ಕರ್ನಾಟಕ

karnataka

ETV Bharat / state

ಪ್ರಜ್ವಲ್​ ವಿದೇಶಕ್ಕೆ ಹೋಗುವ ಮೊದ್ಲು ಇವರೇನು ಕತ್ತೆ ಕಾಯ್ತಿದ್ರಾ?: ಪ್ರಹ್ಲಾದ್ ಜೋಶಿ - Pralhad Joshi

ಪ್ರಜ್ವಲ್​ ರೇವಣ್ಣ ವಿದೇಶಕ್ಕೆ ಹೋಗುವ ಮುನ್ನ ಪೆನ್​ಡ್ರೈವ್​ ವಿಡಿಯೋ ಹೊರಬಿದ್ದಿತ್ತು. ಅಲ್ಲಿಯವರೆಗೆ ಸರ್ಕಾರ ಏನು ಮಾಡುತ್ತಿತ್ತು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರಶ್ನಿಸಿದ್ದಾರೆ.

ಸಚಿವ ಪ್ರಹ್ಲಾದ್ ಜೋಶಿ
ಸಚಿವ ಪ್ರಹ್ಲಾದ್ ಜೋಶಿ (ETV Bharat)

By ETV Bharat Karnataka Team

Published : May 24, 2024, 9:36 AM IST

ಪ್ರಹ್ಲಾದ್ ಜೋಶಿ (ETV Bharat)

ಕಲಬುರಗಿ:ಪ್ರಜ್ವಲ್​ ರೇವಣ್ಣ ಪಾಸ್‌ಪೋರ್ಟ್​ ರದ್ಧತಿಗಾಗಿ ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಎರಡನೇ ಬಾರಿ ಪತ್ರ ಬರೆದ ವಿಚಾರವಾಗಿ ಕಲಬುರಗಿ ಏರ್‌ಪೋರ್ಟ್‌ನಲ್ಲಿ ಗುರುವಾರ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯಿಸಿದರು. ಕಲಬುರಗಿಯಲ್ಲಿ ಈಶಾನ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ್​ ಪರ ಮತಯಾಚಿಸಲು ಸಚಿವರು ಬಂದಿದ್ದರು.

"ಪ್ರಜ್ವಲ್​ ರೇವಣ್ಣ ಪೆನ್ ಡ್ರೈವ್ ಹೊರಬಂದಿದ್ದು ಏಪ್ರಿಲ್ 21ರಂದು. ಅವರು ವಿದೇಶಕ್ಕೆ ಹೋಗಿದ್ದು ಏ.27ರಂದು. ಹಾಗಾದರೆ ಅಲ್ಲಿಯವರೆಗೆ ಇವರೇನು ಕತ್ತೆ ಕಾಯುತ್ತಿದ್ದರಾ?. ಪಾಸ್‌ಪೋರ್ಟ್​ ರದ್ದುಪಡಿಸಲು ಅದರದೇ ಆದ ಪ್ರಕ್ರಿಯೆಗಳಿವೆ. ಡಿಪ್ಲೋಮ್ಯಾಟ್ ಪಾಸ್‌ಪೋರ್ಟ್ ರದ್ದತಿಗೆ ನ್ಯಾಯಾಲಯದಲ್ಲಿ ಕೇಸ್ ಫೈಲ್ ಮಾಡಲಾಗಿದೆ. ಹೊರದೇಶಕ್ಕೆ ಹೋದವರನ್ನು ತರುವುದಕ್ಕೆ ಅದರದೇ ಆದ ಪ್ರೊಸೆಸ್ ಇದೆ. ಭಾರತ ಸರಕಾರ ಕಾನೂನು ಪ್ರಕಾರ ಏನು ಮಾಡಬೇಕೋ ಮಾಡುತ್ತಿದೆ. ರಾಜ್ಯ ಸರಕಾರಕ್ಕೆ ಸಹಕಾರ ನೀಡಲು ತಯಾರಿದೆ. ಇವರು ಪತ್ರ ಬರೆದ ತಕ್ಷಣ ಪಾಸ್‌ಪೋರ್ಟ್‌ ರದ್ದು ಆಗಬೇಕು ಅಂತಲ್ಲ, ಇದನ್ನು ಬಿಜೆಪಿ ಮೇಲೆ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ನಾನು ಕೇಳುವ ಪ್ರಶ್ನೆಗೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್​, ಜಿ.ಪರಮೇಶ್ವರ್​ ಅವರಿಗೆ ಇದುವರೆಗೂ ಉತ್ತರ ಕೊಡಲು ಆಗುತ್ತಿಲ್ಲ. ಒಕ್ಕಲಿಗ ಸಮುದಾಯದ ಓಟ್ ಮೇಲೆ ಕಣ್ಣಿಟ್ಟು ಅಲ್ಲಿ ಚುನಾವಣೆ ಮುಗಿಯುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ.ಇದು ಅತ್ಯಂತ ಗಂಭೀರ ಪ್ರಕರಣ. ಪ್ರಜ್ವಲ್ ವಿಚಾರಣೆ ಎದುರಿಸಲೇಬೇಕು. ಅವರು ತಪ್ಪು ಮಾಡಿದ್ದೇ ಆಗಿದ್ದರೆ ಕಠಿಣ ಕ್ರಮ ಆಗಲೇಬೇಕು. ಇದರಲ್ಲಿ ಯಾವುದೇ ಅನುಕಂಪ ಇಲ್ಲ. ಕರ್ನಾಟಕ ಸರಕಾರ ಇದರಲ್ಲಿ ತನಿಖೆಗಿಂತ ಹೆಚ್ಚು ರಾಜಕಾರಣ ಮಾಡಹೊರಟಿದೆ"- ಪ್ರಹ್ಲಾದ್ ಜೋಶಿ

ಇದನ್ನೂ ಓದಿ:ಪ್ರಜ್ವಲ್​ನನ್ನು ಕಳುಹಿಸಿರುವುದು ಅವರೇ ಅಲ್ವಾ?: ದೇವೇಗೌಡರ ಪತ್ರದ ಬಗ್ಗೆ ಸಿದ್ದರಾಮಯ್ಯ ಪ್ರತಿಕ್ರಿಯೆ - CM REACTION ON DEVE GOWDA LETTER

ABOUT THE AUTHOR

...view details