ಹುಬ್ಬಳ್ಳಿ:ತಾನುಪ್ರೀತಿಸುತ್ತಿದ್ದ ಯುವತಿಯ ತಾಯಿಗೆ ಯುವಕನೊಬ್ಬ ಚಾಕುವಿನಿಂದ ಇರಿದು ಗಾಯಗೊಳಿಸಿ ಪರಾರಿಯಾಗಿದ್ದ ಘಟನೆ ಬುಧವಾರ ಹುಬ್ಬಳ್ಳಿಯಲ್ಲಿ ನಡೆದಿದೆ. ಇದೀಗ ಆರೋಪಿಯ ಕಾಲಿಗೆ ಹುಬ್ಬಳ್ಳಿ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. ಮಹೇಶ್ (24) ಬಂಧಿತ ಆರೋಪಿ.
ಪ್ರೀತಿಸುತ್ತಿದ್ದ ಯುವತಿಯ ತಾಯಿಗೆ ಇರಿದು ಪರಾರಿಯಾದ ಕಿಡಿಗೇಡಿ ಪ್ರೇಮಿಗೆ ಗುಂಡೇಟು - Police Shot At Accused - POLICE SHOT AT ACCUSED
ತಾನು ಪ್ರೀತಿಸುತ್ತಿದ್ದ ಯುವತಿಯ ತಾಯಿಗೆ ಚೂರಿಯಿಂದ ಇರಿದು ಪರಾರಿಯಾಗಿದ್ದ ಯುವಕನ ಕಾಲಿಗೆ ಹುಬ್ಬಳ್ಳಿ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.
Published : Sep 26, 2024, 11:21 AM IST
|Updated : Sep 26, 2024, 12:11 PM IST
ಈ ಕುರಿತು ಮಾತನಾಡಿದ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್, "ಗಾಯಗೊಂಡಿರುವ ಮಹಿಳೆ ನೀಲಾ ಎಂಬವರ ಮಗಳಿಗೆ ಆರೋಪಿ ಮಹೇಶ್, ತನ್ನನ್ನು ಮದುವೆಯಾಗು, ಪ್ರೀತಿಸು ಎಂದು ಐದು ವರ್ಷಗಳಿಂದ ಬಲವಂತ ಮಾಡುತ್ತಿದ್ದ. ಇಂದು(ನಿನ್ನೆ) ಲೋಹಿಯಾನಗರದ ನಿವಾಸಕ್ಕೆ ಬಂದು ಮತ್ತೆ ಮನೆಯವರೆದುರು ಜಗಳ ಮಾಡಿದ್ದಾನೆ. ಈ ವೇಳೆ ಯುವತಿಯ ತಾಯಿ ನೀಲಾ ಅವರಿಗೆ ಚಾಕುವಿನಿಂದ ಇರಿದಿದ್ದಾನೆ. ಮನೆಯಲ್ಲಿದ್ದ ಇತರ ಸದಸ್ಯರ ಮೇಲೂ ಹಲ್ಲೆಗೆ ಯತ್ನಿಸಿದ್ದಾನೆ. ತಕ್ಷಣ ಅಲ್ಲಿಂದ ಪರಾರಿಯಾಗಿದ್ದ ಆರೋಪಿಯನ್ನು ಹಳೆ ಹುಬ್ಬಳ್ಳಿ ಠಾಣೆ ಪೊಲೀಸರು ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದೆ" ಎಂದು ತಿಳಿಸಿದರು.
ಇದನ್ನೂ ಓದಿ:ಹುನಗುಂದ ಬಳಿ ಕ್ಯಾಂಟರ್-ಕಾರು ಡಿಕ್ಕಿ: ನಾಲ್ವರು ದುರ್ಮರಣ - Hunagunda Accident