ಕೋಲಾರ:ತಾಲ್ಲೂಕಿನ ಬೆಗ್ಲಿಬೆಣಜೇನಹಳ್ಳಿ ಗ್ರಾಮದಲ್ಲಿ ಬಾರ್ಗೆ ಅನುಮತಿ ನೀಡಿದ್ದನ್ನು ಖಂಡಿಸಿ ಮತದಾನ ಬಹಿಷ್ಕರಿಸಲಾಗಿತ್ತು. ಮತದಾನ ಸಮಯ ಕಳೆದ್ರೂ ಸಹ ಮತಗಟ್ಟೆ ಸಂಖ್ಯೆ 249ಗೆ ಏಜೆಂಟರು ಹಾಗೂ ಮತದಾರರು ಯಾರೂ ಸುಳಿಯುತ್ತಿರಲಿಲ್ಲ. ಬಾರ್ ಸ್ಥಳಾಂತರ ಮಾಡುವ ಭರವಸೆ ನೀಡಿದ ನಂತರ ಮತದಾನ ಮಾಡುವುದಾಗಿ ಗ್ರಾಮಸ್ಥರು ಪಟ್ಟು ಹಿಡಿದಿದ್ದರು.
ಇನ್ನು ಮತದಾನ ಬಹಿಷ್ಕರಿಸಿ ಪ್ರತಿಭಟನೆ ಕೈಗೊಂಡಿರುವ ಮಾಹಿತಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ತಿಳಿದಿತ್ತು. ಕೂಡಲೇ ಗ್ರಾಮದ ಕಡೆ ಸುಳಿದ ಅಧಿಕಾರಿಗಳು ಮದ್ಯದಂಗಡಿ ಶಿಫ್ಟ್ ಮಾಡುವ ಭರವಸೆ ನೀಡಿದರು. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಮನವಿಗೆ ಸ್ಪಂದಿಸಿದ ಗ್ರಾಮಸ್ಥರು ಮತದಾನ ಮಾಡಲು ಮುಂದಾದರು.