ಕರ್ನಾಟಕ

karnataka

By ETV Bharat Karnataka Team

Published : Jan 22, 2024, 1:23 PM IST

Updated : Jan 22, 2024, 3:01 PM IST

ETV Bharat / state

ಅಮೆರಿಕದಲ್ಲೂ ರಾಮನಿಗೆ ಪೂಜೆ: ಮಂಟಪ ನಿರ್ಮಾಣ ಮಾಡಿ ಭಕ್ತಿ ಸಮರ್ಪಿಸಿದ ಧಾರವಾಡ ಮೂಲದ ದಂಪತಿ

ವಿದೇಶದಲ್ಲಿದ್ದರೂ ಕೂಡ ಧಾರವಾಡ ಮೂಲದ ದಂಪತಿ ಶ್ರೀರಾಮನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ರಾಮನಿಗೆ ಅಮೆರಿಕದಲ್ಲಿ ಪೂಜೆ
ರಾಮನಿಗೆ ಅಮೆರಿಕದಲ್ಲಿ ಪೂಜೆ

ರಾಮನಿಗೆ ವಿಶೇಷ ಪೂಜೆ

ಹುಬ್ಬಳ್ಳಿ :ಅಯೋಧ್ಯೆಯಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ ವಿದೇಶದಲ್ಲಿಯೂ ರಾಮೋತ್ಸವ, ಹಬ್ಬದ ವಾತಾವರಣ ಮನೆ ಮಾಡಿದೆ. ಅಮೆರಿಕದಲ್ಲಿ ಧಾರವಾಡ ಜಿಲ್ಲೆಯ ದಂಪತಿ ಮನೆಯಲ್ಲಿಯೇ ರಾಮ ಮಂಟಪವನ್ನು ನಿರ್ಮಿಸಿ ಪೂಜೆ ಸಲ್ಲಿಸಿದ್ದಾರೆ. ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಮಣಕವಾಡ ಗ್ರಾಮದ ಶಶಿಧರ್ ಚಾಕಲಬ್ಬಿ, ಪತ್ನಿ ಸಾನ್ವಿ ಚಾಕಲಬ್ಬಿ ಅವರು ಅಮೆರಿಕದ ಸ್ಯಾಂಡಿಯಾಗೋದಲ್ಲಿ ವಾಸವಾಗಿರುವ ಅನಿವಾಸಿ ಭಾರತೀಯರು.

ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ವೇಳೆಯೇ ಈ ದಂಪತಿ ಅಮೆರಿಕದಲ್ಲಿ ಮಂಟಪದಲ್ಲಿ ಶ್ರೀರಾಮನಿಗೆ ಪೂಜೆ ಸಲ್ಲಿಸಿ, ಭಕ್ತಿ ಸಮರ್ಪಿಸಿದ್ದಾರೆ. ಕಳೆದ 5 ವರ್ಷಗಳಿಂದ ಈ ದಂಪತಿ ಸಾಫ್ಟ್‌ವೇರ್ ಇಂಜಿನಿಯರ್‌ ಆಗಿ ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದಾರೆ. ಶಶಿಧರ್ ಚಾಕಲಬ್ಬಿ ಮಂಟಪ ನಿರ್ಮಾಣ ಮಾಡಿದ್ದಾರೆ. ಇವರಿಗೆ ಪತ್ನಿ ಸಾನ್ವಿ ಚಾಕಲಬ್ಬಿ ಸಾಥ್ ನೀಡಿದ್ದಾರೆ.

ಇದನ್ನೂ ಓದಿ :ಅಂದು ಕರ ಸೇವೆಗೆ ತೆರಳಿದ್ದಾಗ ಪೊಲೀಸರ ಏಟು; ಇಂದು ಅಯೋಧ್ಯಾ ವೈಭವ ಕಂಡು ಭಾವುಕ

Last Updated : Jan 22, 2024, 3:01 PM IST

ABOUT THE AUTHOR

...view details