡೆಸಿ ಮೃತದೇಹವನ್ನು ದಯಾನಂದ ಸಾಗರ್‌ ಆಸ್ಪತ್ರೆಗೆ ಸ್ಥಳಾಂತರಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಘಟನೆ ನಡೆದ ನಂತರ ಆರೋಪಿ ತಲೆಮರೆಸಿಕೊಂಡಿದ್ದು, ರಾಜೇಶನಿಗಾಗಿ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ.

ಓದಿ:ದಾವಣಗೆರೆ: ತಂದೆಯ ಸಾವಿನಿಂದ ಮನನೊಂದು ಮಗ ಆತ್ಮಹತ್ಯೆ - Son Commits Suicide

ABOUT THE AUTHOR

...view details