ಕರ್ನಾಟಕ

karnataka

ETV Bharat / state

ದಿಂಗಾಲೇಶ್ವರ ಶ್ರೀಗಳ ಆಶೀರ್ವಾದದಿಂದ ನಾನು ಗೆದ್ದಿದ್ದೇನೆ : ಪ್ರಹ್ಲಾದ್ ಜೋಶಿ - Pralhad Joshi - PRALHAD JOSHI

ಜನತಾ ಜನಾರ್ದನನ ಆಶೀರ್ವಾದದಿಂದ ನನಗೆ ಗೆಲುವಾಗಿದೆ ಎಂದು ಧಾರವಾಡ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್​ ಜೋಶಿ ಹೇಳಿದರು.

ಪ್ರಹ್ಲಾದ್ ಜೋಶಿ
ಪ್ರಹ್ಲಾದ್ ಜೋಶಿ (ETV Bharat)

By ETV Bharat Karnataka Team

Published : Jun 4, 2024, 9:29 PM IST

Updated : Jun 5, 2024, 7:43 AM IST

ಪ್ರಹ್ಲಾದ್ ಜೋಶಿ (ETV Bharat)

ಧಾರವಾಡ: ಈ ಕ್ಷೇತ್ರದಲ್ಲಿ ಕಾಂಗ್ರೆಸ್​ ಅಪಪ್ರಚಾರದ ಪರಾಕಾಷ್ಠೆ ಮುಟ್ಟಿತ್ತು. ಅವರು ಪ್ರಚಾರ ಮಾಡುವುದನ್ನು ಬಿಟ್ಟು ಕೇವಲ ಅಪಪ್ರಚಾರದಲ್ಲೇ ತೊಡಗಿದ್ದರು. ದೇಶ ಮತ್ತು ಕ್ಷೇತ್ರದಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆ ಮಾಡುತ್ತಿರಲಿಲ್ಲ. ಸಾಕಷ್ಟು ಹಣ, ಹೆಂಡವನ್ನು ಕಾಂಗ್ರೆಸ್​ ಪಕ್ಷದವರು ಹಂಚಿದರೂ ಜನ ನನ್ನ ಕೈ ಹಿಡಿದಿದ್ದಾರೆ ಎಂದು ಬಿಜೆಪಿ ವಿಜೇತ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಇಂದು ಮತ ಎಣಿಕಾ ಕೇಂದ್ರದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಕ್ಷೇತ್ರದ ಜನತೆಗೆ ಧನ್ಯವಾದ ಸಲ್ಲಿಸುತ್ತೇನೆ. ಜನತಾ ಜನಾರ್ದನನ ಆಶೀರ್ವಾದದಿಂದ ಗೆಲುವು ಸಿಕ್ಕಿದೆ. ಮತದಾರ ಪ್ರಭುಗಳಿಗೆ ಈ ಗೆಲುವು ಸಲ್ಲಬೇಕು. ಎಲ್ಲ ಕಾರ್ಯಕರ್ತರು, ಮುಖಂಡರು ಸೇರಿ ಸಮರ್ಪಕವಾಗಿ ಕೆಲಸ ಮಾಡಿದ್ದಾರೆ. ರಾಜ್ಯದ ಜನತೆ ಬಿಜೆಪಿ ಕೈ ಹಿಡಿದಿದ್ದಾರೆ. ದೇಶದಲ್ಲಿ ನಮಗೆ ಸ್ಥಾನಗಳು ಕಡಿಮೆಯಾಗಿವೆ. ಆದರೆ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಎಂದರು.

ನಿರೀಕ್ಷೆಗೆ ತಕ್ಕಂತೆ ಸೀಟು ಬಂದಿಲ್ಲ. ಎಲ್ಲಿ ಏನಾಗಿದೆ ಎಂಬ ವಾಸ್ತವವನ್ನು ನೋಡಬೇಕಾಗಿದೆ. ಆದಷ್ಟು ಶೀಘ್ರವೇ ದೆಹಲಿಗೆ ತೆರಳುತ್ತೇನೆ. ಈ ಬಗ್ಗೆ ವರಿಷ್ಠರ ಜೊತೆಗೆ ಚರ್ಚಿಸುತ್ತೇನೆ. ದೇಶದಲ್ಲಿ ಚುನಾವಣೆ ಆಗಿದ್ದು ಎನ್‌ಡಿಎ ಹಾಗೂ 'ಇಂಡಿ' ಮೈತ್ರಿ ಮಧ್ಯೆ. ಆದ್ದರಿಂದ ನಮ್ಮ ಜೊತೆಗೆ ನಿಂತವರು ಗಟ್ಟಿಯಾಗಿ ನಿಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಧಾರವಾಡದಲ್ಲಿ ಈ ಬಾರಿ ಗೆಲುವಿನ ಅಂತರ ಕಡಿಮೆ ಆಗಿರುವ ಬಗ್ಗೆ ಪ್ರತಿಕ್ರಿಯಿಸಿ, ಪರ್ಸೆಂಟೇಜ್ ವೋಟ್​ಗಳು ಕಡಿಮೆಯಾಗಿರುವ ಕಾರಣ ಲೀಡ್ ಕಡಿಮೆ ಆಗಿದೆ. ಈಗಾಗಲೇ ನಾವು ಕೈಗೊಂಡಿರುವ ಕಾಮಗಾರಿಗಳ ಮುಂದುವರೆಸಿಕೊಂಡು ಹೋಗುತ್ತೇವೆ. ನನ್ನ ಖಾತೆಯನ್ನು ಸರಿಯಾಗಿ ನಿಭಾಯಿಸಿದ್ದೇನೆ. ಐದು ವರ್ಷ ನನಗೆ ಮಂತ್ರಿಯಾಗಲು ಪ್ರಧಾನಿ ಮೋದಿಯವರು ಅವಕಾಶ ಮಾಡಿಕೊಟ್ಟಿದ್ದಾರೆ ಎಂದ ಅವರು, ದಿಂಗಾಲೇಶ್ವರ ಶ್ರೀಗಳ ಆಶೀರ್ವಾದದಿಂದ ನಾನು ಗೆದ್ದಿದ್ದೇನೆ ಎಂದು ಹೇಳಿದರು.

ಇದನ್ನೂ ಓದಿ:ಉತ್ತರ ಕನ್ನಡದಲ್ಲಿ ವರ್ಕೌಟ್ ಆಗದ ಕಾಂಗ್ರೆಸ್ ಪ್ಲ್ಯಾನ್: ಮೊದಲ ಯತ್ನದಲ್ಲೇ ಕಾಗೇರಿಗೆ ದಾಖಲೆಯ ಗೆಲುವು - Vishveshwara Hegade Kageri

Last Updated : Jun 5, 2024, 7:43 AM IST

ABOUT THE AUTHOR

...view details