ಬೆಂಗಳೂರು: ಕ್ರಿಕೆಟಿಗ ರಾಹುಲ್ ದ್ರಾವಿಡ್, ಇನ್ಫೊಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ, ಸುಧಾಮೂರ್ತಿ ಸೇರಿದಂತೆ ನಟ ಗಣೇಶ್ ಅವರು ಮತದಾನ ನಡೆಸಿದರು.
ಮತ ಚಲಾವಣೆ ನಮ್ಮ ಸಂವಿಧಾನಿಕ ಹಕ್ಕು: ಬೆಂಗಳೂರಿನಲ್ಲಿ ಮೊದಲಿಗರಾಗಿ ಟೀಂ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಕುಟುಂಬ ಸಮೇತ ಆಗಮಿಸಿ ಮಲ್ಲೇಶ್ವರಂ ಶಿಕ್ಷಾ ಸ್ಕೂಲ್ ಮತಗಟ್ಟೆಯಲ್ಲಿ ಮತದಾನ ಮಾಡಿದ್ದಾರೆ. ಪತ್ನಿ ಮತ್ತು ಮಗನ ಜೊತೆ ಆಗಮಿಸಿದ ರಾಹುಲ್ ದ್ರಾವಿಡ್ ಮತ ಚಲಾಯಿಸಿದರು. ಬಳಿಕ ಮಾತನಾಡಿದ ಅವರು ' ದಯವಿಟ್ಟು ಎಲ್ಲರೂ ಮತದಾನ ಮಾಡಿ. ಪ್ರಜಾಪ್ರಭುತ್ವ ಮುಂದೆ ತರುವ ಅವಕಾಶ ಇದು. ಮತ ಚಲಾವಣೆ ನಮ್ಮ ಸಾಂವಿಧಾನಿಕ ಹಕ್ಕಾಗಿದ್ದು, ಹಕ್ಕು ಚಲಾಯಿಸಲು ಎಲ್ಲರೂ ಮನೆಯಿಂದ ಹೊರ ಬನ್ನಿ. ಮತದಾನಕ್ಕಾಗಿ ಚುನಾವಣಾ ಆಯೋಗ ಸಿದ್ಧತೆ, ವ್ಯವಸ್ಥೆಯನ್ನು ಉತ್ತಮವಾಗಿ ಮಾಡಿದೆ. ಹಾಗಾಗಿ ಯುವ ಜನತೆ ತಪ್ಪದೇ ಮತದಾನ ಮಾಡಿ ಎಂದು ಮನವಿ ಮಾಡಿದರು.
ಜಯನಗರ ಟಿ ಬ್ಲಾಕ್ ನ ಮತಗಟ್ಟೆಯಲ್ಲಿ ಮತದಾನ ನಡೆಸಿ ತಮ್ಮ ಮತ ಹಕ್ಕು ಚಲಾಯಿಸಿದರು. ಇದೇ ವೇಳೆ ಮಾತನಾಡಿದ ಸುಧಾಮೂರ್ತಿ, ಊರಿಗೆ ಹೋಗಬೇಕಿತ್ತು ಅದಕ್ಕೆ ಬೇಗ ಬಂದ್ವಿ. ಮತದಾನ ಶ್ರೇಷ್ಠ ದಾನ. ಎಲ್ಲರಿಗೂ ಹೇಳುತ್ತಿದ್ದೇನೆ ಮತದಾನ ಮಾಡಿ ಅಂತ ಮನವಿ ಮಾಡಿದರು. ಯುವ ಸಮೂಹ ಮತ ಹಾಕಲು ಮುಂದೆ ಬರಬೇಕು. ಮತದಾನ ಮಾಡಿ ಅಭಿಪ್ರಾಯ ತಿಳಿಸಬೇಕು. ಹೆಚ್ಚೆಚ್ಚು ಜನ ಮತದಾನ ಮಾಡಬೇಕು. ನಮ್ಮಂತಹ ಹಿರಿಯರು ಕ್ಯೂ ನಲ್ಲಿ ನಿಂತು ಮತದಾನ ಮಾಡ್ತಾರೆ. ಯುವಕರು ಕೂಡ ಮಾಡಬೇಕು ಎಂದು ಮನವಿ ಮಾಡಿದರು.