Brixton Motorcycles India: ಆಸ್ಟ್ರಿಯನ್ ಬೈಕ್ ತಯಾರಕ ಬ್ರಿಕ್ಸ್‌ಟನ್ ಮೋಟಾರ್‌ಸೈಕಲ್ಸ್ ಭಾರತೀಯ ಮಾರುಕಟ್ಟೆಗೆ ನಾಲ್ಕು ಹೊಸ ಬೈಕ್‌ಗಳನ್ನು ಬಿಡುಗಡೆ ಮಾಡಿದೆ.
ಬೈಕ್‌ಗಳು:
- ಕ್ರಾಸ್‌ಫೈರ್ 500 ಎಕ್ಸ್
- ಕ್ರಾಸ್‌ಫೈರ್ 500 ಎಕ್ಸ್ಸಿ
- ಕ್ರೋಮ್ವೆಲ್ 1200
- ಕ್ರೋಮ್ವೆಲ್ 1200 ಎಕ್ಸ್
ಮುಂದಿನ ವರ್ಷದ ಜನವರಿಯಿಂದ ಕ್ರಾಸ್‌ಫೈರ್ ಮತ್ತು ಕ್ರಾಮ್‌ವೆಲ್ ಸೀರಿಸ್ಗಳ ಡೆಲಿವರಿ ಶುರುವಾಗಲಿದೆ. ಇತರ ಬ್ರಿಕ್ಸ್‌ಟನ್ ಮೋಟಾರ್‌ಸೈಕಲ್‌ಗಳಂತೆ ಭಾರತದಲ್ಲಿ ಬಿಡುಗಡೆಯಾದ ಈ ನಾಲ್ಕು ಮಾಡೆಲ್ಗಳು ನಿಯೋ-ರೆಟ್ರೋ ಡಿಸೈನ್ನೊಂದಿಗೆ ಬರುತ್ತವೆ. ಅವುಗಳಲ್ಲಿ 'ಕ್ರಾಸ್‌ಫೈರ್ 500 ಎಕ್ಸ್' ಕೆಫೆ ರೇಸರ್ ಬೈಕ್ ಸಹ ಒಂದು. ಇನ್ನು 'ಕ್ರೋಮ್‌ವೆಲ್ 1200' ರೋಡ್‌ಸ್ಟರ್ ಬೈಕ್ ಆಗಿದೆ.
ಕ್ರಾಸ್‌ಫೈರ್ 500X, ಕ್ರಾಸ್‌ಫೈರ್ 500XC ಫೀಚರ್ಗಳು: 486cc, ಲಿಕ್ವಿಡ್ ಕೂಲ್ಡ್, ಇನ್‌ಲೈನ್ ಟು ಸಿಲಿಂಡರ್ ಎಂಜಿನ್‌ನಿಂದ ಈ ಬೈಕ್‌ಗಳು ಚಾಲಿತವಾಗಿವೆ. ಈ ಎಂಜಿನ್ 45 bhp ಪವರ್ ಮತ್ತು 43 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಎರಡೂ ಮೋಟಾರ್‌ಸೈಕಲ್‌ಗಳು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಹೊಂದಿವೆ. Brixton Crossfire 500X, Crossfire 500XC ಗಂಟೆಗೆ 160 ಕಿಲೋಮೀಟರ್ ವೇಗ ಹೊಂದಿದೆ.
ಕ್ರಾಸ್‌ಫೈರ್ 500X ಒಂದು ಕೆಫೆ ರೇಸರ್ ಆಗಿದೆ. ಆದರೆ ಕ್ರಾಸ್‌ಫೈರ್ 500XC ಒಂದು ಸ್ಕ್ರಾಂಬ್ಲರ್ ಬೈಕ್ ಆಗಿದೆ. ಕ್ರಾಸ್‌ಫೈರ್ 500X ಮುಂಭಾಗದಲ್ಲಿ USD ಫೋರ್ಕ್‌ಗಳನ್ನು ಮತ್ತು ಹಿಂಭಾಗದಲ್ಲಿ ಸಿಂಗಲ್ ಶಾಕ್ ಅಬ್ಸಾರ್ಬರ್‌ನೊಂದಿಗೆ ಸ್ವಿಂಗರ್ಮ್ ಹೊಂದಿದೆ. ಇಂದು 500XC, ಲಾಂಗ್-ಟ್ರಾವೆಲ್ USD ಫೋರ್ಕ್‌ಗಳನ್ನು ಹೊಂದಿದ್ದು, ಮುಂಭಾಗದಲ್ಲಿ ಅಡ್ಜಸ್ಟಬಲ್ ಪ್ರಿಲೋಡ್ ಮತ್ತು ಹಿಂಬದಿಯಲ್ಲಿ ರಿಬೌಂಡ್ ಡ್ಯಾಂಪಿಂಗ್‌ನೊಂದಿಗೆ ಅಡ್ಜಸ್ಟಬಲ್ ಸಿಂಗಲ್ ಶಾಕ್ ಒಳಗೊಂಡಿದೆ.
ಕ್ರಾಮ್‌ವೆಲ್ 1200, ಕ್ರೋಮ್ವೆಲ್ 1200X ಫೀಚರ್ಗಳು: ಎರಡೂ ಮೋಟಾರ್‌ಸೈಕಲ್‌ಗಳು 1222cc, ಲಿಕ್ವಿಡ್-ಕೂಲ್ಡ್ ಇನ್‌ಲೈನ್-ಫೋರ್ ಎಂಜಿನ್ ಹೊಂದಿವೆ. ಈ ಎಂಜಿನ್ 80 bhp ಪವರ್ ಮತ್ತು 108 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಎರಡೂ ಮೋಟಾರ್‌ಸೈಕಲ್‌ಗಳು 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಬರುತ್ತವೆ. ಈ ಮೋಟಾರ್ ಸೈಕಲ್ಗಳ ಗರಿಷ್ಠ ವೇಗ ಗಂಟೆಗೆ 198 ಕಿಲೋಮೀಟರ್ ಆಗಿದೆ.
ಕ್ರಾಮ್‌ವೆಲ್ 1200, ಕ್ರಾಮ್‌ವೆಲ್ 1200X ಬೈಕ್‌ಗಳು ಮುಂಭಾಗದಲ್ಲಿ KYB ಟೆಲಿಸ್ಕೋಪಿಕ್ ಫೋರ್ಕ್‌ಗಳನ್ನು ಹೊಂದಿವೆ. ಕ್ರೋಮ್‌ವೆಲ್ 1200 ಹಿಂಭಾಗದಲ್ಲಿ KYB ಅಡ್ಜಸ್ಟಬಲ್ ಪ್ರಿಲೋಡ್ ಶಾಕ್ ಅಬ್ಸಾರ್ಬರ್ ಹೊಂದಿದೆ. ಆದರೆ ಕ್ರಾಮ್‌ವೆಲ್ 1200X ಡಬಲ್ ಸ್ಟ್ರಟ್ KYB ಯೊಂದಿಗೆ ಬರುತ್ತದೆ.
- ಕ್ರಾಸ್‌ಫೈರ್ 500X ಬೆಲೆ: ₹4.74 ಲಕ್ಷ (ಎಕ್ಸ್ ಶೋ ರೂಂ)
- ಕ್ರಾಸ್‌ಫೈರ್ 500 XC ಬೆಲೆ: ₹5.19 ಲಕ್ಷ (ಎಕ್ಸ್ ಶೋ ರೂಂ)
- ಕ್ರಾಮ್‌ವೆಲ್ 1200 ಬೆಲೆ: ₹7.83 ಲಕ್ಷ (ಎಕ್ಸ್ ಶೋ ರೂಂ)
- ಕ್ರೋಮ್‌ವೆಲ್ 1200X ಬೆಲೆ: ₹9.10 ಲಕ್ಷ (ಎಕ್ಸ್ ಶೋ ರೂಂ)
ಇದನ್ನೂ ಓದಿ: ಬೆಸ್ಟ್ ಆ್ಯಪ್-2024 ಲಿಸ್ಟ್ ಬಿಡುಗಡೆಗೊಳಿಸಿದ ಗೂಗಲ್: ಭಾರತದ ಈ ಅಪ್ಲಿಕೇಶನ್ ಬೆಸ್ಟ್ ಅಂತೆ!