ಚಿಕ್ಕಮಗಳೂರು: ದಾರಿ ಪಕ್ಕ ಮೇಯುತಿದ್ದ ಕುರಿಗಳ ಕಳ್ಳತನಕ್ಕೆ ಯತ್ನಿಸಿದ ತಂಡವೊಂದನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ, ಕೊಟ್ಟಿಗೆಹಾರ ಸಮೀಪದ ಅತ್ತಿಗೆರೆಯಲ್ಲಿ ನಡೆದಿದೆ. ಖದೀಮರು ಕಾರಿನಲ್ಲಿ ಐದು ಕುರಿಗಳನ್ನು ಕದ್ದೊಯ್ಯೊತ್ತಿದ್ದರು. ಇದನ್ನು ಗಮನಿಸಿದ ಸ್ಥಳೀಯರು ಚೇಸ್ ಮಾಡಿ ಹಿಡಿದಿದ್ದಾರೆ.
ಕುರಿ ಕಳ್ಳತನ ಮಾಡಿ ಕಾರಿನಲ್ಲಿ ತುಂಬಿಕೊಂಡು ಹೋಗುತ್ತಿದ್ದವರನ್ನು ಚೇಸ್ ಮಾಡಿ ಹಿಡಿದ ಸಾರ್ವಜನಿಕರು - Steal Sheep In Chikkamagaluru
ಕುರಿ ಕಳ್ಳತನಕ್ಕೆ ಯತ್ನಿಸಿದ ತಂಡವೊಂದನ್ನು ಜನರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
Published : Mar 20, 2024, 8:08 PM IST
ಅತ್ತಿಗೆರೆಯ ಮಹ್ಮದ್ ಎಂಬುವರಿಗೆ ಸೇರಿದ ಕುರಿಗಳು ಇವಾಗಿದ್ದು, ಭದ್ರಾವತಿ ಮೂಲದ ಜಬೀವುಲ್ಲಾ ಮುಂದಾಳತ್ವದ ತಂಡ ಅವುಗಳನ್ನು ಕಳ್ಳತನಕ್ಕೆ ಯತ್ನಿಸಿತ್ತು. ಈ ವಿಚಾರ ತಿಳಿದು ಚೇಸ್ ಮಾಡಿ ಕಾರು ಅಡ್ಡಗಟ್ಟಿದ ಸ್ಥಳೀಯರು, ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಕಾರಿನಿಂದ ಇಳಿಸಿ ಧರ್ಮದೇಟು ನೀಡಿದ್ದಾರೆ. ಈ ವೇಳೆ ಕಾರಿನ ಗಾಜುಗಳಿಗೆ ಹಾನಿಯಾಗಿವೆ. ಬಣಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಕುರಿಗಳ ಮಾಲೀಕರು ನೀಡಿದ ದೂರು ಪ್ರಕಾರ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ.
ಇದನ್ನೂ ಓದಿ:ಉಂಡ ಮನೆಗೆ ಕನ್ನ ಬಗೆದ ಇಬ್ಬರು ಆರೋಪಿಗಳ ಬಂಧನ: ಜ್ಯೂವೆಲ್ಲರಿ ಶಾಪ್ನಲ್ಲಿ ಕಳ್ಳತನ ಮಾಡುತ್ತಿದ್ದ ಚೋರರು ಅಂದರ್