ಕರ್ನಾಟಕ

karnataka

ETV Bharat / state

ಚಿಕ್ಕಮಗಳೂರು: ಸರ್ಕಾರಿ ಕಚೇರಿಗಳಲ್ಲಿ ಪ್ರಿಂಟರ್ ದೋಚುತ್ತಿದ್ದ ಖದೀಮ ಸೆರೆ - PRINTER THEFT CASE - PRINTER THEFT CASE

ಸರ್ಕಾರಿ ಕಚೇರಿ, ಹಾಸ್ಟೆಲ್​ಗಳಲ್ಲಿ ಪ್ರಿಂಟರ್ ಕದಿಯುತ್ತಿದ್ದ ಆರೋಪಿಯನ್ನು ಕಡೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 6.30 ಲಕ್ಷ ಮೌಲ್ಯದ 79ಕ್ಕೂ ಹೆಚ್ಚು ಪ್ರಿಂಟರ್​ಗಳನ್ನು ವಶಕ್ಕೆ ಪಡೆಯಲಾಗಿದೆ.

ಸರ್ಕಾರಿ ಕಚೇರಿಗಳಲ್ಲಿ ಪ್ರಿಂಟರ್ ದೋಚುತ್ತಿದ್ದ ಕಳ್ಳ ಸೆರೆ
ಸರ್ಕಾರಿ ಕಚೇರಿಗಳಲ್ಲಿ ಪ್ರಿಂಟರ್ ದೋಚುತ್ತಿದ್ದ ಕಳ್ಳ ಸೆರೆ (ETV Bharat)

By ETV Bharat Karnataka Team

Published : Jun 30, 2024, 8:40 PM IST

ಚಿಕ್ಕಮಗಳೂರು: ಸರ್ಕಾರಿ ಕಚೇರಿ, ಹಾಸ್ಟೆಲ್​ಗಳಲ್ಲಿ ಪ್ರಿಂಟರ್ ಕದಿಯುತ್ತಿದ್ದ ಖತರ್ನಾಕ್​ ಆಸಾಮಿಯನ್ನು ಕಡೂರು ಪೊಲೀಸರು ಬಂಧಿಸಿದ್ದಾರೆ. ಆಕಾಶ್ ಬಂಧನ ಆರೋಪಿ. ಬಂಧಿತನಿಂದ 6.30 ಲಕ್ಷ ಮೌಲ್ಯದ 79ಕ್ಕೂ ಹೆಚ್ಚು ಪ್ರಿಂಟರ್​ಗಳನ್ನು ವಶಕ್ಕೆ ಪಡೆಯಲಾಗಿದೆ.

ತುರುವೇಕೆರೆಯ ಅಮ್ಮಸಂದ್ರದಲ್ಲಿ ಡೇಟಾ ಎಂಟ್ರಿ ಆಪರೇಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಆಕಾಶ್, ಕಡೂರಿನ ಮೆಸ್ಕಾಂ ಕಚೇರಿ, ಬಾಲಕಿಯರ ಕಾಲೇಜು, ತಿಪಟೂರು, ಶ್ರೀರಂಗಪಟ್ಟಣ, ತುಮಕೂರು, ಸೇರಿದಂತೆ ರಾಜ್ಯದ ಹಲವೆಡೆ ತನ್ನ ಕೈಚಳಕ ತೋರಿಸಿದ್ದ. ಬೆಳಗ್ಗೆ ಸರ್ಕಾರಿ ಕಚೇರಿಗಳಲ್ಲಿ ಕಸ ಗುಡಿಸುವ ಸಮಯದಲ್ಲೇ ಕಳ್ಳತನ ಮಾಡುತ್ತಿದ್ದ. ಕಳ್ಳತನ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ವಿವಿಧ ಪ್ರಕರಣಗಳಲ್ಲಿ ಆರೋಪಿ ಆಕಾಶ್ ಹಲವು ಜಿಲ್ಲೆಗಳ ಪೊಲೀಸರಿಗೆ ಬೇಕಾಗಿದ್ದ. ಈಗ ಕಡೂರು ಪೊಲೀಸರ ಅತಿಥಿಯಾಗಿದ್ದಾನೆ.

ಇದನ್ನೂ ಓದಿ:ಉಡುಪಿ: ಬಾವಿಗೆ ಬಿದ್ದು ಮಕ್ಕಳಿಬ್ಬರು ಸಾವು, ತಾಯಿ ಸ್ಥಿತಿ ಗಂಭೀರ - Two children died

ABOUT THE AUTHOR

...view details